ಎಡ್ಜ್‌ಬಾಸ್ಟನ್ ಟೆಸ್ಟ್: ದಿಢೀರ್ ಕುಸಿತ ಕಂಡ ಇಂಗ್ಲೆಂಡ್ -6ನೇ ವಿಕೆಟ್ ಪತನ

By Suvarna NewsFirst Published Aug 1, 2018, 9:43 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಹೋರಾಟ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೊದಲ ದಿನದ ಹೋರಾಟ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್

ಎಡ್ಜ್‌ಬಾಸ್ಟನ್(ಆ.01): ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ ಹಾಗೂ ಜಾನಿ ಬೈರಿಸ್ಟೋ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದ ಇಂಗ್ಲೆಂಡ್ ದಿಢೀರ್ ಕುಸಿತು ಕಂಡಿದೆ. ಈ ಮೂಲಕ 6ನೇ ವಿಕೆಟ್ ಪತನಗೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ ಹಿರಿಯ ಬ್ಯಾಟ್ಸ್‌ಮನ್ ಆಲಿಸ್ಟೈರ್ ಕುಕ್ ವಿಕೆಟ್ ಕಳೆದುಕೊಂಡಿತು. ಕುಕ್ ವಿಕೆಟ್ ಕಬಳಿಸಿದ ಆರ್ ಅಶ್ವಿನ್ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದರು. ಮೊದಲ ವಿಕೆಟ್ ಪತನದ ನಂತರ ಇಂಗ್ಲೆಂಡ್ ತಂಡ ಚೇತರಿಕೆ ಕಂಡಿತು. ಕೇಟನ್ ಜೆನ್ನಿಂಗ್ಸ್ ಹಾಗೂ ನಾಯಕ ಜೋ ರೂಟ್ 72 ರನ್ ಜೊತೆಯಾಟ ನೀಡಿದರು. 42 ರನ್ ಸಿಡಿಸಿ ಅರ್ಧಶತದತ್ತ ಮುನ್ನಗ್ಗುತ್ತಿದ್ದ ಜೆನ್ನಿಂಗ್ಸ್, ಮೊಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಡೇವಿಡ್ ಮಲಾನ್ ಕೇವಲ 8 ರನ್‌ಗಳಿಸಿ ಔಟಾದರು.

ನಾಯಕ ಜೋ ರೂಟ್ ಹಾಗೂ ಜಾನಿ ಬೈರಿಸ್ಟೋ ಜೊತೆಯಾಟದಿಂದ ಇಂಗ್ಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಜೋ ರೂಟ್ 40 ರನ್ ಪೂರೈಸುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿ ದಾಖಲೆ ಬರೆದರು.

ಜೋ ರೂಟ್ ಹಾಗೂ ಬೈರಿಸ್ಟೋ ಅರ್ಧಶತಕದಿಂದ ಭಾರತ ಬೌಲರ್‌ಗಳು ಸುಸ್ತಾದರು. ಸೆಂಚುರಿಯತ್ತ ಸಾಗುತ್ತಿದ್ದ ಜೋ ರೂಟ್ 80  ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಇಂಗ್ಲೆಂಡ್ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡಿತು. 

ರೂಟ್ ಬೆನ್ನಲ್ಲೇ, ಜಾನಿ ಬೈರಿಸ್ಟೋ 70 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ಡಕೌಟ್ ಆದರು. ಹೀಗಾಗಿ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡಿತು. ಸದ್ಯ ಬೆನ್ ಸ್ಟೋಕ್ಸ್ ಹಾಗೂ ಸ್ಯಾಮ್ ಕುರ್ರನ್ ಆಸರೆಯಾಗಿದ್ದಾರೆ.
 

click me!