3ನೇ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟಿಸಿದ ಇಂಗ್ಲೆಂಡ್-ಗೆಲುವಿನ ರೂವಾರಿ ಔಟ್!

By Web DeskFirst Published Aug 17, 2018, 6:31 PM IST
Highlights

ಟೆಸ್ಟ್ ಪಂದ್ಯಕ್ಕೂ ಮುಂದಿನ ದಿನವ ಆಡೋ ಹನ್ನೊಂದರ ಬಳಗ ಪ್ರಕಟಿಸೋ ಇಂಗ್ಲೆಂಡ್ ತನ್ನ ಸಂಪ್ರದಾಯ ಮುಂದುವರಿಸಿದೆ. ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಇದೀಗ ತಂಡವನ್ನ ಪ್ರಕಟಿಸಿದೆ. ಇಂಗ್ಲೆಂಡ್ ತಂಡದಲ್ಲಿ ಒಂದು ದುಬಾರಿ ಬದಲಾವಣೆ ಮಾಡಲಾಗಿದೆ.

ಲಂಡನ್(ಆ.17): ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಆಡೋ 11ರ ಬಳಗ ಪ್ರಕಟಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸ್ಯಾಮ್ ಕುರ್ರನ್‌ಗೆ ಗೇಟ್ ಪಾಸ್ ನೀಡಲಾಗಿದೆ.

ತಂಡ ಪ್ರಕಟಿಸಿದ ಇಂಗ್ಲೆಂಡ್ ಕುರ್ರನ್ ಬದಲು, ಬೆನ್ ಸ್ಟೋಕ್ಸ್‌ಗೆ ಅವಕಾಶ ನೀಡಿದೆ. ಈ ಮೂಲಕ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಬಾರ್‌ನಲ್ಲಿ ಗಲಾಟೆ ಮಾಡಿದ ಆರೋಪ ಹೊತ್ತಿದ್ದ ಸ್ಟೋಕ್ಸ್   ವಿಚಾರಣೆಯಿಂದಾಗಿ  ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಸ್ಟೋಕ್ಸ್ ಆರೋಪಗಳಿಂದು ಮುಕ್ತಾರಾಗಿದ್ದು, ಇದೀಗ ತಂಡಕ್ಕೆ ವಾಪಾಸ್ ಆಗಿದ್ದಾರೆ. 

 

🚨 BREAKING NEWS 🚨

We have named our team for the third Specsavers Test against India.

➡️ https://t.co/5AkicO5g8Z pic.twitter.com/ASC8AZwp8H

— England Cricket (@englandcricket)

 

ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ),ಆಲಿಸ್ಟೈರ್ ಕುಕ್, ಕೆಟನ್ ಜೆನ್ನಿಂಗ್ಸ್, ಒಲ್ಲಿ ಪೋಪ್, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
 

click me!