ಧೋನಿ ನಿವೃತ್ತಿ ಬಗ್ಗೆ ಕೋಚ್ ರವಿ ಶಾಸ್ತ್ರಿ ಹೇಳಿದ್ದೇನು?

By Suvarna NewsFirst Published Jul 19, 2018, 2:38 PM IST
Highlights

ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದೀಗ ಧೋನಿ ನಿವೃತ್ತಿ ಕುರಿತು ಕೋಚ್ ರವಿ ಶಾಸ್ತ್ರಿ ರಹಸ್ಯ ಬಿಚ್ಚಿಟ್ಟಿದ್ದಾರೆ. ಶಾಸ್ತ್ರಿ ಹೇಳಿದ್ದೇನು? ಇಲ್ಲಿದೆ ವಿವರ.
 

ಲಂಡನ್(ಜು.19): ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ ಎಸ್ ಧೋನಿ ನಿವೃತ್ತಿ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಪಂದ್ಯದ ಬಳಿಕ ಎಂ ಎಸ್ ಧೋನಿ ಅಂಪೈರ್ ಬಳಿಯಿಂದ ಬಾಲ್ ಪಡೆದುಕೊಂಡಿದ್ದರು. 

ಇದನ್ನು ಓದಿ: ಕ್ರಿಕೆಟ್‌ನಿಂದ ನಿವೃತ್ತಿಗೆ ಸಜ್ಜಾದ್ರಾ ಎಂ ಎಸ್ ಧೋನಿ ?

ಧೋನಿ ತಮ್ಮ ಕರಿಯರ್‌ನ ಅಂತಿಮ ಪಂದ್ಯದ ಸವಿನೆನಪಿಗಾಗಿ ಬಾಲ್ ಪಡೆದುಕೊಂಡಿದ್ದಾರೆ. ಈ ಮೂಲಕ ಧೋನಿ ವಿದಾಯ ಖಚಿತ ಅನ್ನೋ ಮಾತುಗಳು ಕೇಳಿಬಂದಿತ್ತು. ಧೋನಿ ಪಂದ್ಯದ ಬಳಿಕ ತಮ್ಮ ನೆಚ್ಚಿನ ಕೀಪಿಂಗ್ ಗ್ಲೌಸ್‌ನ್ನ ಅಭಿಮಾನಿಗೆ ಗಿಫ್ಟ್ ನೀಡಿದ್ದಾರೆ ಅನ್ನೋ ವರದಿಗಳು ಕೂಡ ಧೋನಿ ವಿದಾಯದ ಮಾತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಇದನ್ನು ಓದಿ: ಅಭಿಮಾನಿಗೆ ಎಂ ಎಸ್ ಧೋನಿ ಕೀಪಿಂಗ್ ಗ್ಲೌಸ್ ಗಿಫ್ಟ್ ನೀಡಿದ್ದೇಕೆ?

ಧೋನಿ ನಿವೃತ್ತಿ ಊಹಾಪೋಹಗಳಿಗೆ ಇದೀಗ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಬೌಲಿಂಗ್ ಕೋಚ್ ಭರತ್ ಅರುಣ್‌ಗೆ ಬಾಲ್ ತೋರಿಸಲು ಅಂಪೈರ್‌ನಿಂದ ಪಡೆದುಕೊಂಡಿದ್ದಾರೆ. ಬಾಲ್ ಕಂಡೀಷನ್ ಅರಿತು ಬೌಲಿಂಗ್ ನಿರ್ವಹಣೆ ಮಾಡೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳಲು ಧೋನಿ ಬಾಲ್ ಪಡೆದುಕೊಂಡಿದ್ದಾರೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ರವಿ ಶಾಸ್ತ್ರಿ ಹೇಳಿಕೆಯಿಂದ ಧೋನಿ ನಿವೃತ್ತಿ ಮಾತಿಗೆ ತೆರೆಬಿದ್ದಿದೆ. ಈ ಮೂಲಕ ಧೋನಿ ಅಭಿಮಾನಿಗಳ ಅತಂಕ ದೂರವಾಗಿದೆ. 2014ರಲ್ಲಿ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದ ಎಂ ಎಸ್ ಧೋನಿ, ಇದೀಗ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾರೆ.

ಇದನ್ನು ಓದಿ: ನಿವೃತ್ತಿ ಸುದ್ದಿ ಬೆನ್ನಲ್ಲೇ ಧೋನಿ ನಂ.7 ಜರ್ಸಿ ಹರಾಜು!

ಇಂಗ್ಲೆಂಡ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯದಲ್ಲಿ ಧೋನಿ ನಿಧಾನಗತಿ ಬ್ಯಾಟಿಂಗ್‌ಗೆ ಟೀಕೆ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ, ಧೋನಿ ನಿವೃತ್ತಿಗೆ ಸಮಯವಾಗಿದೆ ಅನ್ನೋ  ಮಾತುಗಳು ಕೇಳಿಬಂದಿತ್ತು. 

click me!