ಅಂತರಿಕ್ಷಕ್ಕೆ ಶೀಘ್ರ ಮಹಿಳಾ ರೋಬೋಟ್‌ ವ್ಯೋಮಮಿತ್ರ ಕಳಿಸಲಿರುವ ISRO

By Kannadaprabha NewsFirst Published Aug 27, 2023, 8:53 AM IST
Highlights

ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ ಹುಮ್ಮಸ್ಸಿನಲ್ಲಿರುವ ಭಾರತ ಅಕ್ಟೋಬರ್‌ 2ನೇ ವಾರದಲ್ಲಿ ಗಗನಯಾನ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಅದಾದ ಬಳಿಕ 2ನೇ ಪ್ರಯೋಗದ ವೇಳೆ 'ವ್ಯೋಮಮಿತ್ರ' ಎಂಬ ಮಹಿಳಾ ರೋಬೋಟ್‌ ಅನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ.

ನವದೆಹಲಿ: ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ ಹುಮ್ಮಸ್ಸಿನಲ್ಲಿರುವ ಭಾರತ ಅಕ್ಟೋಬರ್‌ 2ನೇ ವಾರದಲ್ಲಿ ಗಗನಯಾನ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಅದಾದ ಬಳಿಕ 2ನೇ ಪ್ರಯೋಗದ ವೇಳೆ 'ವ್ಯೋಮಮಿತ್ರ' ಎಂಬ ಮಹಿಳಾ ರೋಬೋಟ್‌ ಅನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ.

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಶನಿವಾರ ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ (jitendra Singh) ಅವರು ಈ ವಿಷಯ ತಿಳಿಸಿದ್ದಾರೆ. ಕೊರೋನಾದಿಂದಾಗಿ ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆ ವಿಳಂಬವಾಗಿದೆ. ಅಕ್ಟೋಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಮೊತ್ತ ಮೊದಲ ಪ್ರಾಯೋಗಿಕ ಉಡಾವಣೆ ಯೋಜನೆಯನ್ನು ನಡೆಸಲು ಉದ್ದೇಶಿಸಿದ್ದೇವೆ. ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವುದು ಎಷ್ಟು ಮಹತ್ವವೋ ಅವರನ್ನು ಸುರಕ್ಷಿತವಾಗಿ ವಾಪಸ್‌ ಕರೆಸಿಕೊಳ್ಳುವುದು ಅತಿ ಮುಖ್ಯ ಎಂದು ಅವರು ತಿಳಿಸಿದ್ದಾರೆ.

ರೋವರ್‌ನ ಮತ್ತೊಂದು ವಿಡಿಯೋ ಬಿಡುಗಡೆ: ಪ್ರಜ್ಞಾನ್‌ ಸಂಚರಿಸುತ್ತಿರುವ ದೃಶ್ಯ ಲಭ್ಯ

2ನೇ ಹಂತದ ಪ್ರಯೋಗದ ವೇಳೆ ಮಹಿಳಾ ರೋಬೋಟ್‌ ಅನ್ನು ಅಂತರಿಕ್ಷಕ್ಕೆ ಕಳುಹಿಸಲಾಗುತ್ತದೆ. ಮಾನವರ ಎಲ್ಲ ಚಟುವಟಿಕೆಗಳನ್ನು ಈ ರೋಬೋಟ್‌ ಅನುಕರಿಸಲಿದೆ ಎಂದು ವಿವರಿಸಿದ್ದಾರೆ.

ಸಾಫ್ಟ್ ಲ್ಯಾಡಿಂಗ್‌ ವೀಕ್ಷಣೆ  ಸಾರ್ವಕಾಲಿಕ ದಾಖಲೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಫ್ಟ್ ಲ್ಯಾಂಡಿಂಗ್‌ ಯೂಟ್ಯೂಬ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ. ಸಾಫ್ಟ್ ಲ್ಯಾಂಡಿಂಗ್‌ ನೇರ ಪ್ರಸಾರವನ್ನು ಯೂಟ್ಯೂಬ್‌ನಲ್ಲಿ ವಿಶ್ವಾದ್ಯಂತ ಏಕಕಾಲಕ್ಕೆ ಬರೋಬ್ಬರಿ 80.6 ಲಕ್ಷ ಜನರು ನೇರ ಪ್ರಸಾರ ವೀಕ್ಷಿಸಿದ್ದಾರೆ. ಈ ಮೂಲಕ ಈವರೆಗೂ ದಾಖಲೆಯಾಗಿದ್ದ 2022ರ ಬ್ರೆಜಿಲ್‌-ಕ್ರೊವೇಷಿಯಾ ಫುಟ್ಬಾಲ್‌ ವಿಶ್ವಕಪ್‌ ಸೆಮಿಫೈನಲ್‌ ದಾಖಲೆಯನ್ನು (61 ಲಕ್ಷ) ಮುರಿದಿದೆ. ಈ ಮೂಲಕ ಅತಿ ಹೆಚ್ಚು ನೇರ ಪ್ರಸಾರ ವೀಕ್ಷಣೆ ಕಂಡ ನೇರ ಪ್ರಸಾರಗಳಲ್ಲಿ ಇಸ್ರೋದ ವಿಡಿಯೋ ವಿಶ್ವದಲ್ಲೇ ಅಗ್ರಸ್ಥಾನ ಗಳಿಸಿದೆ. ಇದರ ನಂತರದ ಸ್ಥಾನಗಳಲ್ಲಿ, ಬ್ರೆಜಿಲ್‌-ದಕ್ಷಿಣ ಕೊರಿಯಾ ಫುಟ್ಬಾಲ್‌ ವಿಶ್ವಕಪ್‌ ಪಂದ್ಯ (52 ಲಕ್ಷ), ವಾಸ್ಕೋ- ಫ್ಲೆಮಿಂಗೋ ಫುಟ್ಬಾಲ್‌ ಪಂದ್ಯ (47 ಲಕ್ಷ) ಹಾಗೂ ಸ್ಪೇಸ್‌ಎಕ್ಸ್‌ ಕ್ರೀವ್‌ ಡೆಮೋ (41 ಲಕ್ಷ) ವೀಕ್ಷಣೆ ಸ್ಥಾನ ಪಡೆದಿದೆ.

Chandrayaan: ಮೂರು ಮುಖ್ಯ ಉದ್ದೇಶಗಳಲ್ಲಿ 2 ಪೂರ್ಣ; ಇನ್ನೊಂದು ಪ್ರಗತಿಯಲ್ಲಿದೆ: ಇಸ್ರೋ

click me!