2023ರ ಸಾಲಿನಲ್ಲಿ ಇಸ್ರೋ ಸಾಧನೆ ಜಗತ್ತೆ ಬೆರಗಾಗಿದೆ. ಇದೀಗ 2024ರ ಸಾಲಿನಲ್ಲೂ ವಿಶ್ವವನ್ನೇ ಚಕಿತಗೊಳಿಸಲು ಇಸ್ರೋ ಸಜ್ಜಾಗಿದೆ. ಹೊಸ ವರ್ಷದ ಮೊದಲ ದಿನವೇ ಇಸ್ರೋ ದೇಶದ ಮೊದಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಉಡಾಯಿಸಲಿದೆ.
ಶ್ರೀಹರಿಕೋಟ(ಡಿ.26) ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹ ಇಳಿಸಿ ಅಧ್ಯಯನ ನಡೆಸಿದ ಇಸ್ರೋ, ಸೂರ್ಯನ ಅಧ್ಯಯನಕ್ಕೂ ಆದಿತ್ಯ -ಎಲ್1 ನೌಕೆ ಕಳುಹಿಸಲಾಗಿದೆ. 2023ರ ಸಾಲಿನಲ್ಲಿ ಹತ್ತು ಹಲವು ಸಾಧನೆಗೈದ ಇಸ್ರೋ ಇದೀಗ 2024ರ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಲು ಸಜ್ಜಾಗಿದೆ. ಜನವರಿ 1 ರಂದು ದೇಶದ ಮೊದಲ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ (XPoSat)ವನ್ನು ಪೋಲಾರ್ ನೌಕೆಯನ್ನು ಇಸ್ರೋ ಉಡಾವಣೆ ಮಾಡುತ್ತಿದೆ.
ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರ, ಎಕ್ಸ್ ರೇ ಬೈನರಿ, ಸಕ್ರಿಯ ಗ್ಯಾಲಕ್ಸಿ ನ್ಯೂಕ್ಲಿಯಸ್, XPoSat ಪಲ್ಸರ್‌ಗಳು ಸೇರಿದಂತೆ 50 ಪ್ರಕಾಶಮಾನ ಮೂಲಗಳ ಅಧ್ಯಯನ ಮಾಡಲು ಈ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ವಿಶೇಷ ಅಂದರೆ ಈ ಉಪಗ್ರಹವನ್ನು 500 ರಿಂದ 700 ಕಿಲೋಮೀಟರ್ ವೃತ್ತಕಾರಾದ ಬೂಮಿಯ ಕಕ್ಷೆಯಲ್ಲಿ ಇರಿಸಿ ಅಧ್ಯಯನ ಮಾಡಲಾಗುತ್ತದೆ. ಕನಿಷ್ಠ ಐದು ವರ್ಷಗಳ ಕಾಲ ಈ ಅಧ್ಯಯನ ನಡೆಯಲಿದೆ.
undefined
ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್‌ಗೆ ಸಿದ್ಧಗಂಗಾ ಶ್ರೀ ಪ್ರಶಸ್ತಿ!
ನಾಸಾ ಬಳಿಕ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ ಕಳುಹಿಸುತ್ತಿರುವ ಎರಡನೇ ಸಂಸ್ಥೆ ಇಸ್ರೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2021ರಲ್ಲಿ ನಾಸಾ ಪೊಲರಿಮೀಟರ್ ಎಕ್ಸ್ ರೇ ಎಕ್ಸ್‌ಪ್ಲೋರರ್ (IXPE) ಉಪಗ್ರಹ ಕಳುಹಿಸಿತ್ತು.
ಜ.6ಕ್ಕೆ ಎಲ್1 ಪಾಯಿಂಟ್‌ಗೆ ಆದಿತ್ಯ ನೌಕೆ
ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಡಲಾದ ಆದಿತ್ಯ -ಎಲ್1 ನೌಕೆ, 2024ರ ಜ.6ರಂದು ತನ್ನ ಗುರಿಯಾದ ಲಾಗ್ರೇಂಜ್-1 ಪಾಯಿಂಟ್ ತಲುಪಲಿದೆ ಎಂದು ಇಸ್ರೋ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ‘ಕಳೆದ ಸೆ.2ರಂದು ಹಾರಿಬಿಡಲಾದ ನೌಕೆಯು ಇದೀಗ ಭೂಮಿಯಿಂದ 1.5 ಲಕ್ಷ ಕಿ.ಮೀ ದೂರದ ಪ್ರದೇಶವಾದ ಎಲ್1 ನತ್ತ ಪ್ರಯಾಣ ಬೆಳೆಸಿದೆ. ಅದು ಜ.6ರಂದು ತನ್ನ ಗುರಿಯನ್ನು ತಲುಪಲಿದೆ. ನೌಕೆ ತನ್ನ ಗುರಿ ತಲುಪುವ ನಿರ್ದಿಷ್ಟ ಸಮಯವನ್ನು ಮುಂದೆ ತಿಳಿಸಲಾಗುವುದು’ ಎಂದು ಹೇಳಿದ್ದಾರೆ.
ಗಗನಯಾನ ಪರೀಕ್ಷೆ ಜತೆ ಮುಂದಿನ ವರ್ಷದಲ್ಲಿ ಇಸ್ರೋದಿಂದ 16 ಮಹತ್ವದ ಉಡಾವಣೆ
ಜ.6ರಂದು ನೌಕೆ ಎಲ್1 ಪಾಯಿಂಟ್ ತಲುಪಿದ ಬಳಿಕ, ಮತ್ತೆ ಅದರೊಳಗಿನ ಎಂಜಿನ್ ಅನ್ನು ಉರಿಸುವ ಮೂಲಕ ಅದು ಮುಂದಕ್ಕೆ ಹೋಗದೇ ಅಲ್ಲಿ ಉಳಿಯುವಂತೆ ಮಾಡಲಾಗುವುದು. ಬಳಿಕ ಅದು ಅದೇ ಸ್ಥಳದಲ್ಲಿ ಕನಿಷ್ಠ ಮುಂದಿನ 5 ವರ್ಷಗಳ ಕಾಲ ನೆಲೆ ನಿಂತು ಭಾರತಕ್ಕೆ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ಅಗತ್ಯವಾದ ಸೂರ್ಯನ ಕುರಿತ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ರವಾನಿಸಲಿದೆ ಎಂದು ಸೋಮವಾಥ್ ತಿಳಿಸಿದ್ದಾರೆ.