
ಕಚೇರಿಗೆ ಬಂದು ಕೆಲಸ ಮಾಡಲು ಕೆಲವರಿಗೆ ಬೇಸರವೆನ್ನಿಸುತ್ತದೆ. ಕಚೇರಿ ವಾತಾವರಣ ಅವರ ಮನಸ್ಸಿಗೆ ಹಿಡಿಸುವುದಿಲ್ಲ. ಮನೆಯಲ್ಲಿಯೇ ಕೆಲಸ ಮಾಡುವ ಆಯ್ಕೆಯನ್ನು ಆಯ್ದುಕೊಳ್ಳಲು ಬಯಸ್ತಾರೆ. ಮತ್ತೆ ಕೆಲವರು ಅನಿವಾರ್ಯವಾಗಿ ಕಚೇರಿಗೆ ಬರ್ತಾರೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಕೆಲಸ ಮಾಡ್ತಾರೆ. ಕಚೇರಿ ವಾತಾವರಣ ಅಥವಾ ಕಚೇರಿಯಲ್ಲಿರುವ ಸಿಬ್ಬಂದಿ ವರ್ತನೆ ಕಿರಿಕಿರಿ ಎನ್ನಿಸುತ್ತದೆ. ಆ ಸಿಬ್ಬಂದಿ ಕಚೇರಿಗೆ ಬಂದ್ರೆ ಹಿಂಸೆ ಎನ್ನುವವರಿದ್ದಾರೆ. ಕಚೇರಿಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು, ಕಚೇರಿ ಕೆಲಸ ಮಾಡುವುದು ಮಾತ್ರವಲ್ಲ ಸ್ವಭಾವದಲ್ಲೂ ಅನೇಕ ಬದಲಾವಣೆ ಮಾಡಬೇಕು. ಅನೇಕ ಬಾರಿ ನಿಮ್ಮ ಸ್ವಭಾವ ನಿಮ್ಮ ಕೆಲಸಕ್ಕೆ ಕುತ್ತು ತರಬಹುದು. ಇಲ್ಲವೆ ಕಚೇರಿ ವಾತಾವರಣ ಹಾಳಾಗಲು ನೀವು ಕಾರಣವಾಗಬಹುದು. ನಾವಿಂದು ಕಚೇರಿಯಲ್ಲಿ ಏನೆಲ್ಲ ಮಾಡ್ಬಾರದು ಎಂಬುದನ್ನು ಹೇಳ್ತೇವೆ.
ಕಚೇರಿ (Office) ಯಲ್ಲಿ ಮಾಡ್ಬೇಡಿ ಈ ಕೆಲಸ (Work) :
ಬೆನ್ನ ಹಿಂದೆ ಮಾತನಾಡುವುದು : ಬೇರೆಯವರ ವರ್ತನೆ (Behavior) ತಪ್ಪೆನಿಸಿದ್ರೆ ಅವರ ಮುಂದೆಯೇ ತಪ್ಪನ್ನು ಹೇಳಿ. ಆ ಕ್ಷಣದಲ್ಲಿ ನೀವು ಕೆಟ್ಟವರು ಎನ್ನಿಸಿದ್ರೂ ಮುಂದೆ ಎಲ್ಲವೂ ಸರಿಯಾಗುತ್ತದೆ. ಆದ್ರೆ ಯಾವುದೇ ವ್ಯಕ್ತಿ ಬೆನ್ನ ಹಿಂದೆ ಮಾತನಾಡುವುದು ಸರಿಯಲ್ಲ. ಹಾಗಾಗಿ ಯಾವುದೆ ಸಹೋದ್ಯೋಗಿ (Colleague) ಅಥವಾ ಹಿರಿಯ ಅಧಿಕಾರಿ ಬಗ್ಗೆ ಹಿಂದಿನಿಂದ ಮಾತನಾಡುವುದು ಸರಿಯಲ್ಲ. ಇದ್ರಿಂದ ಕಚೇರಿಯಲ್ಲಿ ನಿಮ್ಮ ಇಮೇಜ್ ಹಾಳಾಗುತ್ತದೆ. ಹಾಗೆಯೇ ನಿಮ್ಮನ್ನು ಕಚೇರಿ (Office) ಯಲ್ಲಿ ಜೋಕರ್ (Joker) ಎಂದು ಕರೆದ್ರೂ ತಪ್ಪೇನಿಲ್ಲ.
ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡ್ಬೇಡಿ : ಪ್ರತಿಯೊಬ್ಬ ಉದ್ಯೋಗಿಯು ತನ್ನ ಕಚೇರಿಯಲ್ಲಿ ಆರಾಮವಾಗಿ ಕೆಲಸ ಮಾಡಲು ಇಷ್ಟಪಡುತ್ತಾನೆ. ಹಾಗೆಯೇ ತನ್ನ ಕೆಲಸದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಅವನು ಇಷ್ಟಪಡುವುದಿಲ್ಲ. ಹಾಗಾಗಿ ನಿಮ್ಮ ಕೆಲಸವನ್ನು ನೀವು ಮಾಡಿಕೊಳ್ಳುವುದು ಉತ್ತಮ. ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು, ತನಗೇ ಎಲ್ಲ ತಿಳಿದಿದೆ ಎಂಬ ಅಹಂಕಾರದಲ್ಲಿ ಮಾತನಾಡುವುದು ಸರಿಯಲ್ಲ. ನಿಮಗೆ ಎಷ್ಟೇ ತಿಳುವಳಿಕೆ ಇದ್ದರೂ, ಅನುಭವವಿದ್ದರೂ ನಿಮ್ಮ ಕೆಲಸ ಮಾಡಿಕೊಂಡು ಹೋಗಿ. ನಿಮ್ಮ ಅಗತ್ಯವಿದೆ, ನಿಮ್ಮ ನೆರವು ಬೇಕು ಎಂದು ಸಹೋದ್ಯೋಗಿ ನಿಮ್ಮ ಬಳಿ ಬಂದಾಗ ಮಾತ್ರ ನೀವು ಅವರಿಗೆ ಸಲಹೆ ನೀಡಿ. ಅಲ್ಲಿಯವರೆಗೆ ಯಾರಿಗೂ ಪುಕ್ಕಟೆ ಸಲಹೆ ನೀಡಲು ಹೋಗಿ ಇಕ್ಕಟ್ಟಿಗೆ ಸಿಲುಕಬೇಡಿ.
ಇದನ್ನೂ ಓದಿ: ಗಂಡ್ಮಕ್ಕಳ ಜೊತೆ ಮಾತಾಡೋದು ಕಷ್ಟವಾಗ್ತಿದೆ ಏನ್ಮಾಡ್ಲಿ?
ಸಹೋದ್ಯೋಗಿಗಳಿಗೆ ಅಗೌರವ (Disrespect) : ಕೆಲವರು ತಮ್ಮ ಸಹೋದ್ಯೋಗಿಯನ್ನು ಗೌರವಿಸುವುದಿಲ್ಲ. ನೀವು ಇತರರನ್ನು ಗೌರವಿಸಿದಾಗ ಮಾತ್ರ ನಿಮಗೆ ಗೌರವ (Respect) ಸಿಗುತ್ತದೆ ಎಂಬುದನ್ನು ನೆನಪಿಡಿ. ಹಿರಿಯರಾಗಲಿ, ಕಿರಿಯರಾಗಲಿ, ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಖಂಡಿತವಾಗಿಯೂ ಅವರನ್ನು ಪ್ರೋತ್ಸಾಹಿಸಿ. ಇದು ಪರಸ್ಪರ ಸಂಬಂಧವನ್ನು ಬಲಪಡಿಸುತ್ತದೆ. ಕಚೇರಿಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಹಾಗೆಯೇ ನಿಮ್ಮ ಮೇಲೆ ಸಹೋದ್ಯೋಗಿಗಳಿಗೆ ಗೌರವ ಹೆಚ್ಚಾಗುತ್ತದೆ.
ಇದನ್ನೂ ಓದಿ: ಕ್ಷಮಿಸುವುದು ದೊಡ್ಡ ಗುಣ, Sorry ಕೇಳಿದರೆ ಮನ್ನಿಸಿ ಬಿಡಿ
ಅಧಿಕಾರದ ದುರುಪಯೋಗ : ಅಧಿಕಾರ ಸಿಕ್ಕಿದ ತಕ್ಷಣ ಕೆಲವರು ಅಹಂಕಾರದಿಂದ ವರ್ತಿಸಲು ಶುರು ಮಾಡ್ತಾರೆ. ಹುದ್ದೆಗೆ ಮೀರಿದ ವರ್ತನೆ ತೋರಿಸ್ತಾರೆ. ಕಿರಿಯ ಉದ್ಯೋಗಿಗಳನ್ನು ಹಿಂಸಿಸಲು ಶುರು ಮಾಡ್ತಾರೆ. ಅಧಿಕಾರ ಸಿಕ್ಕಾಗ ಅದರ ಅಕ್ರಮ ಲಾಭ ಪಡೆಯಲು ಆರಂಭಿಸುತ್ತಾರೆ. ಸಹೋದ್ಯೋಗಿಗಳ ಜೊತೆ ಸರಿಯಾಗಿ ಮಾತನಾಡದೆ ಇರುವುದು,ಆಫೀಸ್ ಟೈಮಿಗೆ ಸರಿಯಾಗಿ ಬರದೆ ಇರುವುದು, ಸಮಯವಲ್ಲದ ಸಮಯದಲ್ಲಿ ಸಿಬ್ಬಂದಿಯನ್ನು ಕಚೇರಿಗೆ ಕರೆಸುವುದು, ಸಣ್ಣ ತಪ್ಪಿಗೆ ಬೈಯುವುದು, ರಜೆ ನೀಡದೆ ಇರುವುದು ಹೀಗೆ ಕಚೇರಿಯಲ್ಲಿ ಹಿಟ್ಲರ್ ನಂತೆ ವರ್ತಿಸುವ ಜನರಿದ್ದಾರೆ. ಕಚೇರಿಯಲ್ಲಿ ನಿಮ್ಮ ಈ ವರ್ತನೆ ಸಹೋದ್ಯೋಗಿಗಳಿಗೆ ಇಷ್ಟವಾಗುವುದಿಲ್ಲ. ನಿಮ್ಮನ್ನು ಕೆಟ್ಟವರ ಕೆಟಗರಿಗೆ ಸೇರಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.