ಹಳೆ ವಸ್ತುವ ಎಸೀಬಿಡಿ, ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಹೀಗೆ!

By Suvarna News  |  First Published May 4, 2024, 5:44 PM IST

ಹಳೆ ವಸ್ತುಗಳನ್ನು ಎಸೆಯುವಾಗ ನಾಲ್ಕೈದು ಬಾರಿ ಆಲೋಚನೆ ಮಾಡಿ. ಅದನ್ನು ಕ್ಲೀನ್‌ ಮಾಡಿ ಬೆಲೆ ಚೆಕ್‌ ಮಾಡ್ತಿರಿ. ಯಾಕೆಂದ್ರೆ ಈತನ ಅದೃಷ್ಟ ಬದಲಾಗಿದ್ದೇ ಗಿಟಾರ್‌ ನಿಂದ. ಅದು ಹೇಗೆ ಗೊತ್ತಾ?
 


ಹಳೆ ಮನೆ ಕ್ಲೀನ್‌ ಮಾಡುವಾಗ ಇಲ್ಲವೆ ಮನೆ ಶಿಫ್ಟ್‌ ಮಾಡುವಾಗ ಹಳೆ ವಸ್ತುಗಳು ಸಿಗೋದು ಸಾಮಾನ್ಯ. ಆ ವಸ್ತುಗಳನ್ನು ಮೇಲಿಂದ ಮೇಲೆ ಪರಿಶೀಲನೆ ಮಾಡಿ ಬೇಡ ಎಂದು ಎಸೆದು ಬರೋರೇ ಹೆಚ್ಚು. ಕೆಲ ವಸ್ತುಗಳು ಸಹಾಯಕ್ಕೆ ಬರ್ತವೆ ಅಂತಾ ಎತ್ತಿಟ್ಟುಕೊಳ್ತೇವೆ. ಹಳೆ ಮನೆ ಕ್ಲೀನ್‌ ಮಾಡುವಾಗ ಇಲ್ಲವೆ ನಾವು ಹೊಸ ಮನೆಗೆ ಹೋದಾಗ ಚಿತ್ರವಿಚಿತ್ರ ವಸ್ತುಗಳು ಸಿಕ್ಕ ಅನೇಕ ಉದಾಹರಣೆ ಇದೆ. ಎಷ್ಟೋ ವರ್ಷಗಳ ಹಿಂದೆ ಬರೆದ ಪ್ರೇಮ ಪತ್ರ, ಫೋಟೋ, ವಿಲ್‌ ಹೀಗೆ ನಾನಾ ವಸ್ತುಗಳ ಜೊತೆ ಮನೆಯೊಳಗೆ ಗುಹೆ ಕೊರೆದ ಸುದ್ದಿಗಳು ಕೇಳಿ ಬಂದಿದ್ದವು. ಈಗ ಬ್ರಿಟನ್‌  ವ್ಯಕ್ತಿಯೊಬ್ಬನ ಅದೃಷ್ಟವನ್ನು ಹಳೆ ಗಿಟಾರ್‌ ಬದಲಿಸಿದೆ. ಈಗ ಆ ಗಿಟಾರವನ್ನು ಆತ ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾನೆ. 

ಡ್ಯಾರೆನ್ ಜೂಲಿಯನ್ (Darren Julian) ಎಂಬ ಹೆಸರಿನ ವ್ಯಕ್ತಿ ಹಳೆ ಮನೆಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿದ್ದ. ಈ ವೇಳೆ ಮೂಲೆಯಲ್ಲಿ ಹಳೆ ಗಿಟಾರೊಂದು ಧೂಳು (Dust) ಹಿಡಿದಿದ್ದು ಕಾಣಿಸಿತು.  ಅಪ್ಪ ಯಾವಾಗ್ಲೋ ಗಿಟಾರ್‌ ತಂದಿರಬಹುದೆಂದು ಭಾವಿಸಿದ್ದ. ಆದ್ರೆ ಧೂಳು ಕ್ಲೀನ್‌ ಮಾಡಿದಾಗ ಆತನಿಗೆ ಅಚ್ಚರಿ ಕಾದಿತ್ತು. ಅದು ಬರೀ ಗಿಟಾರ್‌ ಆಗಿರಲಿಲ್ಲ. ಹನ್ನೆರಡು ವೈರ್‌ ಇದ್ದ ವಿಶೇಷವಾದ ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್ ಆಗಿತ್ತು.

Tap to resize

Latest Videos

ಎಲೆನ್‌ ಮಸ್ಕ್‌ ಕಂಪನಿಯಲ್ಲಿ ಕೆಲಸ ಕಳ್ಕೊಂಡ ಪಾಕ್ ಮಹಿಳೆಯ ಭಾವನಾತ್ಮಕ ಲೆಟರ್ ವೈರಲ್!

ಈ ಗಿಟಾರವನ್ನು ಬೀಟಲ್ಸ್ ಅನುಭವಿ ಜಾನ್ ಲೆನಾನ್ ಮತ್ತು ಅವರ ಪಾಲುದಾರ ಬೀಟಲ್ ಜಾರ್ಜ್ ಹ್ಯಾರಿಸನ್ ನುಡಿಸಿದ್ದರು. ನಾರ್ವೇಜಿಯನ್ ವುಡ್‌ಗೆ ಅತ್ಯಂತ ನೆಚ್ಚಿನ ಬೀಟಲ್ಸ್ ಟ್ರ್ಯಾಕ್ ಮಾಡಲು ಲಯವನ್ನು ತರಲು ಲೆನ್ನನ್ ಈ ಗಿಟಾರ್ ಅನ್ನು ಬಳಸಿದ್ದರು. ಡ್ಯಾರೆನ್‌ ಜೂಲಿಯನ್‌ ಪ್ರಕಾರ, ಐವತ್ತು ವರ್ಷಗಳಿಂದ ಈ ಗಿಟಾರ್‌ ಹಾಗೆಯೇ ಬಿದ್ದಿತ್ತು. ಅದನ್ನು ಯಾರೂ ಹುಡುಕುವ ಪ್ರಯತ್ನ ಕೂಡ ಮಾಡಿರಲಿಲ್ಲ. 

ಡ್ಯಾರೆನ್‌ ಜೂಲಿಯರ್‌ ಗೆ ಈ ಗಿಟಾರ್‌ ಸಿಕ್ಕಾಗ ಅಚ್ಚರಿಗೊಳಗಾಗಿದ್ದ. ಅದನ್ನು ತಜ್ಞರಿಗೆ ತೋರಿಸಿದ್ದ. ಗಿಟಾರ್‌ ಮೇಲೆ ಇದ್ದ ಗುರುತು ನೋಡಿ ತಜ್ಞರು ಫುಲ್ ಖುಷ್. ಈ ಗಿಟಾರನ್ನು ಜಾನ್‌ ಲೆನಾನ್‌ ಮತ್ತು ಜಾರ್ಜ್‌ ಹ್ಯಾರಿಸನ್‌ ಬಳಸಿದ್ದರು ಎಂಬುದು ಗೊತ್ತಾಯ್ತು. ಇದನ್ನು ಹರಾಜಿನಲ್ಲಿ ಮಾರಿದ್ರೆ ಅದರ ಬೆಲೆ ಐದು ಲಕ್ಷ ಡಾಲರ್‌ ಗಿಂತ ಹೆಚ್ಚಾಗಲಿದೆ ಎಂದು ತಜ್ಞರು ಅಂದಾಜಿಸಿದ್ದರು.

ಬಿಸಿಲಿನ ತಾಪಕ್ಕೆ ಜನರು ಕಂಗಾಲು, ಸ್ವಿಗ್ಗಿಯಲ್ಲಿ ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಐಸ್‌ಕ್ರೀಂ ಆರ್ಡರ್‌!

ಹರಾಜಿನ ಆರಂಭದ ಬೆಲೆ ಕೇಳಿದ್ರೆ ದಂಗಾಗ್ತೀರಿ : ಐವತ್ತು ವರ್ಷಗಳಿಂದ ಈ ಗಿಟಾರ್‌ ಬಳಸದೇ ಹೋದರೂ, ಸ್ವಲ್ಪವೂ ಹಾಳಾಗಿರಲಿಲ್ಲ. ಅದು ಹೊಳೆಯುತ್ತಿತ್ತು. 1960 ರ ಪಾಪ್ ತಾರೆ ಗಾರ್ಡನ್ ವಾಲರ್‌ಗೆ ಲೆನ್ನನ್ ಗಿಟಾರ್ ನೀಡಿದ್ದಾನೆ ಎಂದು ಡ್ಯಾರೆನ್‌ ಜೂಲಿಯನ್‌ ಹೇಳಿದ್ದಾನೆ. ಈ ಗಿಟಾರ್‌ನಲ್ಲಿನ ವುಡ್‌ಗ್ರೇನ್ ಲೆನ್ನನ್‌ನ ಹಳೆ ಗಿಟಾರ್‌ನ ವುಡ್‌ಗ್ರೇನ್‌ಗೆ ಹೊಂದಿಕೆಯಾಗುತ್ತದೆ. ಹಾಗಾಗಿ ಇದು ಲೆನ್ನನ್‌ ಗಿಟಾರವೆಂದು ಡ್ಯಾರೆನ್‌ ಸ್ಪಷ್ಟಪಡಿಸಿದ್ದಾರೆ. ಜಾನ್‌ ಗಿಟಾರ್‌ ನುಡಿಸುವ ವೇಳೆ ಇದ್ದ ಸ್ಥಿತಿಯಲ್ಲೇ ಈಗ್ಲೂ ಈ ಗಿಟಾರವಿದೆ. ಗಿಟಾರನ್ನು ಈಗ ಹರಾಜಿಗೆ ಇಡಲಾಗಿದೆ. ಅದರ ಆರಂಭಿಕ ಬೆಲೆ 8 ಮಿಲಿಯನ್ ಅಂದರೆ 6.67 ಕೋಟಿ ರೂಪಾಯಿ. ಈ ಗಿಟಾರವನ್ನು  ಮೇ 29 ಮತ್ತು 30 ರಂದು ಹರಾಜು ಕೂಗಲಾಗುವುದು. ನ್ಯೂಯಾರ್ಕ್‌ನ ಹಾರ್ಡ್ ರಾಕ್ ಕೆಫೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನ ವೇಳೆ ಇದ್ರ ಬೆಲೆ ಮತ್ತಷ್ಟೂ ಹೆಚ್ಚಾಗುವ ಸಾಧ್ಯತೆ ಇದೆ. 

click me!