ಪದ್ಮಶ್ರೀ ಪಡೆದ ಈ ಲಂಗರ್‌ ಬಾಬಾ ನಿಮಗೆ ಗೊತ್ತಾ?

By Suvarna NewsFirst Published Jan 26, 2020, 2:57 PM IST
Highlights

ಕನ್ನಡಿಗ 'ಅಕ್ಷರ ಸಂತ' ಹರೇಕಳ ಹಾಜಬ್ಬ ಎಂಬ ಸಂತನಂಥ ಮನುಷ್ಯನಿಗೆ ಈ ಸಲ ಪದ್ಮಶ್ರೀ ಪ್ರಶಸ್ತಿ ಬಂದದ್ದು ನಿಮಗೆ ತಿಳಿದೇ ಇದೆ. ಇದೇ ರೀತಿ, ಹಣ್ಣು ಮಾರಿ ಗಳಿಸಿದ ಸಂಪತ್ತನ್ನು ಬಡವರಿಗೆ ಅನ್ನದಾನಕ್ಕಾಗಿ ಖರ್ಚು ಮಾಡಿದ ವ್ಯಕ್ತಿಯೊಬ್ಬರು ಚಂಡೀಗಢದಲ್ಲಿದ್ದಾರೆ. ಅವರಿಗೂ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಅವರ ಹೆಸರು ಜಗದೀಶ್‌ ಲಾಲ್‌ ಅಹುಜಾ. ಜನ ಇವರನ್ನು ಲಂಗರ್‌ ಬಾಬಾ ಅಂತಲೇ ಕರೆಯುವುದು. ಅದಕ್ಕೂ ಕಾರಣವಿದೆ.

ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರಿಗಾಲಿನಲ್ಲಿ ಓಡಾಡಿ ಹಣ್ಣು ಮಾರಾಟ ಮಾಡಿ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ಕಟ್ಟಲು ಕಾರಣರಾದ ಹರೇಕಳ ಹಾಜಬ್ಬ ಎಂಬ ಸಂತನಂಥ ಮನುಷ್ಯನಿಗೆ ಈ ಸಲ ಪದ್ಮಶ್ರೀ ಪ್ರಶಸ್ತಿ ಬಂದದ್ದು ನಿಮಗೆ ತಿಳಿದೇ ಇದೆ. ಇದೇ ರೀತಿ, ಹಣ್ಣು ಮಾರಿ ಗಳಿಸಿದ ಸಂಪತ್ತನ್ನು ಬಡವರಿಗೆ ಅನ್ನದಾನಕ್ಕಾಗಿ ಖರ್ಚು ಮಾಡಿದ ವ್ಯಕ್ತಿಯೊಬ್ಬರು ಚಂಡೀಗಢದಲ್ಲಿದ್ದಾರೆ. ಅವರಿಗೂ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಅವರ ಹೆಸರು ಜಗದೀಶ್‌ ಲಾಲ್‌ ಅಹುಜಾ. ಜನ ಇವರನ್ನು ಲಂಗರ್‌ ಬಾಬಾ ಅಂತಲೇ ಕರೆಯುವುದು. ಅದಕ್ಕೂ ಕಾರಣವಿದೆ.

1947ರಲ್ಲಿ ಭಾರತ ವಿಭಜನೆಯಾದಾಗ, ಈಗ ಪಾಕಿಸ್ತಾನ ಆಗಿರುವ ಪೇಷಾವರದಲ್ಲಿ ಬದುಕುತ್ತಿದ್ದ ಅಹುಜಾ ಹಾಗೂ ಮನೆಯವರು ಉಟ್ಟ ಬಟ್ಟೆಯಲ್ಲಿ ಭಾರತಕ್ಕೆ ಓಡಿ ಬಂದರು ಆಗ ಅವರಿಗೆ 12 ವರ್ಷ. ಪಟಿಯಾಲ, ಅಮೃತಸರಗಳಲ್ಲಿ ಬದುಕಿದರು. ಶಾಲೆಗೆ ಹೋಗಬೇಕೆಂಬ ಅಸೆ ಅವರಿಗೆ ಇತ್ತು. ಆದರೆ ಓದಿಸಲು ತಂದೆ ಬಳಿ ಹಣವಿರಲಿಲ್ಲ. ಕುಟುಂಬದ ಹೊಟ್ಟೆ ಹೊರೆಯಲು ಇವರೇ ದುಡಿಯಬೇಕಾಗಿತ್ತು, ಅಹುಜಾ ರೈಲ್ವೇ ಸ್ಟೇಶನ್‌ಗಳಲ್ಲಿ ರೊಟ್ಟಿ ಮಾರಿದರು. ನಂತರು ಬಾಳೆಹಣ್ಣು, ಕಿತ್ತಲೆ ಉಂತಾದ ಹಣ್ಣುಗಳನ್ನು ಮಾರತೊಡಗಿದರು. ಕೆಲವೊಮ್ಮೆ ಯಾವುದೇ ಆದಾಯವಿಲ್ಲದೆ ಕುಟುಂಬವೆಲ್ಲ ಉಪವಾಸ ಮಲಗಿದ್ದೂ ಇತ್ತಂತೆ.

 

10 ಕನ್ನಡಿಗರಿಗೆ ಪದ್ಮ ಪ್ರಶಸ್ತಿ
 

21ರ ವಯಸ್ಸಿನಲ್ಲಿ ಅವರು ಚಂಡೀಗಢಕ್ಕೆ ಬಂದರು. ಅಲ್ಲಿಂದಾಚೆ ಅವರ ಬದುಕು ಬದಲಾಯಿತು. ಕಿತ್ತಳೆ ಹಣ್ಣುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರುವ ಮಳಿಗೆ ತೆರೆದರು. ೧೯೬೫ರಲ್ಲಿ ಮೊದಲ ಆಸ್ತಿ ಖರೀದಿಸಿದರು. ಅಲ್ಲಿಂದೀಚೆಗೆ 7 ಆಸ್ತಿಗಳನ್ನು ಖರೀದಿಸಿದ್ದಾರೆ. ಆದರೆ ಒಂದನ್ನೂ ಇಟ್ಟುಕೊಂಡಿಲ್ಲ. ಮಾರಾಟ ಮಾಡಿದ್ದಾರೆ. ಯಾಕೆ ಗೊತ್ತೆ? ಬಡವರಿಗೆ ಊಟ ಬಡಿಸೋಕೆ! ಹೌದು. ಈ ಯೋಚನೆ ಅವರಿಗೆ ಬಂದದ್ದು ತಮ್ಮ ಮಗನ ಎಂಟನೇ ಬರ್ತ್‌ಡೇ ಆಚರಿಸುವ ಸಂದರ್ಭದಲ್ಲಿ. ಆಗ, ತಾವೇ ಹಣ ಖರ್ಚು ಮಾಡುವ ಬದಲು ಬಡವರಿಗೆ ಏನಾದರೂ ನೀಡಿದರೆ ಹೇಗೆ ಎಂಬ ಯೋಚನೆ ಬಂತು, ಮೊದಲ ಬಾರಿಗೆ ನೂರಾರು ಬಡ ಮಕ್ಕಳನ್ನು ಒಟ್ಟು ಸೇರಿಸಿ ಊಟ ಹಾಕಿದರು. ಆಗ ಆ ಮಕ್ಕಳ ಮುಖದಲ್ಲಿ ಕಂಡ ಸಂತೋಷ ಅವರನ್ನು ಚಿಂತನೆಗೆ ಹಚ್ಚಿತು.
 

ಅದೇ ಆರಂಭ. ಅಲ್ಲಿಂದೀಚೆಗೆ ಅವರು ಪ್ರತಿ ದಿನ ಎಂಬಂತೆ ನೂರಾರು, ಸಾವಿರಾರು ಮಕ್ಕಳಿಗೆ ಬಿಸಿಬಿಸಿಯಾದ ಊಟವನ್ನು ಸ್ವತಃ ಮಾಡಿಸಿ ಬಡಿಸುತ್ತಿದ್ದಾರೆ. ಅದಕ್ಕಾಗಿಯೇ ನಿಗದಿತ ಜಾಗವಿದೆ. ಅವರ ಊಟದ ಸ್ಥಳದಲ್ಲಿ ಜಾತಿ- ಮತ ಭೇದವಿಲ್ಲ. ಬಡವರಾಗಿದ್ದರೆ ಸಾಕು, ಊಟ ಉಚಿತ. ಅವರ ಈ ಲಂಗರ್(ಅನ್ನದಾನ) ಸೇವೆಯಿಂದಾಗಿ ಅವರನ್ನು ಲಂಗರ್‌ ಬಾಬಾ ಎಂದು ಕರೆಯತೊಡಗಿದರು.

ಕಿತ್ತಳೆ ಮಾರಿ ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತ
 

ಮೊದಲು 2000 ಮಂದಿಗೆ ಊಟ ಹಾಕುತ್ತಿದ್ದರು, ಇತ್ತೀಚೆಗೆ ಎಲ್ಲದರಲ್ಲೂ ಖರ್ಚು ವಿಪರೀತವಾಗಿರುವ ಕಾರಣ ಈ ಸಂಖ್ಯೆಯನ್ನು ಇಳಿಸಿದ್ದಾರೆ. ಈ ಅನ್ನದಾನಕ್ಕೆ ಹಣ ಬೇಕಲ್ಲ? ಹಣಕ್ಕಾಗಿ ತಮ್ಮ ಒಂದೊಂದೇ ಆಸ್ತಿಯನ್ನು ಮಾರಿದರು. ಇತ್ತೀಚೆಗೆ ತಮ್ಮ ಏಳನೇ ಆಸ್ತಿಯನ್ನೂ ಸುಮಾರು 1.6 ಕೋಟಿ ರೂಪಾಯಿಗಳಿಗೆ ಮಾರಿದ್ದಾರೆ. ಆ ಹಣವನ್ನೂ ಅನ್ನದಾನಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಮಾಡಿದ ಕೋಟಿಗಟ್ಟಲೆ ಆಸ್ತಿ, ಹಣವನ್ನು ಹೀಗೆ ಅನ್ನದಾನಕ್ಕಾಗಿ ವಿನಿಯೋಗ ಮಾಡಿದ ಅಹುಜಾ ಅವರ ಬಗ್ಗೆ ಅವರ ಹೆಂಡತಿ, ಇಬ್ಬರು ಮಕ್ಕಳಿಗೂ ಹೆಮ್ಮೆ, ಅಭಿಮಾನವೇ ಇದೆ. ಮಕ್ಕಳಿಗೆ ಅವರದೇ ಆದ ಬ್ಯುಸಿನೆಸ್‌ ಇದೆ.
 

ಸದ್ಯ ಅವರನ್ನು ಹೊಟ್ಟೆಯ ಕ್ಯಾನ್ಸರ್‌ ಕಾಡುತ್ತಿದೆ. ಅನ್ನದಾನ ಮುಂದುವರಿಸಲು ಕಷ್ಟವಾಗಿದೆ. ಸರಕಾರ ಸಹಾಯ ಮಾಡಿದರೆ ಒಳ್ಳೆಯದು ಎಂಬುದು ಅವರ ಭಾವನೆ. ಆದರೆ ಅವರು ಇನ್ನೊಬ್ಬರ ಮುಂದೆ ಕೈಚಾಚದ ಸ್ವಾಭಿಮಾನಿಯೂ ಹೌದು. ತಮ್ಮ ಕೋಟಿಗಟ್ಟಲೆ ಆಸ್ತಿಯನ್ನು ಅನ್ನದಾನಕ್ಕಾಗಿ ಖರ್ಚು ಮಾಡಿದ ಬಗ್ಗೆ ಅವರಿಗೆ ಯಾವ ವಿಷಾದವೂ ಇಲ್ಲ. ಈಗ ಬಂದ ಪದ್ಮಶ್ರೀ ಪ್ರಶಸ್ತಿಯ ಹಣವನ್ನೂ ಅವರು ಅನ್ನದಾನಕ್ಕೆ ಹಾಕಲಿದ್ದಾರಂತೆ.

 

ರಾಜ್ಯದ ಮತ್ತೊಬ್ಬ ಸಾಲುಮರದ ತಿಮ್ಮಕ್ಕ ಈ ತುಳಸಿ ಗೌಡ

click me!