ಮದ್ವೆಯಾಗು, ಮದ್ವೆಯಾಗು ಅಂತಾರೆ ಮನೆಯಲ್ಲಿ, ಒಲ್ಲದ ಹೆಣ್ಣು ಒತ್ತಡ ನಿಭಾಯಿಸಿಕೊಳ್ಳೋದು ಹೇಗೆ?

By Suvarna NewsFirst Published Aug 20, 2022, 1:44 PM IST
Highlights

ಮದುವೆ ಆಗುವಂತೆ ಒತ್ತಾಯ ಹೇರುವುದು ಅಪ್ಪ-ಅಮ್ಮನ ಕರ್ತವ್ಯ. ಆದರೆ, ನಿಮಗೆ ಇಷ್ಟು ಬೇಗ ಮದುವೆ ಬೇಡ ಎನ್ನುವ ಭಾವನೆ ಸ್ಪಷ್ಟವಾಗಿದ್ದರೆ ನಿಮ್ಮ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳಿ. ಮನೆಯವರ ಒತ್ತಡ ಎದುರಿಸಲು ಹೀಗ್ಮಾಡಿ.

ನೀವೆಷ್ಟೇ ಓದಿ ದೊಡ್ಡ ಹುದ್ದೆಯಲ್ಲಿರಲಿ, ಒಂದು ವಯಸ್ಸಾಗುತ್ತಿದ್ದಂತೆ ಮದುವೆಯಾಗದಿದ್ದರೆ ಜೀವನದಲ್ಲಿ ಇನ್ನೂ ಸೆಟಲ್ ಆಗಿಲ್ಲ ಎನ್ನುವ ಆಪಾದನೆಯೊಂದು ಬರುತ್ತಿರುತ್ತದೆ. ಯುವಕ-ಯುವತಿಯರಿಗೆ ಇದು ಆಗಾಗ ಸಂಕಷ್ಟವನ್ನು ಒಡ್ಡುತ್ತಿರುತ್ತದೆ. ನೆಂಟರಿಷ್ಟರ ಮನೆ, ಸಮಾರಂಭಗಳಿಗೆ ಹೋದಾಗಲೆಲ್ಲ “ನಿನ್ನ ಮದುವೆ ಯಾವಾಗ?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಕುಟುಂಬದವರು, ಸ್ನೇಹಿತರು ಮದುವೆಯ ಬಗ್ಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒತ್ತಡ ಹೇರಲು ಆರಂಭಿಸುತ್ತಾರೆ. ಮದುವೆಯ ವಿಚಾರದಲ್ಲಿ ಹೆಣ್ಣುಮಕ್ಕಳಿಗೆ ಈ ಸಮಸ್ಯೆ ಇನ್ನೂ ಹೆಚ್ಚು. ಪದವಿಯೊಂದು ಮುಗಿಯುತ್ತಿರುವ ಹಾಗೆಯೇ ಪಾಲಕರ ಬಳಿ ಮಗಳ ಮದುವೆ ಪ್ರಸ್ತಾಪ ಮಾಡುವುದು ಸಾಮಾನ್ಯ. ಆದರೆ, ಕೆಲವು ಯುವಕ, ಯುವತಿಯರಿಗೆ ಬೇಗ ಮದುವೆಯಾಗಲು ಇಷ್ಟವಿರುವುದಿಲ್ಲ. ಹುಡುಗರಾದರೆ 28-30 ವರ್ಷಗಳಾದರೂ ಯಾರೂ ತಲೆಕೆಸಿಕೊಳ್ಳುವುದಿಲ್ಲ. ಆದರೆ, ಹುಡುಗಿಯರಿಗೆ ಹಾಗಲ್ಲ. ಇತ್ತೀಚಿನ ಹುಡುಗಿಯರಿಗೆ “ಇಷ್ಟು ಓದಿದ್ದೇನೆ, ಇನ್ನೊಂದೆರಡು ವರ್ಷವಾದರೂ ಸ್ವತಂತ್ರವಾಗಿ ದುಡಿದು, ಓಡಾಡಿಕೊಂಡು ಹಾಯಾಗಿರಬೇಕು’ ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ಮನೆಯವರ ಒತ್ತಡವೂ ಅದೇ ಪ್ರಮಾಣದಲ್ಲಿ ತಲೆನೋವು ತರುತ್ತದೆ. ಇದೊಂಥರ ಪೀರ್ ಪ್ರೆಶರ್ ಇದ್ದ ಹಾಗೆ. ಇದನ್ನು ಸೂಕ್ತವಾಗಿ ನಿಭಾಯಿಸಬಲ್ಲಿರಿ ಎಂದಾದರೆ ತೊಂದರೆಯಿಲ್ಲ. ಆದರೆ, ತೊಳಲಾಟದಲ್ಲಿ ಇದ್ದೀರಿ ಎಂದಾದರೆ ನಿಮಗೊಂದಿಷ್ಟು ಟಿಪ್ಸ್ ಇಲ್ಲಿದೆ. ಇವುಗಳ ಮೂಲಕ ಸುಲಭವಾಗಿ ಈ ಒತ್ತಡವನ್ನು ಎದುರಿಸಲು ಸಾಧ್ಯ.

·ಮೊದಲನೆಯದಾಗಿ, ಮದುವೆ (Marriage) ಈಗ ಬೇಡ ಎನ್ನಲು ನಿಮಗಿರುವ ನಿರ್ದಿಷ್ಟ ಕಾರಣವೇನು ಎಂದು ಗುರುತಿಸಿಕೊಳ್ಳಿ. ನೀವು ಏನು ಇಚ್ಛಿಸುತ್ತೀರಿ ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಆಗ ಮನೆಯವರ ಒತ್ತಡ (Pressure) ಎದುರಿಸಲು ಅನುಕೂಲವಾಗುತ್ತದೆ. ಮದುವೆಯ ಜವಾಬ್ದಾರಿ (Responsibility) ನಿಭಾಯಿಸಲು ಸಿದ್ಧ ಇದ್ದೇನೆಯೇ? ಅಥವಾ ಜೀವನದ (Life) ಬಹುಮುಖ್ಯ ಹೆಜ್ಜೆ ಇಡಲು ಇನ್ನೂ ಸಮಯ ಬೇಕೇ? ಎಂದು ನಿಮ್ಮನ್ನೇ ನೀವು ಕೇಳಿಕೊಳ್ಳಿ. ಈ ಬಗ್ಗೆ ನಿಮ್ಮಲ್ಲಿ ಸ್ಪಷ್ಟತೆ ಇದ್ದಾಗ ಸ್ನೇಹಿತರ (Friends) ಹಾಗೂ ಮನೆಯವರ (Family) ಮದುವೆ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವುದು, ಒತ್ತಡ ನಿಭಾಯಿಸುವುದು ಸಾಧ್ಯವಾಗುತ್ತದೆ.

·       ಮದುವೆ ಆಗುವಂತೆ ಒತ್ತಾಯ ಮಾಡುತ್ತಿರುವ ಕುಟುಂಬಕ್ಕೆ ನಿಮ್ಮ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸುವುದು ಮುಖ್ಯ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರೆ ಅವರು ಸಂಬಂಧ (Relation) ನೋಡಲು ಶುರು ಮಾಡಬಹುದು. ಆಗ ಇನ್ನಷ್ಟು ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ವಾಗ್ವಾದ ಬೇಡ. ಶಾಂತವಾಗಿ ನಿಮ್ಮ ಗುರಿ ತಿಳಿಸಿ. ರೋಷಾವೇಷದ ಮಾತುಗಳು ಕೂಡ ಬೇಕಾಗಿಲ್ಲ. ಅತ್ಯಂತ ನಿಖರವಾದ ಅಂಶಗಳನ್ನಷ್ಟೇ ಕೇಂದ್ರೀಕರಿಸಿ ಮಾತನಾಡಿ. ನೀವು ಒಂದೊಮ್ಮೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ (Love) ಅದನ್ನೂ ಅವರಿಗೆ ಸ್ಪಷ್ಟಪಡಿಸಿ. ಅಥವಾ ನಿಮಗೆ ಅವರು ಮಾಡುವ ಆಯ್ಕೆಯ (Selection) ಬಗ್ಗೆ ಸಂಶಯ ಇದ್ದರೆ ಅದನ್ನೂ ತಿಳಿಸಿಬಿಡಿ.

ಮದುವೆಗೂ ಮೊದಲು ಸೆಕ್ಸ್‌, ಹುಡುಗಿಯರ ಏನಂತಾರೆ ?

·       ನಿಮಗೆ ನಿಜವಾಗಿಯೂ ಇನ್ನೊಂದೆರಡು ವರ್ಷ ಬಿಟ್ಟು ಮದುವೆಯಾಗುವ ವಿಚಾರವಿದ್ದರೆ ಆ ನಿಲುವಿಗೆ ಬದ್ಧರಾಗಿರಿ. ಗಡಿಬಿಡಿ (Urgent) ಮಾಡಿದರೆ ಮದುವೆಯ ಬಳಿಕದ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗುವ ಕುರಿತು ತಿಳಿಸಿ. ನಿಮ್ಮ ನಿರ್ಧಾರಕ್ಕೆ ನೀವು ಬದ್ಧರಾಗಿರುವುದು ಗೊತ್ತಾದರೆ ಅವರು ಒತ್ತಡ ಹಾಕುವುದನ್ನು ಕಡಿಮೆ ಮಾಡುತ್ತಾರೆ.

·       ಬಹಳಷ್ಟು ಜನ ಮದುವೆಯ ವಿಚಾರದ ಬಗ್ಗೆ ಮಾತನಾಡುತ್ತಾರೆಂದು ಕುಟುಂಬ ಹಾಗೂ ಸ್ನೇಹಿತರನ್ನು ದೂರವಿಟ್ಟು ಬಿಡುತ್ತಾರೆ. ಅಥವಾ ಅವರೊಂದಿಗೆ ಮಾತನಾಡಲು ಮುಂದಾಗುವುದಿಲ್ಲ. ನಿಮ್ಮ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ಮಾತನಾಡುವ ಬದಲು ಅವರೊಂದಿಗೆ ಮಾತನಾಡುವ ಸನ್ನಿವೇಶವನ್ನೇ ಅವಾಯ್ಡ್ (Avoid) ಮಾಡುತ್ತ ಬರುವುದು ಸರಿಯಲ್ಲ. ಹಾಗೆಯೇ, ನೆಂಟರಿಷ್ಟರ ಮನೆಯ ಸಮಾರಂಭಗಳಿಗೂ (Functions) ಧೈರ್ಯವಾಗಿ ಹೋಗಿ ಬರುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದ ನಿಮಗೆ ಹೊಸ ಜನರ ಪರಿಚಯವಾಗುತ್ತದೆ. ಅಲ್ಲೇ ನಿಮಗೆ ಸೂಕ್ತವಾದ ವರ ಅಥವಾ ವಧು ಕೂಡ ಸಿಗಬಹುದು. 

ಎರಡನೇ ಮದುವೆ ಬಗ್ಗೆ ಕೊನೆಗೂ ಮನಬಿಚ್ಚಿ ಮಾತನಾಡಿದ ಮೇಘನಾ ರಾಜ್

click me!