ಯಾವುದಾದರೂ ಹುಡುಗಿ ತುಂಬಾ ಇಷ್ಟವಾಗಿ ಮಾತನಾಡಲು ಹೆದರಿಕೆನಾ? ಹಾಗಿದ್ರೆ ಭಯ ಬಿಡಿ ಈ ಟಿಪ್ಸ್ ಫಾಲೋ ಮಾಡಿ.
ಯಾವುದಾದರೂ ಹುಡುಗಿಯನ್ನು (ladies) ಕಂಡ ತಕ್ಷಣ ಹಲವು ಯುವಕರಿಗೆ ಅವಳು ಇಷ್ಟವಾಗಿ ಬಿಡ್ತಾಳೆ. ಒಳಗೊಳಗೇ ಲವ್ ಕೂಡ ಶುರುವಾಗುತ್ತೆ. ಈಕೆ ನನಗಾಗಿಯೇ ಹೇಳಿ ಮಾಡಿಸಿದ್ದಾಳೆ ಎನ್ನುವ ಕಲ್ಪನೆಯೂ ಕೆಲವರಿಗೆ ಶುರುವಾಗುತ್ತೆ. ಆಕೆ ಸಿಗದೇ ಹೋದರೂ ಕೊನೆಯ ಪಕ್ಷ ಒಂದು ಸಲ ಮಾತನಾಡುವ ಆಸೆ ಕೆಲವರಿಗೆ ಆದರೆ, ಆಕೆಯ ಫ್ರೆಂಡ್ಷಿಪ್ ಮಾಡಿಕೊಂಡು ಸುತ್ತಾಡುವ ಬಯಕೆ ಇನ್ನು ಕೆಲವರಿಗೆ. ಯೌವನಾವಸ್ಥೆಯಲ್ಲಿ ಇವೆಲ್ಲಾ ಮಾಮೂಲೇ ಬಿಡಿ. ಆದರೆ ಆ ಹುಡುಗಿಯ ಜೊತೆ ಮಾತನಾಡಲು ಹಿಂದೇಟು ಹಾಕುವವರೇ ಬಹಳ ಮಂದಿ. ಏಕೆಂದರೆ ಅವಳು ಏನಂದುಕೊಂಡಾಳೋ ಎನ್ನುವ ಅಂಜಿಕೆ ಒಂದೆಡೆಯಾದರೆ, ಏಟು-ಗೀಟು ಹೊಡೆದುಬಿಟ್ಟರೆ ಎನ್ನುವ ಭಯ ಇನ್ನೊಂದು ಕಡೆ. ಆದರೂ ಒಮ್ಮೆ ಟ್ರೈ ಮಾಡೋಣ ಎಂದುಕೊಂಡು ಒಂದು ಸ್ಟೆಪ್ ಮುಂದೆ ಹೋಗಿ ಮತ್ತೆ ಹಿಂದಕ್ಕೆ ಬರುವ ಹೈಕಳೇ ಹೆಚ್ಚು.
ಅಂಥವರಿಗೆ ಕಾನ್ಫಿಡೆನ್ಸ್ (confidence) ತುಂಬುವ ಕೆಲಸ ಮಾಡಿದ್ದಾರೆ ಯೂಟ್ಯೂಬರ್ ಸಾರ್ಥಕ್ ಗೋಯೆಲ್. ಅಂದಹಾಗೆ ಸಾರ್ಥಕ್ ಅವರು ಹುಡುಗಿಯರ ವಿಷಯದಲ್ಲಿ ಪಿಎಚ್ಡಿ ಮಾಡಿದಂತಿದೆ. ಹುಡುಗಿಯರ ವಿಷ್ಯದಲ್ಲಿ ಹುಡುಗರಿಗೆ ಹಲವಾರು ಟಿಪ್ಸ್ಗಳನ್ನು ನೀಡುತ್ತಿರುತ್ತಾರೆ. ಇದಕ್ಕಾಗಿಯೇ ಅವರು ಸಕತ್ ಫೇಮಸ್. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದು, ಅವರು ಹೇಳುವ ಟಿಪ್ಸ್ಗಳನ್ನು ಫಾಲೋ ಮಾಡಿ ಹಲವಾರು ರೀತಿಯಲ್ಲಿ ಒಳ್ಳೊಳ್ಳೆ ಕಮೆಂಟ್ಸ್ ಹಾಕುತ್ತಾರೆ. ಹಾಟ್ ಹುಡುಗಿಯನ್ನು ನೋಡಿ ಮಾತನಾಡುವ ಧೈರ್ಯ ಸಾಲದೇ ವಾಪಸ್ ಬಂದಿದ್ದೀರಾ? ಹಾಗಿದ್ದರೆ ಇನ್ನೇಕೆ ತಡ. ಅವರ ಫ್ರೆಂಡ್ಷಿಪ್ (friendship) ಮಾಡಿಕೊಳ್ಳಲು ಏನು ಮಾಡಬೇಕು ಅಂತ ಸಾರ್ಥಕ್ ಹೇಳಿದ್ದಾರೆ ಕೇಳಿ. ಇದನ್ನು ಕೇಳಿದ ಮೇಲೆ ಹುಡುಗಿಯರ ಫ್ರೆಂಡ್ಷಿಪ್ ಮಾಡ್ಕೋಳೋದು ಇಷ್ಟು ಸುಲಭನಾ ಅಂತೀರಾ.
undefined
Relationship Tips: ಮಾಜಿ ಸಂಗಾತಿಯನ್ನು ಸ್ಟಾಕ್ ಮಾಡೋದು ಸರೀನಾ?
ಸಾರ್ಥಕ್ ಹೇಳಿದ್ದೇನೆಂದರೆ, ಹುಡುಗಿ ಇಷ್ಟವಾದರೆ, ಬಹಳ ಯೋಚ್ನೆ ಗೀಚ್ನೆ ಮಾಡ್ಬೇಡಿ. ಆಕೆಯ ಕಡೆ ಧೈರ್ಯದಿಂದ ಮುನ್ನುಗ್ಗಿ. ತುಂಬಾ ಯೋಚ್ನೆ ಮಾಡ್ತಾ ಕೂತರೆ ಎಲ್ಲಾ ಹಾಳಾಗುತ್ತೆ. ಹುಡುಗಿಯನ್ನು ನೋಡಿ ತುಂಬಾ ನರ್ವಸ್ ಆಗೋದು ಬೇಡ. ಹೀಗೆ ನರ್ವಸ್ ಆಗೋ ಜಾಯಮಾನ ನಿಮ್ಮದಲ್ಲವಾಗಿದ್ದರೆ ತುಂಬಾನೆ ಖುಷಿ. ನೇರವಾಗಿ ಹೋಗಿ ಆಕೆಯ ಬಳಿ ಮಾತನಾಡಿ. ಒಂದು ವೇಳೆ ಧೈರ್ಯ (dareness) ಸಾಲದೇ ಹೋದರೆ ಒಂದು ಹಾಯ್ ಎನ್ನುವ ಮೂಲಕ ಮಾತು ಶುರು ಮಾಡಿ.
ಇನ್ನು ಎರಡನೆಯ ಹಂತದಲ್ಲಿ ಅವಳನ್ನು ನೋಡಿದ ತಕ್ಷಣ ನಿಮ್ಮ ಮನಸ್ಸಿಗೆ ಏನು ತೋಚುತ್ತದೋ ಅದನ್ನು ಆ ಕ್ಷಣದಲ್ಲಿಯೇ ಹೇಳಿಬಿಡಿ. ಹೇಳಿದ್ರೆ ಏನಾಗುತ್ತೋ ಅಂತ ಯೋಚ್ನೆ ಮಾಡ್ತಾ ಕೂತ್ಕೋಬೇಡಿ. ಸಾಮಾನ್ಯವಾಗಿ ಯಾವುದಾದರೂ ಹುಡುಗಿ ನಿಮ್ಗೆ ಇಷ್ಟವಾಗಿದ್ದಳು ಎಂದರೆ ನೀವು ಯೋಚನೆ ಮಾಡೋದು ಏನೆಂದರೆ, ಅವಳು ನಿಮ್ಮ ಮೇಲೆ ಇಂಟರೆಸ್ಟ್ ತೋರಿಸ್ತಾಳೋ ಇಲ್ಲವೋ ಎನ್ನುವುದು. ಆದರೆ ಆ ಯೋಚನೆಯನ್ನು ಬಿಟ್ಟು ಅವಳ ಬಳಿ ಸಾಗಿ ನಿಮ್ಮ ಕಾನ್ಫಿಡೆನ್ಸ್ ತೋರಿಸಿ. ನಿಮಗೆ ತಿಳಿದಿರಲಿ. ಹುಡುಗರಲ್ಲಿ ಡೇರಿಂಗ್ ಕಾನ್ಫಿಡೆನ್ಸ್ ಇರೋದು ಕಂಡರೆ ಹೆಚ್ಚಿನ ಹುಡುಗಿಯರಿಗೆ ಇಷ್ಟವಾಗುತ್ತದೆ. ನಿಮ್ಮ ಹುಡುಗಿಗೂ ಅದು ಇಷ್ಟವಾಗಬಹುದು. ಒಂದು ವೇಳೆ ನಿಮ್ಮ ತಲೆಯಲ್ಲಿ ಅಯ್ಯೋ ನನ್ನ ಬಳಿ ದುಡ್ಡು ಇಲ್ಲ, ಅವಳು ಏನು ಮಾಡುತ್ತಾಳೋ ಎನ್ನುಕೊಳ್ಳುವುದಾದಗಲೀ ಅಥವಾ ನಾನು ಹ್ಯಾಂಡ್ಸಮ್ ಇಲ್ಲ, ಅವಳಿಗೆ ಇಷ್ಟವಾಗುತ್ತೋ ಇಲ್ಲವೋ ಎನ್ನುವುದಾದಗಲೀ ಯೋಚ್ನೆ ಮಾಡೋದು ಬೇಡ. ಏಕೆಂದ್ರೆ ನಿಮ್ಮ ಆ ಹುಡುಗಿಗೂ ಗೊತ್ತು, ಅವಳ ಪೂರ್ತಿ ಜೀವನದಲ್ಲಿ ಒಮ್ಮೆನೂ ಹೃತಿಕ್ ರೋಷನ್ನಂಥ (Hritik Roshan) ಸ್ಟಾರ್ ಬಂದು ಪ್ರಪೋಸ್ ಮಾಡಲ್ಲ ಎಂದು. ಅದಕ್ಕೆ ನೇರವಾಗಿ ಇದ್ದದ್ದು ಇದ್ದ ಹಾಗೆ ಹೇಳಿ, ಕಾನ್ಫಿಡೆನ್ಸ್ ಬಿಡಬೇಡಿ ಎಂದಿದ್ದಾರೆ. ಬೆಸ್ಟ್ ಆಫ್ ಲಕ್.
ರೊಮ್ಯಾಂಟಿಕ್, ಕೇರಿಂಗ್, ಸೆಕ್ಸುವಲ್…. ಹೀಗೆಲ್ಲಾ ಕಿಸ್ ಮಾಡ್ತಾರಾ?