ಡಿವೋರ್ಸ್ ಗೆ ವರ್ಷಗಟ್ಟಲೆ ಕಾಯ್ಬೇಕಾಗಿಲ್ಲ. ವಾರಾಂತ್ಯದಲ್ಲಿ ನಿಮಗೆ ವಿಚ್ಛೇದನ ಸಿಗುತ್ತೆ. ನೀವು ಹೋಟೆಲ್ಗೆ ಹೋಗಿ ಹಣ ನೀಡಿದ್ರೆ ಸಾಕು. ಟೆನ್ಷನ್ ಇಲ್ದೆ ದೂರವಾಗ್ಬಹುದು.
ಸಣ್ಣ ಪುಟ್ಟ ವಿಚಾರಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡ್ತಿರುವ ಈ ಸಮಯದಲ್ಲಿ ವಿಚ್ಛೇದನ (divorce)ದ ಹೊಸ ಮತ್ತು ಆಶ್ಚರ್ಯಕರ ಟ್ರೆಂಡ್ ಹೊರಬಿದ್ದಿದೆ. ಡಿವೋರ್ಸ್ಗೆ ತಿಂಗಳು, ವರ್ಷಗಟ್ಟಲೆ ಕಾಯುವ ಪ್ರಮೇಯ ಈಗಿಲ್ಲ. ಒಂದು ವೀಕೆಂಡ್ನಲ್ಲಿ ನಿಮ್ಮ ಡಿವೋರ್ಸ್ ಕೆಲಸ ಮುಗಿಸಬಹುದು. ನೆದರ್ಲ್ಯಾಂಡ್ (Netherlands)ನಲ್ಲಿ ಹೊಸ ಬ್ಯುಸಿನೆಸ್ (Business) ಒಂದು ಚುರುಕು ಪಡೆದಿದೆ. ಶುಕ್ರವಾರ ವಿವಾಹಿತನಾಗಿ ಹೋಟೆಲ್ಗೆ ಚೆಕ್ ಇನ್ ಮಾಡಿದ್ರೆ ಭಾನುವಾರ ವಿಚ್ಛೇದಿತನಾಗಿ ಹೋಟೆಲ್ನಿಂದ ಚೆಕ್ ಔಟ್ ಮಾಡ್ಬಹುದು.
ಡಿವೋರ್ಸ್ ಹೋಟೆಲ್ (Divorce Hotel) : ಈ ಹೋಟೆಲನ್ನು ಜಿಮ್ ಹಫೆನ್ಸ್ ಎಂಬ 33 ವರ್ಷದ ಉದ್ಯಮಿ ಶುರು ಮಾಡಿದ್ದಾರೆ. ಈ ಹೋಟೆಲ್ ನಲ್ಲಿ ನಿಮಗೆ ವಿಚ್ಛೇದನ ಪ್ಯಾಕೇಜ್ ಸಿಗುತ್ತೆ. ವಕೀಲರು, ಮಧ್ಯವರ್ತಿಗಳ ಟೀಂ, ಹೋಟೆಲ್ ನಲ್ಲಿ ನಿಮಗಾಗಿ ಕಾಯ್ತಿರುತ್ತದೆ. ನೀವು ಶುಕ್ರವಾರ ಹೋಟೆಲ್ ಗೆ ಹೋಗ್ತಿದ್ದಂತೆ ನಿಮ್ಮ ಎಲ್ಲ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಭಾನುವಾರ ನೀವು ವಿಚ್ಛೇದಿತರಾದ ದಾಖಲೆ ಹಿಡಿದು ಹೋಟೆಲ್ನಿಂದ ಹೊರಗೆ ಬರಬಹುದು. ಇದಕ್ಕೆ ಒಂದು ನಿಶ್ಚಿತ ದರವನ್ನು ಫಿಕ್ಸ್ ಮಾಡಲಾಗಿದೆ.
undefined
ಮದುವೆಗೂ ಮುನ್ನ ಈ ಆಕ್ಟರ್ ಜೊತೆ ಒನ್ ನೈಟ್ ಸ್ಟ್ಯಾಂಡ್, ಶಾಕ್ ನೀಡಿದ ಸಂಜಯ್ ಕಪೂರ್ ಪತ್ನಿ!
ವಿಚ್ಛೇದ ಹೋಟೆಲ್ ನಿಂದ ನಿಮಗಾಗುವ ಲಾಭ? : ಈ ಹೋಟೆಲ್ ವಿಚ್ಛೇದನ ಪಡೆಯಲು ಬಯಸುವ ದಂಪತಿಗೆ ಸಾಕಷ್ಟು ಅನುಕೂಲಕರವಾಗಿದೆ. ನೀವು ಡಿವೋರ್ಸ್ ಗಾಗಿ ಕೋರ್ಟ್ ಗೆ ಪದೇ ಪದೇ ತಿರುಗುವಂತಿಲ್ಲ. ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಡಿವೋರ್ಸ್ ಕೆಲಸವನ್ನು ಯಾವುದೇ ಒತ್ತಡವಿಲ್ಲದೆ ತ್ವರಿತವಾಗಿ ಮತ್ತು ಶಾಂತಿಯುತವಾಗಿ ಪೂರ್ಣಗೊಳಿಸಲು, ಕಾನೂನು ಸಲಹೆ, ಮಾನಸಿಕ ಬೆಂಬಲ ಮತ್ತು ಮಧ್ಯಸ್ಥಿಕೆ ಎಲ್ಲವನ್ನೂ ಹೋಟೆಲ್ ನಲ್ಲಿ ಒಂದೇ ಬಾರಿ ಒದಗಿಸಲಾಗುತ್ತದೆ.
ಬೇರೆ ದೇಶದಲ್ಲೂ ಶುರುವಾಗಲಿದೆ ಹೋಟೆಲ್ : ಈ ಹೋಟೆಲ್ ನೆದರ್ಲ್ಯಾಂಡ್ ನ ಹಾರ್ಲೆಮ್ ನಗರದಲ್ಲಿದೆ. ಇದನ್ನು ದಿ ಸೆಪರೇಶನ್ ಇನ್ (The Separation Inn) ಎಂದೂ ಕರೆಯಲಾಗುತ್ತದೆ. ನೆದರ್ಲ್ಯಾಂಡ್ ನಲ್ಲಿ ಈ ಹೋಟೆಲ್ ಪ್ರಸಿದ್ಧಿ ಪಡೆದಿದೆ. ಈವರೆಗೆ 17 ದಂಪತಿ ವಿಚ್ಛೇದನ ಪಡೆದಿದ್ದಾರೆ. ಅದ್ರಲ್ಲಿ 16 ಮಂದಿ ಖುಷಿ ಖುಷಿಯಾಗಿ, ಯಾವುದೇ ಸಮಸ್ಯೆಯಿಲ್ಲದೆ ಬೇರ್ಪಟ್ಟಿದ್ದಾರೆ. ಈ ಹೋಟೆಲ್ ಮಾಲೀಕ ಜಿಮ್ ಹಫೆನ್ಸ್, ತಮ್ಮ ವ್ಯವಹಾರವನ್ನು ಬೇರೆ ದೇಶಗಳಿಗೆ ವಿಸ್ತರಿಸುವ ಆಲೋಚನೆ ಹೊಂದಿದ್ದಾರೆ. ಅಮೆರಿಕಾದಲ್ಲೂ ಸದ್ಯದಲ್ಲೇ ಈ ಸೇವೆ ಲಭ್ಯವಾಗಲಿದೆ. ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ನ ದೊಡ್ಡ ಹೋಟೆಲ್‌ಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಅಮೆರಿಕಾ ವಕೀಲರು ಹೇಳೋದೇನು? : ಜಿಮ್ ಹಫೆನ್ಸ್ ಈ ಬ್ಯುಸಿನೆಸ್ಗೆ ಕೆಲವರ ವಿರೋಧವಿದೆ. ಈ ಕಲ್ಪನೆಯು ಎಷ್ಟು ಆಕರ್ಷಕವಾಗಿದೆಯೋ, ಅಷ್ಟೇ ಅಪ್ರಾಯೋಗಿಕವಾಗಿದೆ ಎಂದಿದ್ದಾರೆ. ವಿಚ್ಛೇದನದ ಸಮಯವು ತುಂಬಾ ಭಾವನಾತ್ಮಕವಾಗಿದೆ ಮತ್ತು ಎಲ್ಲವನ್ನೂ ಎರಡು ದಿನಗಳಲ್ಲಿ ಮುಗಿಸುವುದು ಹೇಳಿದಷ್ಟು ಸುಲಭವಲ್ಲ. ಇದನ್ನು ಒಂದು ಬ್ಯುಸಿನೆಸ್, ಪ್ಯಾಕೇಜ್ ರೂಪದಲ್ಲಿ ನೀಡುವುದು ಸೂಕ್ತವಲ್ಲ ಎಂದು ಅಮೆರಿಕಾ ವಕೀಲರೊಬ್ಬರು ಹೇಳಿದ್ದಾರೆ.
ಅಪ್ರಾಪ್ತ ಪತ್ನಿ ಒಪ್ಪಿಗೆ ಮೇಲೆ ಸಂಬಂಧ ಬೆಳೆಸಿದ್ರೂ ಅದು ಬಲಾತ್ಕಾರ, ಕೋರ್ಟ್ ಮಹತ್ವದ ತೀರ್ಪು
ದೊಡ್ಡ ಬ್ಯುಸಿನೆಸ್ ಆಗಿದೆ ವಿಚ್ಛೇದನ : ಭಾರತದಲ್ಲಿಯೇ ವಿಚ್ಛೇದನ ಪಡೆಯುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗಿದೆ. ಇನ್ನು ಅಮೆರಿಕಾದಲ್ಲಿ ಇದೊಂದು ದೊಡ್ಡ ಬ್ಯುಸಿನೆಸ್ ಆಗಿದೆ. ವಿಚ್ಛೇದನ ಉದ್ಯಮ 175 ಬಿಲಿಯನ್ ಡಾಲರ್ ತಲುಪಿದೆ. ಪ್ರತಿ ವರ್ಷ ಅಮೆರಿಕಾದಲ್ಲಿ 1.2 ಮಿಲಿಯನ್ ಜನರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅಂಥವರಿಗೆ ಈ ಡಿವೋರ್ಸ್ ಹೋಟೆಲ್ ಸಾಕಷ್ಟು ನೆರವಾಗಲಿದೆ. ಅಮೆರಿಕಾದಲ್ಲಿ ದೊಡ್ಡ ಧಮಾಕಾ ಮಾಡಲು ಈ ಹೋಟೆಲ್ ಸಿದ್ಧವಾಗ್ತಿದೆ. ಭಾರತದಲ್ಲಿ ಪ್ರತಿ ವರ್ಷ 43 ಸಾವಿರ ಮಂದಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸ್ತಿದ್ದಾರೆ. ಅಮೆರಿಕಾಕ್ಕೆ ಹೋಲಿಕೆ ಮಾಡಿದ್ರೆ ಇದು ಕಡಿಮೆ ಎನ್ನಿಸಿದ್ರೂ ಭಾರತಕ್ಕೆ ಇದು ದೊಡ್ಡ ಸಂಖ್ಯೆಯಾಗಿದೆ.
ಕಷ್ಟ ಅಂತ ಹಣ ಕೊಟ್ರೆ ಏನೆನೆಲ್ಲಾ ಆಗುತ್ತೆ ನೋಡಿ! ಸಾಲ ಕೊಡೋದೇ ತಪ್ಪಾ?