ಕಾಂಗ್ರೆಸ್‌ಗೆ ಗುಡ್ ಬೈ, ಮುಂದಿನ ಭವಿಷ್ಯಕ್ಕೆ ಜಿತಿನ್ ಪ್ರಸಾದ್ ಹಾದಿ ಹುಡುಕಿಕೊಂಡ್ರಾ?

By Suvarna NewsFirst Published Jun 9, 2021, 8:52 PM IST
Highlights

* ಉತ್ತರ ಪ್ರದೇಶ ಜಿತಿನ್ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬಾಯ್
* ಕೇಂದ್ರ ಸಚಿವ ಪಿಯೂಶ್ ಗೊಯಲ್ ನೇತೃತ್ವದಲ್ಲಿ ಕಮಲ ಹಿಡಿದ ಜಿತಿನ್ ಪ್ರಸಾದ್
* ಜಿತಿನ್ ಪ್ರಸಾದ್ ಮುಂದಿನ ಭವಿಷ್ಯದ ಹಾದಿ ಹುಡುಕಿಕೊಂಡ್ರಾ?

ನವದೆಹಲಿ, (ಜೂನ್. 09) : 'ಯುವ ರಾಜಕಾರಣಗಳ ವಲಸೆ'..! ರಾಜಕಾರಣಿಗಳಿಗೆ ಯಾವಾಗಬೇಕಾದ್ರೂ ಸಿದ್ದಾಂತ ಬದಲಾಗಬಹುದು, ಅದರಂತೆ ಪಕ್ಷವೂ ಬದಲಾಗಬಹುದು ಅನ್ನೋದೊಂದು ಮಾತು ಇದೆ. ಆದರೆ ಹತ್ತಾರು ಆಶೆಯಗಳನ್ನು ಹೊತ್ತು ತಲೆತಲೆಮಾರುಗಳ ರಾಜಕೀಯ ನಂಟು ಅಂಟಿಸಿಕೊಂಡು, ಸೆಂಟ್ರಲ್, ಸ್ಟೇಟ್ ಅನ್ನೋ ಬೇದವಿಲ್ಲದ ಅಧಿಕಾರ ಅನುಭವಿಸಿ, ಕೊನೆಗೆ ರಾಜಕೀಯವಾಗಿ ಜನ್ಮ ಕೊಟ್ಟ ಪಕ್ಷಕ್ಕೆ ಹಿಂಮುಖವಾಗಿಸುತ್ತಿರುವ ಯುವಕರ ಸಂಖ್ಯೆ ಇದೀಗ ಹೆಚ್ಚುತ್ತಿದೆ. ಇದೀಗ ಇಂಥದೊಂದು ಶಾಕ್‌ಗೆ ಸಿಲುಕಿದೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ.

ಕಾಂಗ್ರೆಸ್ ನಿಂದ ಮತ್ತೊಬ್ಬ ಯಂಗ್ ಟರ್ಕ್ ಹೊರಬಿದ್ದಿದ್ದಾರೆ. ಉತ್ತರ ಪ್ರದೇಶ ಮೂಲದ ಕಾಂಗ್ರೆಸ್‌ನ ಯುವ ನಾಯಕ, ರಾಹುಲ್ ಗಾಂಧಿ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ, ಕೇಸರಿ ಶಾಲು ಹೊದ್ದುಕೊಂಡಿದ್ದಾರೆ. 

ಧ್ವಂಸಗೊಂಡ, ದಿಕ್ಕಿಲ್ಲದ ಟೈಟಾನಿಕ್‌ ಮುಳುಗಲಾರಂಭಿಸಿದೆ: ಕೈಗೆ ಬಿಜೆಪಿ ನಾಯಕನ ಪೆಟ್ಟು!

ಇಂದು (ಬುಧವಾರ) ಕೇಂದ್ರ ಸಚಿವ ಪಿಯೂಶ್ ಗೊಯಲ್ ನೇತೃತ್ವದಲ್ಲಿ ಕಮಲ ಹಿಡಿದ ಜಿತಿನ್ ಪ್ರಸಾದ್, ಬಳಿಕ ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೀಗೆ ಅನೇಕ ಮಂದಿ ಬಿಜೆಪಿ ನಾಯಕರನ್ನು ಭೇಟಿಯಾದರು.  ಮಧ್ಯಪ್ರದೇಶದ ಯುವರಾಜ ಜ್ಯೋತಿರ್ ಅದಿತ್ಯ ಸಿಂದ್ಯಾ ನಂತರ ಕಾಂಗ್ರೆಸ್ ನಿಂದ ಹೊರಹೋಗುತ್ತಿರುವ ಮತ್ತೊಬ್ಬ ಯುವ ನಾಯಕ ಜಿತಿನ್ ಪ್ರಸಾದ್.

ಯುಪಿಯ ಯುವ ನಾಯಕ 
ರಾಜಸ್ಥಾನದ ಸಚಿನ್ ಪೈಲೆಟ್, ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧ್ಯಾ, ಮಹಾರಾಷ್ಟದ ಮಿಲಿಂದ್ ದಿಯೋರ, ಉತ್ತರ ಪ್ರದೇಶದ ಜಿತಿನ್ ಪ್ರಸಾದ್. ಈ ನಾಲ್ವರು ಯುಪಿಎ 1 ಮತ್ತು 2ನೇ ಸರ್ಕಾರಗಳಲ್ಲಿ ಯುವಜನತೆಯ ಫೇಸ್ ಅಂತ್ಲೆ ಮುಖ್ಯಪಾತ್ರ ವಹಿಸಿದ್ದರು. ಜೊತೆಗೆ ರಾಹುಲ್ ಗಾಂಧಿಯ ಬಳಗದಲ್ಲಿ ಆತ್ಮೀಯವಾಗಿ ಗುರುತಿಸಿಕೊಂಡಿದ್ದರು. ಇವೆರೆಲ್ಲಾ ಕಾಂಗ್ರೆಸ್‌ನ ಭವಿಷ್ಯದ ನಾಯಕರು ಅಂತಲೇ ಬಿಂಬಿಸಲಾಗಿತ್ತು. ತಂದೆ, ತಾತಂದಿರ ವಂಶಪಾರಂಪರ್ಯದ ಹಿನ್ನೆಲೆಯಿಂದ ಬಂದರೂ ಎಐಸಿಸಿ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು.

ಐದಾರು ಬಾರಿ ಸಂಸದರಾದರೂ ಮಂತ್ರಿ ಪದವಿ ಸಿಗದಿದ್ದರೂ, 45ರ ಆಸುಪಾಸಿನಲ್ಲಿರುವ ಈ ಯಂಗ್ ಟೀಂ ವಯಸ್ಸಿಗೆ ಮೀರಿದ ಹುದ್ದೆಗಳನ್ನು ಪಡೆದಿದೆ. ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ರಾಜ್ಯ ಘಟಕಗಳ ಅಧ್ಯಕ್ಷರಾಗಿದ್ದಾರೆ, ಕಾಂಗ್ರೆಸ್ ಅಧಿಕಾರ ಇರುವ ತನಕ ಎಲ್ಲವನ್ನು ಅನುಭವಿಸಿದ್ದಾರೆ. ಅದರೂ ಈಗ `ಕೈ'ಗೆ ಕೈಕೊಟ್ಟು, ಕಮಲ ಹಿಡಿದಿದ್ದಾರೆ.

`ನನ್ನ ಮುಂದಿನ ಭವಿಷ್ಯ ಏನು..?' ಅನ್ನೋ ಈ ಪ್ರಶ್ನೆಗೆ ಜಿತಿನ್ ಪ್ರಸಾದ್ ಹಾದಿ ಹುಡುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. 2022ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಯೋಗಿ ಅದಿತ್ಯನಾಥ್ ಸಿಎಂ ಆಗಿರುವ ಉತ್ತರ ಪ್ರದೇಶದಲ್ಲಿ ಈಗ ಬಿಜೆಪಿಗೆ ತನ್ನ ಪ್ರಮುಖ ಓಟ್ ಬ್ಯಾಂಕ್ ಬ್ರಾಹ್ಮಣ ಸಮುದಾಯದ ಮತಗಳು ಕೈ ತಪ್ಪಲಿವೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇಂಥ ಹೊತ್ತಲ್ಲಿ ಬ್ರಾಹ್ಮಣ ಸಮುದಾಯ ಯುವ ನಾಯಕರ ಹುಡುಕಾಟದಲ್ಲಿ ಬಿಜೆಪಿಗೆ ಜಿತಿನ್ ಪ್ರಸಾದ್ ಒಂದಷ್ಟು ಸಹಾಯಕವಾಗಬಲ್ಲರು ಎನ್ನಲಾಗುತ್ತಿದೆ.

ಜಿತಿನ್ ಪ್ರಸಾದ್, ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದರು, ಬಳಿಕ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಮೊನ್ನೆಯ ತನಕ ಪಶ್ಚಿಮ ಬಂಗಾಳ ಉಸ್ತುವಾರಿ ಆಗಿದ್ದರು. ಇಷ್ಟೆಲ್ಲಾ ಆಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದಾಹೌರ ಕ್ಷೇತ್ರದಲ್ಲಿ ಜಿತಿನ್ ಸೋತಿದ್ದರು. ಬಳಿಕ ಉಸ್ತುವಾರಿ ಹೊತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಕೊನೆಗೆ ಒಂದು ಸೀಟು ಕಾಂಗ್ರೆಸ್ ಜಯಗಳಿಸಲಿಲ್ಲ ಅನ್ನೋದು ಫಲಿತಾಂಶ ಹೇಳುತ್ತಿದೆ. ಇತ್ತೀಚೆಗೆ ಇಡೀ ಕಾಂಗ್ರೆಸ್ ಪಕ್ಷ ಮರು ಸಂಘಟನೆಯಾಗಬೇಕು ಅಂಥ ರೆಬಲ್ ಆಗಿ ಬರೆದಿದ್ದ ಪತ್ರಕ್ಕೆ (ಜಿ-24) ಜಿತಿನ್ ಕೂಡ ಸಹಿ ಹಾಕಿದ್ದರು. ಆದರೂ ಕೂಡ ಕಾಂಗ್ರೆಸ್ ಹೈಕಮಾಂಡ್ ಜಿತಿನ್ ಅವರಿಗೆ ಪಶ್ಚಿಮ ಬಂಗಾಳದ ಉಸ್ತುವಾರಿ ವಹಿಸಿತ್ತು.

click me!