ಬಡವರು, ದಲಿತರ ಪರ ಅಂತಾ ಇದ್ರೆ ಅದು ಮೋದಿ ಸರ್ಕಾರ: ಸುಮಲತಾ ಅಂಬರೀಶ್

Published : Apr 28, 2024, 04:26 PM IST
ಬಡವರು, ದಲಿತರ ಪರ ಅಂತಾ ಇದ್ರೆ ಅದು ಮೋದಿ ಸರ್ಕಾರ: ಸುಮಲತಾ ಅಂಬರೀಶ್

ಸಾರಾಂಶ

ಇಂದು ಇಡೀ ದೇಶದ ಜನರ ಮುಂದಿರುವ ಒಂದೇ ಒಂದು ಆಯ್ಕೆ ಅದು ಬಿಜೆಪಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ, ಆ ಮೂಲಕ ನಮ್ಮ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ ಕೊಂಡಾಡಿದರು.

ದಾವಣಗೆರೆ (ಏ.28): ದಾವಣಗೆರೆ ಜಿಲ್ಲೆಯೊಂದಿಗೆ ನನಗೆ ಪ್ರೀತಿಯ ಒಡನಾಟ ಇದೆ. ದಾವಣಗೆರೆ ಬೆಣ್ಣೆ ದೋಸೆ ಅಂಬರೀಶ್ ಅವರಿಗೆ ಅತ್ಯಂತ ಇಷ್ಟವಾದ ಆಹಾರವಾಗಿತ್ತು. ನಾನು ಸಂಸದರಾದ ಮೇಲೆ ಮೊದಲ ಬಾರಿಗೆ ಜಿಎಂ ಸಿದ್ದೇಶ್ವರ ಅವರು ಅಶೀರ್ವಾದ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಜಿಎಂ ಸಿದ್ದೇಶ್ವರ ಇಡೀ ಕುಟುಂಬ ತಮ್ಮ ಫಲಿತಾಂಶಕ್ಕಿಂತ ನನ್ನ ಫಲಿತಾಂಶದ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು ಎಂದು ಸ್ಮರಿಸಿದರು.
 
ಇಂದು ದಾವಣಗೆರೆಯಲ್ಲಿ ನಡೆದ ಮೋದಿ ಸಮಾವೇಶದಲ್ಲಿ ಮಾತನಾಡಿದ ಅವರು,  ಪ್ರಧಾನಿ ಮೋದಿಯವರನ್ನ ಇಂದು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದೆ. ಒಂದು ಸದೃಢ ಭಾರತವನ್ನು ಕಟ್ಟುವ ಉದ್ದೇಶ ಮೋದಿಯವರಿಗೆ. ಹೀಗಾಗಿ ಮೋದಿ‌ ನಾಯಕತ್ವಕ್ಕೆ‌ ಎಲ್ಲರು ಮತ ನೀಡಬೇಕು. ದಲಿತರ ಪರ, ರೈತರರ ಪರ, ಯುವಕರ ಪರ ಸರ್ಕಾರ ಅಂತಾ ಇದ್ರೆ ಅದು ಮೋದಿ ಸರ್ಕಾರ ಎಂದರು.

ಪ್ರಧಾನಿ ಮೋದಿ 10 ವರ್ಷಗಳಿಂದ ಸುಳ್ಳು ಹೇಳುತ್ತ ಬಂದಿದ್ದಾರೆ: ಲಕ್ಷ್ಮಣ ಸವದಿ

ಇಂದು ಇಡೀ ದೇಶದ ಜನರ ಮುಂದಿರುವ ಒಂದೇ ಒಂದು ಆಯ್ಕೆ ಅದು ಬಿಜೆಪಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ, ಆ ಮೂಲಕ ನಮ್ಮ ಭವಿಷ್ಯ ಸುಭದ್ರವಾಗಿರುತ್ತದೆ. ಈ ಹಿಂದೆ ಅಧಿಕಾರದಲ್ಲಿದ್ದ ಎಲ್ಲರೂ ಮಾತನಾಡಿ ಹೋದ್ರು. ಆದರೆ ಮೋದಿ ಮಾತು ಕೊಟ್ಟಂತೆ ಶ್ರೀರಾಮ ಮಂದಿರ ಕಟ್ಟಿದರು. ಶ್ರೀರಾಮ 12 ವರ್ಷ ವನವಾಸ ಹೋಗಿದ್ದರು. ಆದರೆ ನಾವು 500 ವರ್ಷ ರಾಮನನ್ನು ವನವಾಸಕ್ಕೆ‌ ಕಳಿಸಿದ್ವಿ. ಅಂತಹ ರಾಮನನ್ನು ಮೋದಿ ಮತ್ತೆ ಕರೆತಂದಿದ್ದಾರೆ ಎಂದು ಮೋದಿಯವರನ್ನು ಹಾಡಿ ಹೊಗಳಿದರು.

ದಾವಣಗೆರೆ ಬೆಣ್ಣೆ ದೋಸೆಗೆ ತಯಾರಿ ಮಾಡಿ, ಗೆಲುವಿನ ಸಂಭ್ರಮಕ್ಕೆ ಸೂಚನೆ ನೀಡಿದ ಮೋದಿ!

ಮೋದಿ ಆಡಳಿತದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯಾಗಿದೆ. ರೈಲ್ವೆ, ಕ್ರೀಡಾ ಕ್ಷೇತ್ರ, ತಂತ್ರಜ್ಞಾನ, ವಸತಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಬಾರಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಆಗುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. ಆಸೆ ಆಮಿಷೆಗಳಿಗೆ ಒಳಗಾಗದೆ ಪ್ರತಿಯೊಬ್ಬರು ಮೋದಿಯವರನ್ನ ಬೆಂಬಲಿಸಬೇಕು ಎಂದು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ