ಕೇವಲ 10 ವರ್ಷಗಳ ಹಿಂದೆ ಭಾರತ ಹುಟ್ಟಿದೆ ಎಂಬ ಭ್ರಮೆಯಲ್ಲಿದ್ದಾರೆ:ಬಿಜೆಪಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

By Ravi JanekalFirst Published Apr 28, 2024, 5:33 PM IST
Highlights

ಜಗದೀಶ್ ಶೆಟ್ಟರ್ ಸಿಎಂ, ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಗೆ ಶೆಟ್ಟರ್ ಕೊಡುಗೆ ಶೂನ್ಯವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.

ಬೆಳಗಾವಿ (ಏ.28): ಬೆಳಗಾವಿ ಜಿಲ್ಲೆಗೆ ಒಂದು ಇತಿಹಾಸವಿದೆ. ನಮ್ಮ ಜಿಲ್ಲೆಯ ಜನ ಸ್ವಾಭಿಮಾನಿಗಳು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ಮಹನೀಯರು ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿದ್ದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ನಮಗೆ ಬೆಳಗಾವಿ ಜನರು ಸಹಕಾರ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಬೆಂಬಲಿಸುತ್ತಾರೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಚುನಾವಣೆ ಪೂರ್ವ ಮಾತುಕೊಟ್ಟಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ. ಬರಗಾಲದಂಥ ಪರಿಸ್ಥಿತಿಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ ಜಾರಿಗೊಳಿಸಿದ ಸಾರ್ಥಕತೆ ಇದೆ ಎಂದರು.

ಬಡವರು, ದಲಿತರ ಪರ ಅಂತಾ ಇದ್ರೆ ಅದು ಮೋದಿ ಸರ್ಕಾರ: ಸುಮಲತಾ ಅಂಬರೀಶ್

ಕೇವಲ ಹತ್ತು ವರ್ಷಗಳ ಹಿಂದೆ ಭಾರತ ಹುಟ್ಟಿದೆ ಎಂಬ ಭ್ರಮೆಯಲ್ಲಿ ಬಿಜೆಪಿಗರಿದ್ದಾರೆ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಬಡತನ, ರೋಗಗಳು ತಾಂಡವವಾಡುತ್ತಿದ್ದವು. ಆದರೆ ಜಗತ್ತಿನಲ್ಲಿ ಭಾರತಕ್ಕೆ ಸ್ಥಾ‌ನಮಾನ ಸಿಗಲು ಕಾಂಗ್ರೆಸ್ ‌ಸರ್ಕಾರದ ಅಭಿವೃದ್ಧಿ ಯೋಜನೆಗಳು ಕಾರಣ ಎಂದು ಸಮರ್ಥಿಸಿಕೊಂಡರು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ನಮ್ಮ ಅಭ್ಯರ್ಥಿ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬಿಜೆಪಿ ಸ್ವಾಭಿಮಾನ ಬಿಟ್ಟು ಹೊರಗಿನವರಾದ ಜಗದೀಶ್ ಶೆಟ್ಟರ್ ಟಿಕೆಟ್ ನೀಡಿದೆ. ಜಗದೀಶ್ ಶೆಟ್ಟರ್ ಸಿಎಂ, ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಗೆ ಶೆಟ್ಟರ್ ಕೊಡುಗೆ ಶೂನ್ಯವಾಗಿದೆ. ಬೆಳಗಾವಿಗೆ ಬಂದ ಹೈಕೋರ್ಟ್ ಧಾರವಾಡಕ್ಕೆ, ಉದ್ಯಮಗಳನ್ನು ಹುಬ್ಬಳ್ಳಿಹೊಯ್ದಿದ್ದಾರೆ. ಆದರೆ ಇವತ್ತು ಬೆಳಗಾವಿ ಜನರ ಮುಂದೆ ಕರ್ಮಭೂಮಿ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಜಗದೀಶ್ ಶೆಟ್ಟರ್ ನಮ್ಮ ಜಿಲ್ಲೆಗೆ ಬಹಳಷ್ಟು ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

ಲೋಕಸಭಾ ಚುನಾವಣೆ 2024: 9 ತಿಂಗಳ ಹಿಂದೆ ಶೆಟ್ಟರ್‌ ದಂಪತಿ ಅಳ್ತಾ ಬಂದಿದ್ರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌

ಮಜಬೂರಿ ಎಂಪಿ ಬೇಡ, ಮಜಬೂತ್ ಎಂಪಿ ಬೇಕು

ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿ, ಕರ್ಮಭೂಮಿ ಅಂತಿದ್ದಾರೆ. ನಮಗೆ ಬಾಡಿಗೆ ಎಂಪಿ ಬೇಡ, ಸ್ವಂತ ಎಂಪಿ ಬೇಕು ಮಜಬೂರಿ ಎಂಪಿ ಬೇಡ, ಮಜಬೂತ್ ಎಂಪಿ ಬೇಕು. ಜಗದೀಶ್ ಶೆಟ್ಟರ್ ಅವರು ಬೆಳಗಾವಿಯ ಬೀಗರು. ಬೀಗರು ಮನೆಗೆ ಬಂದು ಊಟ ಮಾಡಿ ಹೋಗ್ತಾರೆ. ಇಂಥವರು ಮನೆ ಮಾಲೀಕರು ಹೇಗೆ ಆಗ್ತಾರೆ ಎಂದು ವ್ಯಂಗ್ಯ ಮಾಡಿದರು. ಅದಕ್ಕಾಗಿಯೇ ಮನೆ ಮಗ ಮೃಣಾಲ್‌ ಹೆಬ್ಬಾಳ್ಕರ್‌ಗೆ ಅವಕಾಶ ನೀಡಬೇಕು ಮನವಿ ಮಾಡಿದರು. 

click me!