ಭಾರತದ ಸಿನಿ ದಿಗ್ಗಜರಿಂದ ಪುನೀತ್ ನಮನ, ಎಕ್ಸ್‌ಪ್ರೆಸ್‌ವೇನಲ್ಲಿ ಇಳಿದ ಮೋದಿ ವಿಮಾನ; ನ.16ರ ಟಾಪ್ 10 ಸುದ್ದಿ!

By Suvarna NewsFirst Published Nov 16, 2021, 6:23 PM IST
Highlights

ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಇಂದು ಭಾರತದ ಸಿನಿ ದಿಗ್ಗಜರು ಗೀತ  ನಮನ ಸಲ್ಲಿಸಿದ್ದಾರೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ನ. 17ಕ್ಕೆ ತೆರೆಯಲಿದೆ ಕರ್ತಾಪುರ್ ಕಾರಿಡಾರ್ ತೆರಯಲಿದೆ. ಫೀಲ್ಡಿಂಗ್ ವೇಳೆ ಡಿಕ್ಕಿ, ಗಂಭೀರ ಸ್ಥಿತಿಯಲ್ಲಿ ಯುವ ಕ್ರಿಕೆಟಿಗ. ಉಗ್ರರಿಗೆ ನೆರವು ನೀಡುತ್ತಿದ್ದ ಉದ್ಯಮಿಗಳ ಹತ್ಯೆ ಸೇರಿದಂತೆ ನವೆಂಬರ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಹುಟ್ಟಿದ 6 ತಿಂಗಳಿಗೆ ತೆರೆಗೆ, 27 ಚಿತ್ರಗಳು, ಸಾಮಾಜಿಕ ಕೆಲಸಗಳು, ಯಾವತ್ತೂ ಚಿರಸ್ಥಾಯಿ ಅಪ್ಪು!

ಅದು 1975, ಮಾರ್ಚ್‌ 17 ರಂದು ಚೆನ್ನೈ ಆಸ್ಪತ್ರೆಯಲ್ಲಿ ಡಾ. ರಾಜ್ ದಂಪತಿಗೆ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವಣ್ಣ, ರಾಘಣ್ಣ, ಸಹೋದರಿಯರಾದ ಪೂರ್ಣಿಮಾ, ಲಕ್ಷ್ಮೀ ಅವರ ಮುದ್ದಿನ ತಮ್ಮ, ಪ್ರೀತಿಯ ಅಪ್ಪುವಾಗಿ ಬೆಳೆಯುತ್ತಾರೆ. 6 ತಿಂಗಳಿಗೆ 'ಪ್ರೇಮದ ಕಾಣಿಕೆ' ಮೂಲಕ ತೆರೆಯೇರಿದ ಅದೃಷ್ಟವಂತ. ಆ ನಂತರ ಸಾಲು ಸಾಲು ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುತ್ತಾರೆ. 'ಬೆಟ್ಟದ ಹೂ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಾರೆ.

Anti terror operation; ಉಗ್ರರ ನೆರವು ನೀಡುತ್ತಿದ್ದ ಇಬ್ಬರು ಶ್ರೀನಗರ ಉದ್ಯಮಿಗಳ ಹತ್ಯೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಇತ್ತ ಅಸ್ಸಾಂ, ಮಣಿಪುರದಲ್ಲೂ ಭಾರತೀಯ ಸೇನೆ ಗುರಿಯಾಗಿಸಿ ದಾಳಿ ನಡೆಯುತ್ತಲೇ ಇದೆ. ಇತ್ತೀಚೀಗೆ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಮೇಲಿನ ಭೀಕರ ದಾಳಿ ಭದ್ರತಾ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಉಗ್ರ ಚಟುವಟಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡಡೆಸುತ್ತಿದೆ. ಇದೀಗ ಶ್ರೀನಗರದ ಹೈದರ್‌ಪೋರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ(Hyderpora encounter) ಇಬ್ಬರು ಉಗ್ರರು ಹಾಗೂ ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಉದ್ಯಮಿಗಳು ಹತರಾಗಿದ್ದಾರೆ.

ಗುರು ನಾನಕ್ ಜಯಂತಿಗೂ ಮುನ್ನ ಸಿಕ್ತು ಗುಡ್‌ನ್ಯೂಸ್: ನ. 17ಕ್ಕೆ ತೆರೆಯಲಿದೆ Kartarpur Corridor!

ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿಯೊಂದು ಲಭಿಸಿದೆ. ಹೌದು ಕರ್ತಾರ್‌ಪುರ್ ಸಾಹಿಬ್ ((Kartarpur Sahib Corridor) ನವೆಂಬರ್ 17ರಂದು ತೆರೆಯಲಿದೆ . ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕು (Coronavirus/0 ಇಡೀ ವಿಶ್ವ, ಭಾರತವನ್ನು ಕಾಡುತ್ತಿದ್ದ ಸಂದರ್ಭದಲ್ಲಿ 2020ರ ಮಾರ್ಚ್‌ನಿಂದ ಮುಚ್ಚಲಾಗಿದೆ. ಈ ವಿಚಾರವಾಗಿ ನವೆಂಬರ್ 14ರಂದು ಪಂಜಾಬ್‌ ಬಿಜೆಪಿ ನಾಯಕರ ಒಂದು ನಿಯೋಗ ಪ್ರಧಾನಿ ಮೋದಿಯನ್ನು (PM Narendra Modi) ಭೇಟಿಯಾಗಿತ್ತು. 

Audit Diwas| 'ಹಿಂದಿನ ಸರ್ಕಾರಗಳ ಸತ್ಯ ನಾವು ಪ್ರಾಮಾಣಿಕವಾಗಿ ಇಟ್ಟುಕೊಂಡಿದ್ದೇವೆ'

 'ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ-ಸಿಎಜಿ' (Comptroller and Auditor General of India) ಕಚೇರಿಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ  (narendra Modi) ಅವರು ನವೆಂಬರ್ 16 ರಂದು ಅನಾವರಣಗೊಳಿಸಿದ್ದಾರೆ. ಮೊದಲ ಲೆಕ್ಕ ಪರಿಶೋಧನಾ ದಿನದ (Audit Diwas) ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದಾರೆ.

Purvanchal Expressway Inauguration| ಸೇನಾ ಸರಕು ವಿಮಾನದಲ್ಲಿ ಮೋದಿ ಲ್ಯಾಂಡಿಂಗ್‌!

ಉತ್ತರ ಪ್ರದೇಶದಲ್ಲಿ 22,500 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ 340 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್‌ ಹೆದ್ದಾರಿಯ ಉದ್ಘಾಟನೆಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿನೂತನ ರೀತಿಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಅವರು ಸೇನಾ ಸರಕು ವಿಮಾನದಲ್ಲಿ ಬಂದು ಹೆದ್ದಾರಿಯ ಮೇಲೆ ಲ್ಯಾಂಡ್‌ ಆಗಿದ್ದಾರೆ.

Cricket: ಫಿಲ್ಡಿಂಗ್‌ ವೇಳೆ ಡಿಕ್ಕಿ: ಯುವ ಕ್ರಿಕೆಟಿಗನ ತಲೆಗೆ ಬಲವಾದ ಪೆಟ್ಟು!

ಕೆಎಸ್‌ಸಿಎ (KSCA) ಮೊದಲ ಡಿವಿಷನ್‌ ಕ್ರಿಕೆಟ್‌ (First Division Cricket) ಟೂರ್ನಿಯ ಪಂದ್ಯದ ಫೀಲ್ಡಿಂಗ್‌ನಲ್ಲಿದ್ದ (Fielding) ಆಟಗಾರರು ಪರಸ್ಪರ ಡಿಕ್ಕಿಯಾದ ಪರಿಣಾಮ ಪ್ರಜ್ವಲ್‌ ಶಿರೋಳ (Prajwal Shirol) ಎಂಬಾತ ಪ್ರಜ್ಞಾ ಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದ ಘಟನೆ ಶನಿವಾರ (ನ.13) ನಡೆದಿದೆ. 

Puneeth Rajkumar: ನಾಗೇಂದ್ರ ಪ್ರಸಾದ್, ಗುರುಕಿರಣ್ ನಡಿ ನಮನಕ್ಕೆ ಕಿಚ್ಚ ಸುದೀಪ್ ಧ್ವನಿ

ಇಂದು ಅರಮನೆ ಮೈದಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲು ಕರ್ನಾಟಕ ಫಿಲಂ ಚೇಂಬರ್ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಗುರುಕಿರಣ್ ಬರೆದಿರುವ ನುಡಿ ನಮನಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡುತ್ತಿದ್ದಾರೆ. ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರಭಾಷೆ ನಟ,ನಟಿಯರು ಆಗಮಿಸಿದ್ದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

Scammersಯಿಂದ ನಿಮ್ಮ ಆ್ಯಂಡ್ರಾಯ್ಡ್ ಫೋನ್‌ ರಕ್ಷಿಸಲು ಇಲ್ಲಿವೆ 8 ಸುಲಭ ಉಪಾಯಗಳು!

ನೀವು Android ಫೋನ್ ಅನ್ನು ಬಳಸುತ್ತಿದ್ದರೆ ನೀವು ಏನು ಡೌನ್‌ಲೋಡ್ (Download) ಮಾಡುತ್ತಿದ್ದೀರಿ ಮತ್ತು  ಯಾವ ಅಪ್ಲಿಕೇಶನ್‌ಗಳು  ನಿಮ್ಮ ಖಾಸಗಿ ಮಾಹಿತಿಯ ಹಂಚಿಕೊಳ್ಳಲು ಅನುಮತಿ ಹೊಂದಿವೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. 

Ertiga, XL6 ಪೈಪೋಟಿ ನೀಡಲು ಬರಲಿದೆ ಕಿಯಾದ ಹೊಸ MPV

ಸೆಲ್ತೋಸ್ (Seltos) ಮತ್ತು ಸೊನೆಟ್ (Sonet) ಕಾರುಗಳ ಮೂಲಕ ಭಾರತದಲ್ಲಿ ತನ್ನದೇ ಆದ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿರುವ ಕಿಯಾ ಇಂಡಿಯಾ (Kia India), ಮುಂದಿನ ವರ್ಷ ಮತ್ತೊಂದು ಕಾರನ್ನು ಬಿಡುಗಡೆ ಮಾಡಲಿದೆ. ಈ ಎಂಪಿವಿ, ಮಾರುತಿಯ ಎರ್ಟಿಗಾ ಮತ್ತು ಎಕ್ಸ್‌ಎಲ್6ಗೆ ಸ್ಪರ್ಧೆ ನೀಡಲಿದೆ.

click me!