ಕನಕಪುರದಲ್ಲಿ ನಡೆದ ಬೃಹತ್ ಮಹಿಳಾ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್, ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಹಕಾರದಿಂದಲೇ ತಮಗೆ ಗೆಲುವು ಸಿಕ್ಕಿದೆ ಎಂದಿದ್ದಾರೆ. ಎಚ್‌ಡಿಕೆ ರಾಜೀನಾಮೆ ಬಳಿಕ ಚನ್ನಪಟ್ಟಣ ಜನರ ಸಮಸ್ಯೆ ಆಲಿಸಿದ್ದೆ ಎಂದು ತಿಳಿಸಿದ್ದಾರೆ.
ಕನಕಪುರ (ನ.25): ಕಾಂಗ್ರೆಸ್ ಸರ್ಕಾರ ಚನ್ನಪಟ್ಟಣದ ಜನತೆಯ ಆಶೋತ್ತರಗಳನ್ನು ಈಡೇರಿಸಲಿದೆ. ಮನೆ, ನಿವೇಶನ ಹಂಚಿಕೆ, ಬಗರ್‌ಹುಕುಂ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಚುನಾವಣೆಗೆ ಮುನ್ನ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ ಬಳಿಕ ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ಆ ಕ್ಷೇತ್ರದ ಜನರ ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದ ಪರಿಣಾಮ ಈಗ ನಮಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಅವರ ಋಣ ತೀರಿಸುತ್ತೇವೆ. ಅಭಿವೃದ್ಧಿ ಕುರಿತು ಯೋಗೇಶ್ವರ್ ಜತೆ ಮಾತನಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆಯಾಗಿದೆ. ಅವರು ಗುಣಮುಖರಾದ ಬಳಿಕ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮೊದಲು ಯೋಗೇಶ್ವರ್ ಅವರ ಜತೆಗೆ ಅಧಿಕಾರಿಗಳ ಸಭೆ ಕರೆದು ನಿವೇಶನ, ಮನೆ ಹಂಚಿಕೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಎಲ್ಲಾ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
undefined
ಬಿಜೆಪಿ -ಜೆಡಿಎಸ್ ಸಹಕಾರದಿಂದ ಜಯ: ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಕೇವಲ ಹದಿನಾರು ಸಾವಿರ ಮತಗಳು ಬಂದಿದ್ದವು. ಲೋಕಸಭಾ ಚುನಾವಣೆಯಲ್ಲಿ ಮತ ಗಳಿಕೆ ಹೆಚ್ಚಾಗಿದ್ದು, ಈ ಉಪ ಚುನಾವಣೆಯಲ್ಲಿ ಬಿಜೆಪಿ, ಜನತಾದಳದ ನಾಯಕರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ದೊರೆತ ಕಾರಣ ನಮಗೆ ಇಷ್ಟೊಂದು ಮತಗಳು ಬಂದಿವೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಎಲ್ಲರೂ ಒಟ್ಟಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡೋಣ ಎಂದು ತಿಳಿಸಿದರು.
ಈ ಗೆಲುವಿನ ಕೀರ್ತಿ ಕ್ಷೇತ್ರದ ಮತದಾರರಿಗೆ ಹಾಗೂ ಎಲ್ಲಾ ಕಾರ್ಯಕರ್ತರಿಗೆ ಸೇರಬೇಕು. ಇದರಲ್ಲಿ ನಮ್ಮ ಸಾಧನೆ ಏನು ಇಲ್ಲ. ಇದು ಒಬ್ಬರಿಗೆ ಸೇರುವ ಗೆಲುವಲ್ಲ, ಎಲ್ಲರೂ ಸೇರಿ ಶ್ರಮಪಟ್ಟ ಕಾರಣಕ್ಕೆ ಅಭೂತಪೂರ್ವ ಗೆಲುವು ದೊರೆತಿದೆ. ಅಪೂರ್ವ ಸಹೋದರರಿಗೆ ಮಾತ್ರ ಗೆಲುವಿನ ಗರಿಯಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಯೋಗೇಶ್ವರ್ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಮತದಾರರು ನಮ್ಮ ಪರ ನಿಂತಿದ್ದು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿ ಆಶೀರ್ವಾದ ಮಾಡಿರುವುದಕ್ಕೆ ನಾನು ಆ ಕ್ಷೇತ್ರದ ಜನರಿಗೆ ಅಭಾರಿಯಾಗಿದ್ದೇನೆ. ಜಿಲ್ಲೆಯನ್ನು ಜೆಡಿಎಸ್ ಮುಕ್ತ ಮಾಡುವುದು ನಮಗೆ ಮುಖ್ಯವಲ್ಲ. 19 ಇದ್ದ ಆ ಪಕ್ಷದ ಶಾಸಕರ ಸಂಖ್ಯೆ 18ಕ್ಕೆ ಇಳಿದಿರುವುದು ಸಮಾಧಾನ ತಂದಿದೆ ಎಂದು ಹೇಳಿದರು.
ಅಶ್ವತ್ಥ ನಾರಾಯಣ್ ದಡ್ಡರೇ: ಕಾಂಗ್ರೆಸ್ ಗೆಲುವಿಗೆ ರಾಜ್ಯ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಕಳೆದ ಶನಿವಾರದಂದು ಬಿಜೆಪಿ ನಾಯಕ ಅಶ್ವತ್ಥ ನಾರಾಯಣ ಅವರು ''''ನನಗೆ ಮೊದಲೇ ತಿಳಿದಿತ್ತು, ಯೋಗೇಶ್ವರ್ ಗೆಲ್ಲುತ್ತಾರೆ" ಎಂದು ಹೇಳಿದ್ದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಈ ರೀತಿ ಹೇಳಲು ದಡ್ಡರೇ? ಅವರಿಗೆ ಈ ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿರುವುದರಿಂದ ಹೇಳಿದ್ದು ಸತ್ಯವಲ್ಲವೇ ಎಂದು ಕೇಳಿದರು.
ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಬಿಡೋಣ, ಎದುರಾಳಿ ಪಕ್ಷದವರು ಗುರುತು ಮಾಡಿಕೊಂಡು ಪ್ರತಿದಿನ ಒಂದಷ್ಟು ಜನರ ಮನೆಗೆ ಹೋಗ್ತಾ ಇದ್ದರು. ಅವರು ಹಾಗೂ ಅವರ ಬೂತ್‌ಗಳಲ್ಲಿ ಯಾರಿಗೆ ಮತ ಬಿದ್ದಿದೆ ಎಂಬುದನ್ನು ಪರಿಶೀಲನೆ ಮಾಡಿ ಎಲ್ಲವನ್ನೂ ಬಿಚ್ಚಿ ಹೇಳಲು ಹೋಗುವುದಿಲ್ಲ ಎಂದರು. ಬಿಜೆಪಿ ನಾಯಕರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದೀರಿ. ಕಾಂಗ್ರೆಸ್ ಪಕ್ಷದ ಮೇಲಿನ ಒಲವೇ? ಅಥವಾ ಕುಮಾರಸ್ವಾಮಿ ಅವರ ಮೇಲಿನ ಸಿಟ್ಟೆ? ಎಂಬ ಪ್ರಶ್ನೆಗೆ ಉತ್ತರಿ,ಸಿ ಇದು ನನಗೆ ಗೊತ್ತಿಲ್ಲ, ತಟ್ಟೆಮರೆ ಏಟು, ಹೆಂಗೆ ಬಿದ್ದಿದೆಯೋ ನೋಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ಚನ್ನಪಟ್ಟಣದಲ್ಲಿ ಬಿಜೆಪಿ ಸಪೋರ್ಟ್ ಮಾಡ್ಲಿಲ್ಲ ಅಂದಿದ್ರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಆಗ್ತಿತ್ತಾ?: ಡಿಕೆಶಿ
ತಮ್ಮನ ಸೋಲು ಮರೆಯದ ಡಿಕೆಶಿ: ಕಾಂಗ್ರೆಸ್ ನಾಯಕರು ನನ್ನ ಮಗನ ವಿರುದ್ಧ ಷಡ್ಯಂತ್ರ ಮಾಡಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ಈ ಚುನಾವಣೆಯಲ್ಲಿ ಹಣಬಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದಾಗ, ಹಾಗಾದರೆ ಡಿ.ಕೆ.ಸುರೇಶ್ ಅವರ ಸೋಲನ್ನು ಏನೆಂದು ಕರೆಯುವುದು? ಇದೇ ಯೋಗೇಶ್ವರ್ ಅವರು ಆಗ ಬಿಜೆಪಿಯಲ್ಲಿದ್ದರು. ಕುಮಾರಸ್ವಾಮಿ ಅವರು ತಮ್ಮ ಜನತಾದಳ ಮನೆತನದ ಭಾವಮೈದನನ್ನು ಬಿಜೆಪಿಯಿಂದ ನಿಲ್ಲಿಸಿ ಗೆಲ್ಲಿಸಿದರು. ಇದಕ್ಕೆ ಯಾವ ಪದವನ್ನು ಜೋಡಣೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
Shiggaon By Election ಬೊಮ್ಮಾಯಿ ಕುಟುಂಬಕ್ಕೆ ಬೆಂಬಿಡದ ಮೊದಲ ಸೋಲು!