ರೈತರಿಗೆ ಸಿಗಲಿದೆ ವರ್ಷಕ್ಕೆ 16 ಸಾವಿರ ರೂ ನಗದು

By Web DeskFirst Published Feb 23, 2019, 1:03 PM IST
Highlights

ತೆಲಂಗಾಣ ರೈತರಿಗೆ ವರ್ಷಕ್ಕೆ 20 ಸಾವಿರ ರು. ಕ್ಯಾಷ್‌ ಜತೆಗೆ 1 ಲಕ್ಷ ರು. ಸಾಲ ಮನ್ನಾ: ಕೆಸಿಆರ್‌ ಬಜೆಟ್‌ | ಕೇಂದ್ರದಿಂದ 10 ಸಾವಿರ ನೆರವು 

ಹೈದರಾಬಾದ್‌ (ಫೆ. 23): ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣದ ರೈತರಿಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ ಅವರು ಮತ್ತೆರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ನಾಳೆ 55 ಲಕ್ಷ ರೈತರ ಖಾತೆಗೆ ಕೇಂದ್ರದಿಂದ 2000 ರೂ ನಗದು

ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ 1 ಲಕ್ಷ ರು.ವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಶುಕ್ರವಾರ ಮಂಡಿಸಲಾಗಿರುವ ಲೇಖಾನುದಾನದಲ್ಲಿ ಘೋಷಿಸಿದ್ದಾರೆ.

ಇದೇ ವೇಳೆ, ‘ರೈತ ಬಂಧು’ ಯೋಜನೆಯಡಿ ರೈತರಿಗೆ ವರ್ಷಕ್ಕೆ 2 ಕಂತುಗಳಲ್ಲಿ ನೀಡಲಾಗುವ ನೇರ ನಗದಿನ ಮೊತ್ತವನ್ನು 8ರಿಂದ 10 ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ. ಕೇಂದ್ರ ಸರ್ಕಾರವೂ 10 ಸಾವಿರ ರು. ನೇರ ನಗದು ವರ್ಗಾವಣೆ ಯೋಜನೆ ಘೋಷಣೆ ಮಾಡಿರುವುದರಿಂದ ತೆಲಂಗಾಣದ ಸಣ್ಣ ಹಾಗೂ ಅತಿಸಣ್ಣ ರೈತರ ಬ್ಯಾಂಕ್‌ ಖಾತೆಗೆ 20 ಸಾವಿರ ರು. ಬಂದು ಬೀಳಲಿದೆ.

ಬುಲೆಟ್‌ ರೈಲಿಗೆ ಲೋಗೊ, ಹೆಸರು ನೀಡಿ ಬಹುಮಾನ ಗೆಲ್ಲಿ!

ರೈತ ಬಂಧು ಯೋಜನೆಯನ್ನೇ ಮಾದರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ, ಪ್ರಧಾನಿ ಕಿಸಾನ್‌ ಯೋಜನೆ ರೂಪಿಸಿದ್ದು, ಫೆ.24ರಂದು ಚಾಲನೆ ನೀಡುತ್ತಿದೆ.
 

click me!