ನವದೆಹಲಿ (ಫೆ. 23): ದೇಶದ ಮೊದಲ ಬುಲೆಟ್‌ ರೈಲು 2022 ರ ವೇಳೆಗೆ ಸಂಚಾರ ಆರಂಭಿಸಲಿದ್ದು, ಹೆಸರು ಹಾಗೂ ಲಾಂಛನ ಆರಿಸಲು ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೊರೇಷನ್‌ (ಎನ್‌ಎಚ್‌ಆರ್‌ಸಿಎಲ್‌) ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆ ಆನ್‌ಲೈನ್‌ನಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಯನ್ನು  Mygov.in  ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ, ದೃಢೀಕರಣ ಪತ್ರ ನೀಡಲಾಗುತ್ತದೆ. ಸ್ಪರ್ಧೆ ಬೇರೆ ಬೇರೆ ವಿಭಾಗದಲ್ಲಿ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿಯೇ ಪ್ರಶಸ್ತಿ ವಿತರಿಸಲಾಗುತ್ತದೆ. ಅಲ್ಲದೆ, ಐದು ಉತ್ತಮ ಸಲಹೆಗೂ ಬಹುಮಾನ ನೀಡಲಾಗುವುದು ಎಂದು ಎನ್‌ಎಚ್‌ಆರ್‌ಸಿಎಲ್‌ ತಿಳಿಸಿದೆ.

ಹೆಸರು, ಲಾಂಛನ ಸೂಚಿಸಲು ಮಾ.25 ಕೊನೆಯ ದಿನ. ಆಕರ್ಷಕ ಲಾಂಛನಕ್ಕೆ 1 ಲಕ್ಷ ಹಾಗೂ ಸೂಕ್ತ ಹೆಸರಿಗೆ 50 ಸಾವಿರ ರು. ನಗದು ಬಹುಮಾನ ನೀಡಲಾಗುತ್ತದೆ.