ಮೋದಿ ASAT ಘೋಷಣೆ: ಟ್ವಿಟ್ಟರ್ ರಿಯಾಕ್ಷನ್ ಹೀಗಿತ್ತು!

By Web DeskFirst Published Mar 27, 2019, 1:21 PM IST
Highlights

ASAT ಕ್ಷಿಪಣಿ ತಂತ್ರಜ್ಞಾನ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮಿದ ಭಾರತ| ದೇಶದ ಅಂತರಿಕ್ಷ ಇದೀಗ ಸುರಕ್ಷಿತ| ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನ ಹೊಂದಿದೆ ASAT| ಬಾಹ್ಯಾಕಾಶದಲ್ಲಿ ಗುಪ್ತಚರ ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯ| ಉತ್ತುಂಗಕ್ಕೇರಿದ DRDO ಖ್ಯಾತಿ|

ನವದೆಹಲಿ(ಮಾ.27): ASAT ಕ್ಷಿಪಣಿ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಇದೀಗ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ASAT ಘೋಷಣೆಯಾಗುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭರ್ಜರಿ ಚರ್ಚೆ ನಡೆಯುತ್ತಿದೆ.

An important message to the nation. Watch. https://t.co/0LEOATgOOQ

— Chowkidar Narendra Modi (@narendramodi)

ಪ್ರಧಾನಿ ಭಾಷಣದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ವಿಜ್ಞಾನಿಗಳ ಈ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಈ ಮಧ್ಯೆ ಈ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬುದರ ಕುರಿತಾಗಿಯೂ ಚರ್ಚೆ ನಡೆಯುತ್ತಿದ್ದು, ದೇಶದ ಅಂತರಿಕ್ಷವನ್ನು ಸರುಕ್ಷಿತಗೊಳಿಸಿದ ಪ್ರಧಾನಿ ಮೋದಿ ಕುರಿತು ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

In the journey of every nation there are moments that bring utmost pride and have a historic impact on generations to come.

One such moment is today.

India has successfully tested the Anti-Satellite (ASAT) Missile. Congratulations to everyone on the success of .

— Chowkidar Narendra Modi (@narendramodi)

ASAT ತಂತ್ರಜ್ಞಾನ ಸಂಪೂರ್ಣ ದೇಶೀಯ ತಂತ್ರಜ್ಞಾನವಾಗಿದ್ದು, ಬಾಹ್ಯಾಕಾಶದಲ್ಲಿನ ಗುಪ್ತಚರ ಉಪಗ್ರಹವನ್ನು ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ. ASAT ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ DRDO ಖ್ಯಾತಿ ಉತ್ತುಂಗಕ್ಕೇರಿದೆ.

is special for 2 reasons:
(1) India is only the 4th country to acquire such a specialised & modern capability.
(2) Entire effort is indigenous.
India stands tall as a space power!
It will make India stronger, even more secure and will further peace and harmony.

— Chowkidar Narendra Modi (@narendramodi)

ಈ ಮಧ್ಯೆ ಇಸ್ರೋ ಮತ್ತು ಕೇಂದ್ರ ಸರ್ಕಾರಕ್ಕೆ ಶುಭಾಶಯ ಕೋರಿರುವ ಕಾಂಗ್ರೆಸ್, 1961 ರಲ್ಲಿ ಪಂಡಿತ್ ಜವಾಹರ್‌ಲಾಲ್ ನೆಹರೂ ಆರಂಭಿಸಿದ್ದ ಅಂತರಿಕ್ಷ ಯೋಜನೆಗಳು ಫಲ ನೀಡತೊಡಗಿವೆ ಎಂದು ಟ್ವೀಟ್ ಮಾಡಿದೆ.

We congratulate & the Govt on the latest achievement for India. The Indian Space Programme established in 1961 by Pt. Jawaharlal Nehru & the Indian Space Research Organisation set up under Smt. Indira Gandhi has always made India proud with its ground breaking achievements.

— Congress (@INCIndia)

ಅಲ್ಲದೇ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಇಸ್ರೋ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು ಎಂದೂ ಕಾಂಗ್ರೆಸ್ ಹೇಳಿಕೊಂಡಿದೆ.

click me!