ಶರಬತ್ತು ಕುಡಿಸಿದ್ರೆ ನಾಯಕರಾಗಲ್ಲ!: ಡಿಕೆಶಿಗೆ ಜಾರಕಿಹೊಳಿ ಟಾಂಗ್‌

By Web DeskFirst Published Dec 2, 2018, 8:38 AM IST
Highlights

ಶರಬತ್ತು ಕುಡಿಸಿದ್ರೆ ನಾಯಕರಾಗಲ್ಲ ಎನ್ನುವ ಮೂಲಕ ರೈತ ಸಂಧಾನ ನಡೆಸಿದ ಡಿಕೆಶಿಗೆ ಸತೀಶ್‌ ಜಾರಕಿಹೊಳಿ ಪರೋಕ್ಷ ಟಾಂಗ್‌ ನೀಡಿದ್ದಾರೆ.

ಬೆಳಗಾವಿ[ಡಿ.02]: ಸಚಿವ ರಮೇಶ್‌ ಜಾರಕಿಹೊಳಿ ಆಯ್ತು, ಈಗ ಶಾಸಕ ಸತೀಶ್‌ ಜಾರಕಿಹೊಳಿ ಕೂಡ ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಶರಬತ್ತು ಕುಡಿಸಿ ಹೋದ್ರೆ ಯಾರೂ ನಾಯಕರಾಗಲ್ಲ, ಬೇರೆಯವರು ಇಲ್ಲಿಗೆ(ಬೆಳಗಾವಿಗೆ) ಬಂದು ನಾಯಕರಾಗಲು ಸಾಧ್ಯವಿಲ್ಲ’ ಎಂದು ಡಿಕೆಶಿಗೆ ಟಾಂಗ್‌ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಧರಣಿ ಕೈಬಿಡುವಂತೆ ಮಾಡುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮಹತ್ವದ ಪಾತ್ರವಹಿಸಿದ್ದರು. ಬೆಳಗಾವಿಗೆ ಇತ್ತೀಚೆಗೆ ಆಗಮಿಸಿದ್ದ ಅವರು ನೇರವಾಗಿ ಬೆಳೆಗಾರರ ಜತೆಗೆ ಮಾತನಾಡಿ ಹಲವು ದಿನಗಳಿಂದ ಧರಣಿ ಕೂತಿದ್ದ ರೈತರ ಮನವೊಲಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಸತೀಶ್‌ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಡಿಕೆಶಿ ನಿವಾಸಕ್ಕೆ ಬಿಎಸ್‌ವೈ: ಊಹಾಪೋಹಗಳಾಚೆಯ ಸತ್ಯ!

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಚಿವ ಡಿ.ಕೆ.ಶಿವಕುಮಾರ್‌ ಬೆಳಗಾವಿಗೆ ಆಗಮಿಸಿ, ಧರಣಿ ನಿರತ ರೈತರನ್ನು ಭೇಟಿಯಾಗಿ ಸಮಸ್ಯೆ ಆಲಿಸಿರುವುದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಸರಿಯಲ್ಲ. ಅವರು ಸಚಿವರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ ಅಷ್ಟೆ’ ಎಂದು ಜಾರಕಿಹೊಳಿ ಹೇಳಿದರು.

ಒಂದೇ ಪರಿವಾರ: ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿವಾದಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೂ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ್‌ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಒಂದೇ ಪರಿವಾರ ಇದ್ದಂತೆ ಎಂದರು.

ಇದನ್ನೂ ಓದಿ: ನನ್ನ ವಿರುದ್ಧ ಕಾಂಗ್ರೆಸಿಗನ ಷಡ್ಯಂತ್ರ: ಜಾರಕಿಹೊಳಿ ಹೇಳಿದ ನಾಯಕ ಯಾರು?

ಡಿಕೆಶಿ ಮತ್ತು ರಮೇಶ್‌ ಜಾರಕಿಹೊಳಿ 20 ವರ್ಷದಿಂದ ಗೆಳೆಯರು. ಅವರ ಪರಿವಾರದ ಹಳೆಯ ವ್ಯವಹಾರ ನನಗೆ ಗೊತ್ತಿಲ್ಲ. ಅವರ ಪರಿವಾರವನ್ನು ನಾನಂತು ಒಡೆದಿಲ್ಲ. ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ಚುನಾವಣೆ ವೇಳೆ ಮಧ್ಯಸ್ಥಿಕೆ ವಹಿಸಿಕೊಳ್ಳುವ ಮೂಲಕ ಅವರೇ ತಮ್ಮ ಪರಿವಾರವನ್ನು ಒಡೆದುಕೊಂಡಿದ್ದಾರೆ. ನಾನು ಅವರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಜಾರಕಿಹೊಳಿ ಬ್ರದರ್ಸ್-ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಮತ್ತೊಂದು ವಾರ್ ಶುರು?

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ- ಸತೀಶ್‌

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಎರಡು ವರ್ಷದ ನಂತರ ನನಗೆ ಸೂಕ್ತ ಸ್ಥಾನ ಕಲ್ಪಿಸುವುದಾಗಿ ಪಕ್ಷದ ಹೈಕಮಾಂಡ್‌ ಭರವಸೆ ನೀಡಿದೆ. ಸದ್ಯ ನಾನು ಶಾಸಕರಾಗಿ ನನ್ನ ಇತಿ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ: ರಮೇಶ್ ಆಯ್ತು ಈಗ ಸತೀಶ್ ಜಾರಕಿಹೊಳಿ ಸ್ಫೋಟ?

ಈ ಹಿಂದೆ ಜಿಲ್ಲೆಗೆ ಎರಡ್ಮೂರು ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬೇರೆ ಇದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಭಿನ್ನಾಭಿಪ್ರಾಯ ಸಹಜ. ಐದು ವರ್ಷ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಶಾಸಕ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

click me!