ಶಿರಡಿ ದೇವಸ್ಥಾನದಿಂದ ಹುತಾತ್ಮ ಯೋಧರ ಕುಟುಂಬಕ್ಕೆ 2.51 ಕೋಟಿ ನೆರವು

By Web DeskFirst Published Feb 17, 2019, 9:35 AM IST
Highlights

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ವಿವಿಧ ಕ್ಷೇತ್ರದ ದಿಗ್ಗಜರು ಯೋಧರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. 

ಶಿರಡಿ (ಫೆ. 17): ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಶಿರಡಿ ಸಾಯಿಬಾಬಾ ದೇವಸ್ಥಾನದ ಆಡಳಿತ ಮಂಡಳಿ ಶನಿವಾರ 2.51 ಕೋಟಿ ರು.ಗಳ ಆರ್ಥಿಕ ನೆರವನ್ನು ಘೋಷಿಸಿದೆ.

ಹುತಾತ್ಮ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು

ಗುರುವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು, ಇದು ಭೀಕರವಾದ ಘಟನೆಯಾಗಿದೆ. ಈ ಘಟನೆಯನ್ನು ಕಟುವಾದ ಪದಗಳಿಂದ ಖಂಡಿಸಿದ ಆಡಳಿತ ಮಂಡಳಿ ಅಧ್ಯಕ್ಷ ಸುರೇಶ ಹಾವರೆ, ಇದರಲ್ಲಿ ಭಾಗಿಯಾದ ಅಪರಾಧಿಗಳಿಗೆ ಸರ್ಕಾರ ಮತ್ತು ನಮ್ಮ ಸೇನೆ ಸಮರ್ಥವಾದ ಉತ್ತರವನ್ನೇ ನೀಡಲಿದ್ದಾರೆ ಎಂಬ ಭರವಸೆ ಇದೆ. ಪ್ರಸ್ತುತ ಘೋಷಿತ ಮೊತ್ತವು ಅಗತ್ಯ ದಾಖಲೆಗಳ ಹೊಂದಾಣಿಕೆ ನಂತರ ಹುತಾತ್ಮ ಯೋಧರ ಕುಟುಂಬಗಳಿಗೆ ತಲುಪಲಿದೆ ಎಂದರು.

click me!