ಡಿಜಿಟಲ್ ಇಂಡಿಯಾದಲ್ಲಿ ಬದಲಾದ ಭಾರತ.. ಗ್ಲೋಬಲ್‌ ಪಟ್ಟಿಯಲ್ಲಿ ಗಟ್ಟಿ ಸ್ಥಾನ

By Suvarna NewsFirst Published Oct 6, 2021, 9:24 PM IST
Highlights

* ಇಂಜಿನಿಯರಿಂಗ್ ಮತ್ತು ಸಂಶೋಧನೆ ಕ್ಷೇತ್ರದ ಬಗ್ಗೆ ಕೇಂದ್ರ ಸಚಿವರ ಮಾತು
*ಮುಂದಿನ 5 ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ
* ಪ್ರಧಾನಿ ನರೇಂದ್ರ ಮೋದಿ  2015 ರಲ್ಲಿ ಡಿಜಿಟಲ್ ಇಂಡಿಯಾ ಲಾಂಚ್ ಮಾಡಿದರು
*ಎಂಜಿನಿಯರಿಂಗ್ ಮತ್ತು ಡಿಜಿಟಲೀಕರಣ ವಿಭಾಗದಲ್ಲಿ ಗಮನಾರ್ಹ ಸಾಧನೆ

ನವದೆಹಲಿ(ಅ. 06)  NASSCOM(National Association of Software and Service Companies) ಆಯೋಜನೆ ಮಾಡಿದ್ದ 'ಡಿಸೈನ್ ಆಂಡ್ ಇಂಜಿನಿಯರಿಂಗ್' ಸಭೆಯನ್ನು ಉದ್ದೇಶಿಸಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಸಚಿವ  ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮಾತನಾಡಿದ್ದಾರೆ. ಗ್ಲೋಬಲ್ ಎಂಜಿನಿಯರಿಂಗ್ ಡಿಸೈನ್ ಗೆ ಸಂಬಂಧಿಸಿ ನಾಲ್ಕು ಅಂಶಗಳನ್ನು ಇಟ್ಟುಕೊಂಡು ಶೃಂಗಸಭೆ ಆಯೋಜನೆ ಮಾಡಲಾಗಿತ್ತು.  

ಅಕ್ಟೋಬರ್ 6 ಮತ್ತು 7 ರಂದು  ಸಭೆ ಆಯೋಜನೆ ಮಾಡಲಾಗಿದೆ.  ಜಾಗತಿಕ ಎಂಜಿನಿಯರಿಂಗ್ ಮತ್ತು ವಿನ್ಯಾಸದ(Engineering, Research & Development (ER&D)) ಮೇಲೆ ಚರ್ಚೆ ನಡೆಯಲಿದೆ.  ಸಂಶೋಧನೆ, ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಕೇಂದ್ರಿಕರಿಸಿ ಸಭೆಯಲ್ಲಿ ವಿಚಾರಗಳು ಚರ್ಚೆಯಾಗಲಿವೆ.  ಮುಂದಿನ ಸಾಧನೆಯ ಪ್ರೇಮ್ ವರ್ಕ್ ಹೇಗೆ ಇರಬೇಕು ಎನ್ನುವುದನ್ನು ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ. 

ಸ್ಥಿರತೆಯತ್ತ ಭಾರತದ ಆರ್ಥಿಕತೆ..

ಸಭೆ ಉದ್ದೇಶಿಸಿ ಮಾತನಾಡಿದ ರಾಜೀವ್ ಚಂದ್ರಶೇಖರ್,  ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ಇಆರ್ & ಡಿ) ವಲಯವು  31 ಶತಕೋಟಿ  ಡಾಲರ್ ಆದಾಯ ತಂದುಕೊಡುತ್ತದೆ. 1000 ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿಗೆ ನೆಲೆಯಾಗಿದೆ . ಟಾಪ್ 50 ಎಂಜಿನಿಯರಿಂಗ್ ಸೇವಾ ಪೂರೈಕೆದಾರರಲ್ಲಿ 12 ಕಂಪನಿಗಳು ಭಾರತದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಟಾಪ್ 50 ಸೇವಾ ಪೂರೈಕೆದಾರಲ್ಲಿ   44 ಕಂಪನಿಗಳು ಭಾರತದಲ್ಲಿ R&D ಕೇಂದ್ರ  ಹೊಂದಿವೆ ಎಂದರು.

ಮುಂದಿನ 5 ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ ಇದೆ. ಎಂಜಿನಿಯರಿಂಗ್ ಮತ್ತು ಡಿಜಿಟಲೀಕರಣ ವಿಭಾಗದಲ್ಲಿ ಈ ವಿಭಾಗ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ತಿಳಿಸಿದರು. ಕೊರೋನಾ ಸಾಂಕ್ರಾಮಿಕವೂ ಹೊಸ ಅವಕಾಶಗಳ ಹುಡುಕಾಟದಲ್ಲಿ ಬದಲಾವಣೆ ತಂದಿದೆ.  ಸೇವೆ ಮತ್ತು ಪೂರೈಕೆಯಲ್ಲಿಯೂ ಬದಲಾವಣೆಗಳಾಗಿದ್ದು  ಈ ಸಂದರ್ಭದಲ್ಲಿ ಸಾಫ್ಟ್‌ವೇರ್ ತಂತ್ರಗಳ ಬದಲಾವಣೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಸಮುದಾಯ ಮಾಡಿ ತೋರಿಸಿದೆ ಎಂದರು.

Engineering the Next ಥೀಮ್ ಇಟ್ಟುಕೊಂಡು  ಸಮಾವೇಶ ಆಯೋಜನೆ ಮಾಡಲಾಗಿದೆ.  ಒಬ್ಬ ಇಂಜಿನಿಯರ್ ಆಗಿ ಹೇಳಬೇಕು ಎಂದರೆ ದೇಶಕ್ಕೆ ಸಂಬಂಧಿಸಿ ಅಭಿವೃದ್ಧಿಯ ಮತ್ತು ಹೊಸ ಆಲೋಚನೆಗಳನ್ನು ಸೃಷ್ಟಿ ಮಾಡುವುದಕ್ಕಿಂತ ಮಿಗಿಲಾದ ಸಂಭ್ರಮ ಇನ್ನೊಂದು ಇಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ  2015 ರಲ್ಲಿ ಡಿಜಿಟಲ್ ಇಂಡಿಯಾ ಲಾಂಚ್ ಮಾಡಿದರು. ಗ್ಲೋಬಲ್ ಇನೋವೇಶನ್ ಪಟ್ಟಿಯಲ್ಲಿ ಭಾರತ 46ನೇ ಸ್ಥಾನದತ್ತ ಕಾಲಿಟ್ಟಿದೆ. 2016 ರಲ್ಲಿ66 ನೇ ಸ್ಥಾನದಲ್ಲಿದ್ದ ದೇಶ ಇಪ್ಪತ್ತು ಸ್ಥಾನಗಳ ಏರಿಕೆ ಕಂಡಿದೆ.  ರಾಜ್ಯಗಳು ಸಹ ಕೇಂದ್ರದೊಂದಿಗೆ ಅಭಿವೃದ್ಧಿಯಲ್ಲಿ ಹೆಜ್ಜೆ ಇಡುತ್ತಿವೆ ಎಂದರು.

ಗಾಂಧೀಜಿಯವರ ಸರಳ ಅರ್ಥಶಾಸ್ತ್ರ ಎಂದೆಂದಿಗೂ ಪ್ರಸ್ತುತ
 

ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಪ್ರಮುಖ ಹೆಜ್ಜೆಗಳನ್ನು ಇಟ್ಟುಕೊಂಡು ಸಾಗುತ್ತಿದೆ. ಉತ್ಪನ್ನಕ್ಕೆ ಪ್ರೋತ್ಸಾಹ (Production Linked Incentive) ಯೋಜನೆ ಸಹ ಫಲಿತಾಂಶ ನೀಡುತ್ತಿದೆ. ಸ್ಟಾರ್ಟ್ ಅಪ್ ಗಳು ಬೆಳವಣಿಗೆ ಕಾಣುತ್ತಿವೆ.  ಮುಂದಿನ 4 ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಮತ್ತು ಹಾರಡ್ ವೇರ್ ಕ್ಷೇತ್ರದಲ್ಲಿ 22 ಬಿಲಿಯನ್ ಡಾಲರ್  ಗುರಿ ಹೊಂದಲಾಗಿದೆ.  ಈ ಸಂದರ್ಭದಲ್ಲಿ ER&D (ಎಂಜಿನಿಯರಿಂಗ್, ರಿಸರ್ಚ್, ಡೆವಲಪ್ ಮೆಂಟ್) ಬಗ್ಗೆಯೂ ಯೋಚನೆ ಮಾಡಬೇಕಿದೆ ಎಂದರು.

ಪಿಎಲ್‌ಐ ಯೋಜನೆಯನ್ನು ಜವಳಿ, ಆಟೋ ಇತ್ಯಾದಿ ಕ್ಷೇತ್ರಗಳಲ್ಲಿ ವಿಸ್ತರಿಸಲಾಗಿದೆ ಮತ್ತು ಮೇಕ್ ಇನ್ ಇಂಡಿಯಾ ದೃಷ್ಟಿಕೋನವು ಜಾಗತಿಕ ಮತ್ತು ಭಾರತೀಯ ಕಂಪನಿಗಳನ್ನು ದೇಶದಲ್ಲಿ ಉತ್ಪಾದಿಸಲು ಆಕರ್ಷಿಸುತ್ತಿದೆ ಎಂದು ತಿಳಿಸಿದರು. 

ತಂತ್ರಜ್ಞಾನ ಮತ್ತು ಕೌಶಲ್ಯ ಜತೆಯಾಗಬೇಕಿದೆ.  ಕೈಗಾರಿಕಾ  ಬೆಳವಣಿಗೆ ಬಗ್ಗೆಯೂ ಒಬ್ಬ ಸಚಿವನಾಗಿ ಗಮನ ಕೇಂದ್ರಿಕರಿಸಿದ್ದೇನೆ. ಡಿಜಿಟಲ್ ಟೆಕ್ನಾಲಜಿಗಳ ನೆರವನ್ನು ಪಡೆದುಕೊಳ್ಳಬೇಕಾಗಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಶೇ. 32 ER&D ಮಾರುಕಟ್ಟೆ ಇದೆ.  ಮುಂದಿನ ಐದು ವರ್ಷದಲ್ಲಿ ಇದನ್ನು ಶೇ. 50ಕ್ಕೆಏರಿಕೆ ಮಾಡಬೇಕಿದೆ ಎಂದು ತಿಳಿಸಿದರು.

click me!