ಫ್ಯಾಷನ್ ಓಕೆ, ಸೊಂಟ ಮಾತ್ರ ಹೀಗಿದೆ ಯಾಕೆ; ಕಿಮ್ ಕಾರ್ಡಶಿಯಾನ್ ಮೆಟ್‌ ಗಾಲಾ ಲುಕ್‌ಗೆ ನೆಟ್ಟಿಗರ ಕಳವಳ!

By Vinutha Perla  |  First Published May 7, 2024, 3:37 PM IST

ಹಾಲಿವುಡ್​ ತಾರೆ ಕಿಮ್ ಕಾರ್ಡಶಿಯಾನ್ ಯಾವಾಗ್ಲೂ ತಮ್ಮ ಹಾಟ್‌ ಲುಕ್‌ನಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಮೆಟ್ ಗಾಲಾದಲ್ಲಿ ಕಿಮ್‌ ಕಾರ್ಡಶಿಯಾನ್ ಲುಕ್ ಸಹ ವೈರಲ್ ಆಗಿದೆ. ಸ್ಟೈಲಿಶ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿರುವುದರ ಜೊತೆಗೆ ಆಕೆಯ ಸೊಂಟ ಯಾಕೆ ಹೀಗಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.


ಹಾಲಿವುಡ್ ಬೆಡಗಿ ಕಿಮ್ ಕರ್ದಾಶಿಯನ್ ಬೋಲ್ಡ್ ಅವತಾರಗಳ ಮೂಲಕ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚಿಗೆ ಮೆಟ್ ಗಾಲಾದಲ್ಲಿ ಕಿಮ್‌ ಕಾರ್ಡಶಿಯಾನ್ ಲುಕ್ ಸಹ ವೈರಲ್ ಆಗಿದೆ. ಈ ವರ್ಷದ ಮೆಟ್ ಗಾಲಾದ ಥೀಮ್ ಸ್ಲೀಪಿಂಗ್ ಬ್ಯೂಟೀಸ್: ರೀವೇಕನಿಂಗ್ ಫ್ಯಾಶನ್ ಆಗಿತ್ತು, ಕಿಮ್ ದೊಡ್ಡ ರೀತಿಯಲ್ಲಿ ಥೀಮ್ ಅನ್ನು ಅಳವಡಿಸಿಕೊಂಡಿದ್ದಾರೆ.  ಕಾರ್ಸೆಟ್-ಶೈಲಿಯ ಉಡುಪನ್ನು ಧರಿಸಿದ್ದರು. ಅದು ಅವಳ ಸೊಂಟವನ್ನು ತುಂಬಾ ಚಿಕ್ಕದಾಗಿ ಕಾಣುವಂತೆ ಮಾಡಿದೆ. ಕಿಮ್ ಕಾರ್ಡಶಿಯಾನ್ ಸ್ಟೈಲಿಶ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿರುವುದರ ಜೊತೆಗೆ ಆಕೆಯ ಸೊಂಟ ಯಾಕೆ ಹೀಗಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

ಕಿಮ್ ಧರಿಸಿದ್ದ ಕಾರ್ಸೆಟ್-ಶೈಲಿಯ ಫ್ರಾಕ್ ಅನ್ನು ಥೀಮ್‌ಗೆ ಹೊಂದಿಸಲು ಎಲೆಗಳಿಂದ ಅಲಂಕರಿಸಲಾಗಿತ್ತು. ಉಡುಪು ಲೋಹದ ಸ್ಕರ್ಟ್ ಮತ್ತು ಲೇಸ್ ಟ್ರೇನ್‌ನ್ನು ಸಹ ಒಳಗೊಂಡಿದೆ. ಬೂದು ಬಣ್ಣದ ಹೆಣೆದ ಕಾರ್ಡಿಜನ್ ಶೈಲಿಯ ಶಾಲ್‌ ಸಂಪೂರ್ಣ ಲುಕ್‌ನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡಿತ್ತು. ಕಿಮ್ ಸಾಮಾಜಿಕ ಮಾಧ್ಯಮದಲ್ಲಿ ಸ್ನ್ಯಾಪ್‌ಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

undefined

ಅಬ್ಬಾ..! ಬರೋಬ್ಬರಿ 3 ಕೋಟಿ ರೂಪಾಯಿ ಬ್ಯಾಗ್ ಹಿಡಿದು ಬಂದ ಖ್ಯಾತ ನಟಿ: ಏನಿದೆ ಅದರಲ್ಲಿ?

ಎಕ್ಸ್‌ನಲ್ಲಿ ಬಳಕೆದಾರರು' ಸೊಂಟ ವಿಚಿತ್ರವಾಗಿ ಕಾಣುತ್ತಿದೆ. ಇಷ್ಟು  ಬಿಗಿಯಾದ ಉಡುಪು ಅಗತ್ಯವಿರಲ್ಲಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಉಡುಪು ಚೆನ್ನಾಗಿ ಕಾಣುತ್ತದೆ. ಆದರೆ ನೀವು ಅದರಲ್ಲಿ ಸರಿಯಾಗಿ ಉಸಿರಾಡುತ್ತಿದ್ದೀರಾ. ನಿಮಗೆ ಆಮ್ಲಜನಕದ ಅಗತ್ಯವಿದ್ದರೆ ತಿಳಿಸಿ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ನಿಮ್ಮ ಸೊಂಟ ಎಲ್ಲಿದೆ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ನೀವು ಪಕ್ಕೆಲುಬು ತೆಗೆದಿದ್ದೀರಾ.. ನಿಮ್ಮ ಸೊಂಟ ಎಲ್ಲಿದೆ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

 ಕಿಮ್ ಕರ್ದಾಶಿಯನ್, ತಮ್ಮ ಉಡುಪಿನಿಂದ ಸುದ್ದಿಯಾಗಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆ ಕಿಮ್ ಕರ್ದಾಶಿಯನ್ SKIMS ಬ್ರಾಂಡ್‌ನ ನಿಪ್ಪಲ್ ಬ್ರಾ ಜಾಹೀರಾತು ಮೂಲಕ ಇಂಟರ್ನೆಟ್ ಟೆಂಪರೇಚರ್ ಹೆಚ್ಚಿಸಿದ್ದರು. ಇತ್ತೀಚಿನ ಪುಷ್ ಅಪ್ ಶೈಲಿ ಎಡಿಶನ್ ಜೊತೆಗೆ ಇದೀಗ ಫಾಕ್ಸ್ ನಿಪ್ಪಲ್ ಬ್ರಾ ವಿಡಿಯೋವನ್ನು ಕಿಮ್ ಕರ್ದಾಶಿಯನ್ ಹಂಚಿಕೊಂಡಿದ್ದರು..

ಹೊಟ್ಟೆ ದಪ್ಪ ಆಗದಂತೆ ಸರ್ಜರಿ ಮಾಡಿಸಿಕೊಂಡ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್

'ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ. ಸಮುದ್ರದ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ. ಮುಂಜುಗಡ್ಡೆಗಳು ಕರಗುತ್ತಿದೆ. ನಾನು ವಿಜ್ಞಾನಿಯಂತೂ ಅಲ್ಲ. ಪ್ರತಿಯೊಬ್ಬರು ತಮ್ಮ ಕೌಶಲ್ಯವನ್ನು ಬಳಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಹೀಗಾಗಿಯೇ ಇೀಗ ನಿಪ್ಪಲ್ ಬ್ರಾ ಪರಿಚಯಿಸುತ್ತಿದ್ದೇವೆ.ಇದರಿಂದ ನೀವು ಎಷ್ಟೇ ಬ್ಯೂಸಿ ಇದ್ದರೂ ನೀವು ಯಾವಾಗಲೂ ಕೂಲ್ ಆಗಿರುತ್ತೀರಿ' ಎಂದು ಕಿಮ್ ಕರ್ದಾಶಿಯನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.. 

click me!