ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ 69 ಮಂದಿ, ಕಲಬುರಗಿಯಲ್ಲಿ ಒಂದೇ ಕುಟುಂಬದ 30 ಮಂದಿ ಮತದಾನ

By Suvarna News  |  First Published May 7, 2024, 2:47 PM IST

ಕರ್ನಾಟಕದ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ 69 ಮಂದಿ ಮತ್ತು ಕಲಬುರಗಿಯಲ್ಲಿ ಒಂದೇ ಕುಟುಂಬದ 30 ಮಂದಿ ಮತದಾನ ಮಾಡಿದ್ದಾರೆ.


ಹುಬ್ಬಳ್ಳಿ/ಕಲಬುರಗಿ (ಮೇ.7): ಕರ್ನಾಟಕದ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಉತ್ತರ ಕರ್ನಾಟಕದ ಬಿರು ಬಿಸಿಲಿನಲ್ಲೂ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ 69 ಮಂದಿ ಮತ್ತು ಕಲಬುರಗಿಯಲ್ಲಿ ಒಂದೇ ಕುಟುಂಬದ 30 ಮಂದಿ ಮತದಾನ ಮಾಡಿದ್ದಾರೆ.

LIVE: Dharwad Elections 2024: ಧಾರವಾಡದಲ್ಲಿ ಮಧ್ಯಾಹ್ನ 1 ಗಂಟೆಗೆ ವೇಳೆಗೆ 40.61% ಮತದಾನ

Tap to resize

Latest Videos

undefined

ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬ 69 ಸದಸ್ಯರು ಮತದಾನ ಮಾಡಿ  ಕುಟುಂಬಸ್ಥರು ಇತರರಿಗೆ ಮಾದರಿಯಾದರು. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56, 57 ರಲ್ಲಿ ಮತದಾನ ಮಾಡಿದರು.  ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯರು ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ಪಡೆದು ಸಂಭ್ರಮ ಪಟ್ಟರು. ಕುಟುಂಬದ ಮೂರು ತಲೆಮಾರಿನ  ಕುಟುಂಬದ ಸದಸ್ಯರು ಮತದಾನದಲ್ಲಿ ಭಾಗಿಯಾಗಿದ್ದರು.

LIVE: Bagalkote Elections 2024: ಬಾಗಲಕೋಟೆಯಲ್ಲಿ ಮಧ್ಯಾಹ್ನ 1 ಗಂಟೆಗೆ ವೇಳೆಗೆ 42.01% ಮತದಾನ

ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಒಂದೇ ಕುಟುಂಬದ 30 ಮತದಾರರು ಹಕ್ಕು ಚಲಾವಣೆ ಮಾಡಿದರು.  ಎಲ್ಲಾ ಮೂವತ್ತೂ ಜನರು ಒಟ್ಟಿಗೆ ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು. ಕಲಬುರಗಿಯ HK ಸೀತನೂರು ಪರಿವಾರದ 30 ಜನರಿಂದ  ಸಂಗಮೇಶ್ವರ ಕಾಲೋನಿಯಲ್ಲಿನ ಮತಗಟ್ಟೆ ಸಂಖ್ಯೆ 137 ರಲ್ಲಿ ಮತದಾನ. ಕುಟುಂಬದ ಮುಖ್ಯಸ್ಥರಾದ ಮೋಹನ್ ಸೀತನೂರು ಸೇರಿ ಆರು ಜನ ಸಹೋದರರು, ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 30 ಜನ ಮತದಾರರು. ಎಲ್ಲರೂ ಒಟ್ಟಿಗೆ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು.

click me!