ಡಿಸೆಂಬರ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಹೆಚ್ಚಳಗೊಂಡಿದೆ. ರೈತರ ಆತ್ಮಹತ್ಯೆಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದ ಕುಖ್ಯಾತಿಗೆ ಗುರಿಯಾಗಿದೆ. ಡಿಸೆಂಬರ್ 22 ರಿಂದ ಪ್ರೊ ಕಬಡ್ಡಿ ಲೀಗ್ ಬೆಂಗಳೂರಲ್ಲಿ ಆರಂಭಗೊಳ್ಳುತ್ತಿದೆ. ಭಾರತೀಯ ವಾಯುಪಡೆಗೆ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಸೇರಿಕೊಂಡಿದೆ. ದೀಪಿಕಾ ದಾಸ್ ಗ್ಲಾಮರಸ್ ಲುಕ್, ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಸೇರಿದಂತೆ ಡಿಸೆಂಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
LCH: ಭಾರತೀಯ ವಾಯುಪಡೆಗೆ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಬಲ, ಹೀಗಿದೆ ಇದರ ಸಾಮರ್ಥ್ಯ!
undefined
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ವಾಯುಪಡೆಗೆ (IAF) ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳ (LCH) ಮೊದಲ ತಂಡವನ್ನು ಹಸ್ತಾಂತರಿಸಿದ್ದಾರೆ - ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಾಗಿ ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ 15 ಸೀಮಿತ ಸರಣಿ ಉತ್ಪಾದನೆ (LSP) ಇದಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ನಿಂದ ಹೊರಬರುತ್ತಿರುವ ಮೊದಲ ದಾಳಿಕಾರ ಹೆಲಿಕಾಪ್ಟರ್ ಇದಾಗಿದೆ. ಇದರ ಧನಾತ್ಮಕ ಅಂಶಗಳನ್ನು ಪರಿಗಣಿಸಿದರೆ, ನಕಾರಾತ್ಮಕತೆ ಅಷ್ಟೇನೂ ಅಲ್ಲ.
Farmers Suicide: ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ನಂ.1: ಕರ್ನಾಟಕಕ್ಕೆ ಎರಡನೇ ಸ್ಥಾನ!
ದೇಶದಲ್ಲಿ ರೈತರ ಆತ್ಮಹತ್ಯೆ (Farmers Suicide) ಪ್ರಕರಣದಲ್ಲಿ ಕರ್ನಾಟಕ (Karnataka) ನಂ.2 ಸ್ಥಾನದಲ್ಲಿದೆ. 2020ರಲ್ಲಿ ಕರ್ನಾಟಕದಲ್ಲಿ 1072 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, 2019ರಲ್ಲಿ ದೇಶದಲ್ಲಿ 5957 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
LPG Price Hike: ಬೆಲೆ ಏರಿಕೆ ಬಿಸಿ, ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 103.50ರೂ. ಹೆಚ್ಚಳ!
ಇಂದು ಡಿಸೆಂಬರ್ ತಿಂಗಳ ಮೊದಲ ದಿನವಾಗಿದ್ದು, ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ (LPG Gas Cylinder) ಬೆಲೆಯನ್ನು ಹೆಚ್ಚಿಸಿವೆ.
Pro Kabaddi League:ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಡಿ.22ರಿಂದ ಬೆಂಗಳೂರಿನಲ್ಲಿ ಟೂರ್ನಿ ಆರಂಭ!
ಐಪಿಎಲ್ ಟೂರ್ನಿ(IPL) ಆರಂಭಕ್ಕೆ ತಯಾರಿ ನಡೆಯುತ್ತಿದೆ. ಇದರ ನಡುವೆ ಅಭಿಮಾನಿಗಳನ್ನು ರಂಜಿಸಲು ಪ್ರೊ ಕಬಡ್ಡಿ ಲೀಗ್ ಟೂರ್ನಿ(Pro Kabaddi Leagu) ಆರಂಭಗೊಳ್ಳುತ್ತಿದೆ. 2021-22ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿ(PKL) ಡಿಸೆಂಬರ್ 22 ರಿಂದ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಈ ಬಾರಿ ಟೂರ್ನಿ ಬೆಂಗಳೂರಿನಲ್ಲಿ(Bengaluru) ಆಯೋಜನೆಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್(Bengaluru Bulls) ಹಾಗೂ ಯು ಮುಂಬಾ(U mumba) ಹೋರಾಟ ನಡೆಸಲಿದೆ.
Breathtaking Photo: ಗ್ಲಾಮರಸ್ ಲುಕ್‌ನಲ್ಲಿ ದೀಪಿಕಾ ದಾಸ್!
ನಾಗಿಣಿ' (Nagini) ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ದೀಪಿಕಾ ದಾಸ್ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಮೂಲಕ ಮನೆಮಗಳಾಗಿ ಬಿಟ್ಟರು.
Best Mobile Phones Under 15K: ಭಾರತದಲ್ಲಿ ರೂ 15,000ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಫೋನ್‌ಗಳು!
15,000 ರೂ.ಗಳ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ಜನಪ್ರಿಯ ಆಯ್ಕೆಗಳಿವೆ. ಈ ಪಟ್ಟಿಗೆ ಈಗ 5G ಬೆಂಬಲವನ್ನು ನೀಡುವ ಕೆಲವು ಮೊಬೈಲ್ ಫೋನ್ ಕೂಡ ಸೇರಿವೆ. ನೀವು ರೂ. 15,000 ಒಳಗಿನ ಅತ್ಯುತ್ತಮ ಮೊಬೈಲ್ ಫೋನ್‌ಗಾಗಿ ಹುಡುಕಾಟದಲ್ಲಿದ್ದರೆ, 15,000 ರು ಗಿಂತ ಕಡಿಮೆ ರೇಂಜ್‌ನಲ್ಲಿರುವ ಈ ಟಾಪ್ ಫೋನ್‌ಗಳ ಪಟ್ಟಿಯನ್ನು ನೋಡಲೇಬೇಕು
Drop in Petrol price: ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿಇಳಿಕೆ
ದೆಹಲಿ ವಾಹನ ಸವಾರರಿಗೆ ಡಿಸೆಂಬರ್ ತಿಂಗಳ ಮೊದಲ ದಿನವೇ ಸರ್ಕಾರ ಶುಭ ಸುದ್ದಿ ನೀಡಿದೆ. ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ. ಇಳಿಕೆ ಮಾಡಿದೆ. ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಕಾರಣ ಬೆಲೆಯಲ್ಲಿಇಳಿಕೆಯಾಗಿದೆ.
Mamata In Mumbai: ಸಿವಿಲ್ ಸೊಸೈಟಿ ಮೀಟಿಂಗ್‌ನಲ್ಲಿ ಜಾವೆದ್ ಅಖ್ತರ್, ಮಹೇಶ್ ಭಟ್ಟ್: 3ನೇ ಸಾಲಿನಲ್ಲಿ ಕೈ ನಾಯಕ!
ಎರಡು ದಿನಗಳ ಪ್ರವಾಸದಲ್ಲಿ ಮುಂಬೈಗೆ ಆಗಮಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬುಧವಾರ ನಾರಿಮನ್ ಪಾಯಿಂಟ್‌ನ ವೈಬಿ ಚವಾಣ್ ಸೆಂಟರ್‌ನಲ್ಲಿ ಸಮಾಜದ ವಿವಿಧ ವರ್ಗಗಳೊಂದಿಗೆ ಸಭೆ ನಡೆಸಿದರು.
Murder Sketch: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ನಾಯಕ ಸ್ಕೆಚ್: ಡಿಕೆಶಿ ಹೇಳಿದ್ದು ಹೀಗೆ..
ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗ ಪ್ರಕರಣಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.