ಬಿಜೆಪಿಗೆ ಅನಿವಾರ್ಯವಾಗ್ತಿದೆ ಮೈತ್ರಿ, ಧರ್ಮ ಬದಲಿಸಿದ್ರಾ ಸೈಫ್ ಪುತ್ರಿ?ಜು.13ರ ಟಾಪ್ 10 ಸುದ್ದಿ!

By Suvarna NewsFirst Published Jul 13, 2021, 4:31 PM IST
Highlights

ಕೊರೋನಾ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ ಸೇರಿ 6 ರಾಜ್ಯದ ಮುಖ್ಯಮಂತ್ರಿ ಜೊತೆ ಸಭೆ ನಡೆಸಲಿದ್ದಾರೆ. ರಾಷ್ಟ್ರಪತಿ ಆಯ್ಕೆಗೆ ಬಿಜೆಪಿಗೆ ಮೈತ್ರಿ ಅನಿವಾರ್ಯವಾಗುತ್ತಿದೆ. ಕರ್ನಾಟಕದಲ್ಲೂ ಜನಸಂಖ್ಯಾ ನಯಂತ್ರಣ ನೀತಿ ತರಲು ಇದು ಸಕಾಲ ಎಂದು ಸಿಟಿ ರವಿ ಹೇಳಿದ್ದಾರೆ. ಧರ್ಮ ಬದಲಾಯಿಸಿದರಾ ಸೈಫ್ ಪುತ್ರಿ ಸಾರಾ, ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಜು.13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಜು.16ಕ್ಕೆ ಯಡಿಯೂರಪ್ಪ ಸೇರಿ 6 ರಾಜ್ಯದ ಮುಖ್ಯಮಂತ್ರಿ ಜೊತೆ ಪ್ರಧಾನಿ ಸಭೆ!

ಅನ್‌ಲಾಕ್ ಪ್ರಕ್ರಿಯೆಯಿಂದ ದೇಶದಲ್ಲೀಗ ಕೊರೋನಾ ಆತಂಕ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಕಿಕ್ಕಿರಿದು ತುಂಬಿದೆ. ಧಾರ್ಮಿಕ ತಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ.  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಸೇರಿದಂತೆ ತಜ್ಞರು ಕೊರೋನಾ ಮಾರ್ಗಸೂಚಿ ನಿರ್ಲಕ್ಷ್ಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಇದೀಗ ಪ್ರಧಾನಿ ಮೋದಿ ದಕ್ಷಿಣ ಭಾರತ ರಾಜ್ಯ ಹಾಗೂ ಒಡಿಶಾ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ: ಬೆಂಕಿ ದುರಂತಕ್ಕೆ 50ಕ್ಕೂ ಅಧಿಕ ಸಾವು!

ಇರಾಕ್‌ನ ನಸ್ಸೀರಿಯಾದಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು, 67ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಕ್ಸಿಜನ್ ಟ್ಯಾಂಕ್‌ ಸ್ಪೊಟಗೊಂಡ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ದೇಶದಲ್ಲಿ 3ನೇ ಅಲೆ ಜು.4ಕ್ಕೇ ಆರಂಭವಾಗಿದೆ!

ದೇಶದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಕೊರೋನಾದ 3ನೇ ಅಲೆ ಆರಂಭವಾಗಬಹುದು ಎಂದು ಎಲ್ಲರೂ ಹೇಳುತ್ತಿದ್ದರೆ, ಹೈದರಾಬಾದ್‌ನ ವೈದ್ಯಕೀಯ ತಜ್ಞರೊಬ್ಬರು ಜು.4ಕ್ಕೇ ದೇಶದಲ್ಲಿ 3ನೇ ಅಲೆ ಆರಂಭವಾಗಿದೆ ಎಂದು ತಮ್ಮದೇ ಲೆಕ್ಕಾಚಾರದ ಮೂಲಕ ಪ್ರತಿಪಾದಿಸಿದ್ದಾರೆ.

ಬಿಜೆಪಿಗೆ ಏಕಾಂಗಿ ಜಯ ಅಸಾಧ್ಯ: ರಾಷ್ಟ್ರಪತಿ ಆಯ್ಕೆಗೆ ಮೈತ್ರಿ ಅನಿವಾರ್ಯ!

ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಎನ್‌ಡಿಎ ಮೈತ್ರಿ ಪಕ್ಷಗಳು ಹಾಗೂ ಇನ್ನಿತರ ಕೆಲ ರಾಜಕೀಯ ಪಕ್ಷಗಳ ನೆರವು ಬೇಕಾಗುತ್ತದೆ. ಬಿಜೆಪಿಯ ಬಳಿಯಿರುವ ಮತಗಳನ್ನು ಮಾತ್ರ ಬಳಸಿದರೆ ಆ ಪಕ್ಷಕ್ಕೆ ಬೇಕಾಗುವ ಅಭ್ಯರ್ಥಿಯ ಆಯ್ಕೆ ಸಾಧ್ಯವಿಲ್ಲ ಎಂಬ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ.

ಕ್ರಿಸ್ ಗೇಲ್‌ ಅಬ್ಬರ, ಆಸೀಸ್‌ ಎದುರು ಟಿ20 ಸರಣಿ ವಿಂಡೀಸ್ ಪಾಲು'

ಯುನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್ ಗೇಲ್‌ ಬಾರಿಸಿದ(67 ರನ್‌, 38 ಎಸೆತ) ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ವೆಸ್ಟ್ ಇಂಡೀಸ್ ತಂಡವು 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ನಿಕೋಲಸ್ ಪೂರನ್‌ ನೇತೃತ್ವದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು3-0 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಸೈಫ್ ಮಗಳು ಸಾರಾ ಧರ್ಮ ಬದಲಾಯಿಸಿದ್ರಾ?...

ಬಾಲಿವುಡ್ ಬೋಲ್ಡ್ ಹುಡುಗಿ ಸಾರಾ ಅಲಿ ಖಾನ್‌ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಮನಸ್ಸಿಗೆ ನೆಮ್ಮದಿ ಸಿಕ್ತು, ಆಶೀರ್ವಾದವೂ ಲಭಿಸಿತು, ಎಂದು ಬರೆದುಕೊಂಡಿದ್ದಾರೆ.  ಆದರೆ ಈ ಫೋಟೋ ಬಗ್ಗೆ ಸಾಕಷ್ಟು ಊಹೂಪೋಹಗಳೂ ಹುಟ್ಟಿ ಕೊಂಡಿವೆ. ಏನವು?

ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ನಳಿನ್  ಕುಮಾರ್ ಕಟೀಲ್ ಕೆಸರು ಗದ್ದೆಗೆ ಇಳಿದು ಉಳುಮೆ ಮಾಡಿದರು. ಪಂಚೆ ಉಟ್ಟು ಕೆಸರಿನ ಗದ್ದೆಗಿಳಿದು ನಳಿನ್ ಕುಮಾರ್ ಕಟೀಲ್ ನಾಟಿ ಮಾಡಿದರು

ಹಳ್ಳಿ ಮಕ್ಕಳ ಇಂಟರ್ನೆಟ್‌ ಸಮಸ್ಯೆಗೆ ಶೀಘ್ರ ಪರಿಹಾರ

ರಾಜ್ಯದ ವಿವಿಧೆಡೆ ಮೊಬೈಲ್‌ ನೆಟ್‌ವರ್ಕ್ ಹಾಗೂ ಇಂಟರ್ನೆಟ್‌ ಸಮಸ್ಯೆಯಿಂದ ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ, ಚಂದನ ವಾಹಿನಿಯ ಇ-ಕ್ಲಾಸ್‌ ವೀಕ್ಷಣೆಗೆ ಆಗುತ್ತಿರುವ ತೊಡಕು ನಿವಾರಣೆಗೆ ಸರ್ಕಾರ ತ್ವರಿತವಾಗಿ ಕ್ರಮ ವಹಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೊಳಿಸಲು ಇದು ಸಕಾಲ ಎಂದ ಸಿ.ಟಿ.ರವಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರಕಾರ 2021-2030ರ ಸಾಲಿನ ಹೊಸ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದಾರೆ.
 

click me!