ಕದ್ದ ಬೈಕ್ ಓನರ್‌ಗೆ ಪಾರ್ಸಲ್ ಕಳಿಸಿದ ಸಾಂದರ್ಭಿಕ ಕಳ್ಳ, ಅಸಲಿ ಕಾರಣ ಒಂದಿದೆ!

By Suvarna NewsFirst Published Jun 2, 2020, 6:21 PM IST
Highlights

ಕದ್ದ ಬೈಕ್ ಪಾರ್ಸಲ್ ನಲ್ಲಿ ವಾಪಸ್ ಬಂತು/ ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ ವ್ಯಕ್ತಿ ಬೈಕ್ ಕದ್ದು ಊರಿಗೆ ತೆರಳಿದ್ದ/ ಆರ್ ಸಿ ಬುಕ್ ನಲ್ಲಿ ಮಾಲೀಕನ ವಿಳಾಸ ಪತ್ತೆ ಹಚ್ಚಿ ಬೈಕ್ ಪಾರ್ಸಲ್ ಮಾಡಿದ ಸಾಂದರ್ಭಿಕ ಕಳ್ಳ

ಕೊಯಂಬತ್ತೂರ್(ಮೇ 02)  ವಲಸಿಗನೊಬ್ಬ ಸ್ಥಳೀಯನ ಬೈಕ್ ಕದ್ದು ಅದರಲ್ಲಿ ಊರಿಗೆ ತೆರಳಿದ್ದ. ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ ಪ್ರಶಾಂತ್ ತನ್ನ ಊರಿಗೆ ಅನಿವಾರ್ಯವಾಗಿ ತೆರಳಬೇಕಿತ್ತು. ಬೇರೆ ದಾರಿ ಕಾಣದೇ ಬೈಕ್ ಕದ್ದು  240  ಕಿಮೀ ದೂರದ ತನ್ನೂರಿಗೆ ಹೆಂಡತಿ ಮಕ್ಕಳೊಂದಿಗೆ ಪ್ರಯಾಣ ಮಾಡಿದ್ದಾನೆ. 

ತನ್ನ ಊರು ಮನ್ನಾರ್ ತಲುಪಿದ ಮೇಲೆ ಆರ್ ಸಿ ಬುಕ್ ಸಹಾಯದಿಂದ ಮಾಲೀಕನ ವಿಳಾಸ ಪತ್ತೆ ಮಾಡಿ ಪಾರ್ಸಲ್ ಮೂಲಕ ಬೈಕ್ ಹಿಂದಿರುಗಿಸಿದ್ದಾನೆ.

ಒಡವೆ ಕದ್ದು ಪರಾರಿಯಾಗಿದ್ದ ಮಹಿಳೆ ಟಿಕ್ ಟಾಕ್ ನಿಂದ ಬಲೆಗೆ

ಬೈಕ್ ಮಾಲೀಕ ಸುರೇಶ್ ಕುಮಾರ್ ಕೊಯಂಬತ್ತೂರಿನಲ್ಲಿ ವರ್ಕ್ ಶಾಪ್ ಒಂದನ್ನು ನಡೆಸಿಕೊಂಡು ಬಂದಿದ್ದಾರೆ. ಅವರಗಿಗೆ ಒಂದು ದಿನ ಪಾರ್ಸೆಲ್ ಏಜೆನ್ಸಿಯೊಂದರಿಂದ ಕರೆ ಬರುತ್ತದೆ. ನಿಮ್ಮ ವಿಳಾಸಕ್ಕೆ ಬೈಕ್ ಒಂದು ಪಾರ್ಸಲ್ ಬಂದಿದೆ ಎಂದು ಕರೆ ಹೇಳುತ್ತದೆ. ಮೇ 18  ರಂದು ಸುರೇಶ್ ತಮ್ಮ ಬೈಕ್ ಕಳೆದುಕೊಂಡು ಕಂಗಾಲಾಗಿದ್ದರು.

ಬೈಕ್ ಕಳುವಾಗಿರುವ ಬಗ್ಗೆ ಸುರೇಶ್ ದೂರು ನೀಡಿದ್ದರು. ಆದರೆ ಪೊಲೀಸರಿಂದ ಯಾವ ಪ್ರಯೋಜನ ಆಗಿರಲಿಲ್ಲ. ಅದು ಹೇಗೋ ಏರಿಯಾದ ಸಿಸಿಟಿವಿ ಫುಟೇಟ್ ಪಡೆದುಕೊಂಡು ತಮ್ಮ ಬೈಕ್ ಕಳ್ಳತನವಾಗುತ್ತಿರುವ ದೃಶ್ಯ ಪತ್ತೆ ಮಾಡಿದ್ದರು.

ಇದಾದ ಮೇಲೆ ಆ ಪೂಟೇಜ್ ನ್ನು ಸ್ಥಳೀಯರಿಗೆ ತೋರಿಸಿದ್ದರು. ಸ್ಥಳೀಯರು ಬೈಕ್ ಕಳ್ಳತನ ಮಾಡುತ್ತಿರುವ ವ್ಯಕ್ತಿ ಪ್ರಶಾಂತ್ ಎಂಧು ಗುರುತು ಮಾಡಿದ್ದರು. ಸ್ಥಳೀಯ ಟೀ ಪ್ಯಾಕಟ್ರಿ ಒಂದರಲ್ಲಿ ಪ್ರಶಾಂತ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು.

ಇದಾದ ಮೇಲೆ ಅದು ಹೇಗೋ ತನ್ನ ಸಹೋದ್ಯೋಗಿ ನೌಕರನಿಂದ ಪ್ರಶಾಂತ್ ಗೆ ಸುರೇಶ್ ನಿನ್ನ ವಿಡಿಯೋ ಇಟ್ಟುಕೊಂಡು ಬೈಕ್ ಹುಡುಕುತ್ತಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ಪರಿಣಾಮ ತನ್ನದಲ್ಲದ ಬೈಕ್ ನ್ನು ಸಾಂದರ್ಭಿಕ ಕಳ್ಳ ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದಾನೆ. ಸುರೇಶ್ ಕುಮಾರ್ ಇದೀಗ ಪೊಲೀಸ್ ದೂರು ವಾಪಸ್ ಪಡೆದುಕೊಂಡಿದ್ದಾರೆ. 

 

click me!