ಚಾಮರಾಜನಗರದಲ್ಲಿ ಮತದಾನ ದಿನ ದಾಂಧಲೆ ನಡೆದಿತ್ತು. ಪೊಲೀಸರು, ಚುುನಾವಣಾ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂ ಮಶೀನ್‌ಗಳನ್ನು ಪುಡಿ ಮಾಡಿದ ಘಟನೆ ನಡೆದಿತ್ತು. ಇದೀಗ ಚಾಮರಾಜನಗರದಲ್ಲಿ ಮರು ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ಚಾಮರಾಜನಗರ(ಏ.27) ದೇಶಾದ್ಯಂತ 2ನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿತ್ತು. ಆದರೆ ಕೆಲ ಮತಗಟ್ಟೆಗಳಲ್ಲಿ ದಾಂಧಲೆ ನಡೆದಿದೆ. ಈ ಪೈಕಿ ಚಾಮರಾಜನಗರದ ಕೆಲ ಮತಗಟ್ಟೆಗಳಲ್ಲಿ ಮತದಾರರು ಮತದಾನ ಬಹಿಷ್ಕರಿಸಿದ ಘಟನೆ ನಡೆದಿತ್ತು. ಮತಗಟ್ಟೆಯಲ್ಲಿ ಜಟಾಪಟಿ ನಡೆದ ಕಾರಣ ಹಲವರು ಗಾಯಗೊಂಡಿದ್ದರು. ಜೊತೆಗೆ ಇವಿಎಂ ಮಶೀನ್‌ಗಳು ಪುಡಿ ಪುಡಿಯಾಗಿತ್ತು. ಹೀಗಾಗಿ ಚಾಮರಾಜನಗರದ 146ನೇ ಬೂತ್‌ನಲ್ಲಿ ಮತದಾನವೇ ನಡೆದಿರಲಿಲ್ಲ. ಹೀಗಾಗಿ ಇಂಡಿಗನತ್ತ ವಾರ್ಡ್ ವ್ಯಾಪ್ತಿಯಲ್ಲಿ ಮರು ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಏಪ್ರಿಲ್ 29 ರಂದು ಚಾಮರಾಜನಗರದ ಒಂದು 146ನೇ ಬೂತ್‌ನಲ್ಲಿ ಮರು ಮತದಾನ ನಡೆಯಲಿದೆ.
ಮೂಲಭೂತ ಸೌಕರ್ಯ ಕೊರತೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಇದರಿಂದ ಮತಗಟ್ಟೆಗಳಲ್ಲಿ ಜಟಾಪಟಿ ನಡೆದಿತ್ತು. ಪೊಲೀಸರು, ಚುನಾವಣಾ ಅಧಿಕಾರ ಮೇಲೆ ಕಲ್ಲು ತೂರಾಟ ನಡೆದಿತ್ತು. ಇವಿಎಂ ಮಶೀನ್‌ಗಳು ಪುಡಿ ಪುಡಿಯಾಗಿತ್ತು. ದಾಂಧಲೆಗಳಿಂದ ಈ ಮತಗಟ್ಟೆಯಲ್ಲಿ ಮತದಾನ ನಡೆದಿಲ್ಲ. ಹನೂರು ವಿಧಾನಸಭಾ ಕ್ಷೇತ್ರದ ಇಂದಿಗನಾಥ ಗ್ರಾಮದ ಬೂತ್ ಸಂಖ್ಯೆ 146ರಲ್ಲಿ ಏಪ್ರಿಲ್ 29 ರಂದು ಮರು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
undefined
ರಾಜ್ಯದ ಹಲವೆಡೆ ಪ್ರತಿಭಟನೆ, ಮೂಲಸೌಕರ್ಯ ಕೊರತೆ, ಮತದಾನ ಬಹಿಷ್ಕಾರ!
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಲು ಕೇಂದ್ರ ಚುನಾವಣಾ ಆಯೋಗ ಮನವಿ ಮಾಡಿದೆ. ಇದೀಗ ಮರು ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ಸಿದ್ಧತೆ ನಡೆಸಿದೆ. ಹೊಸ ಇವಿಎಂ ಮಶೀನ್‌ಗಳನ್ನು ತರಿಸಲಾಗಿದೆ. ಪೊಲೀಸ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇಂಡಿಗನತ್ತದಲ್ಲಿ ಸುಮಾರು 550ಕ್ಕೂ ಹೆಚ್ಚಿನ ಮತಗಳಿವೆ. ಆದರೆ ಇಲ್ಲಿನ ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕೆ ಜನಪ್ರತಿನಿಧಿಗಳಿಗೆ ಭೇಡಿ ಇಟ್ಟಿದ್ದರು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಮಾಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಗ್ರಾಮಸ್ಥರಿಗೆ ಯಾವುದೇ ಸೌಕರ್ಯ ಇದುವರೆಗೆ ಸಿಕ್ಕಿಲ್ಲ. ಹೀಗಾಗಿ ಈ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು.
ಮತದಾನ ಬಹಿಷ್ಕರಿಸಿದ ಕಾರಣ ಚುನಾವಣಾ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ 20 ಹಾಡಿ ಸಮುದಾಯದ ಜನ ಮತದಾನಕ್ಕೆ ಆಗಮಿಸಿದ್ದಾರೆ. ಇದರಿಂದ ವಾಗ್ವಾದ ಸೃಷ್ಟಿಯಾಗಿದೆ. ನಿಯಂತ್ರಣ ತಪ್ಪುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಮಸ್ಥರು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಕರ್ನಾಟಕ Elections 2024: ಚಾಮರಾಜನಗರದಲ್ಲಿ ಮತದಾನ ಬಹಿಷ್ಕಾರ; ಇವಿಎಂ ಮಷಿನ್ ಪೀಸ್ ಪೀಸ್, ಪೊಲೀಸ್ ಮೇಲೂ ಕಲ್ಲು