
ನವದೆಹಲಿ(ಏ.27) ಭಯೋತ್ಪಾದನೆ ವಿರುದ್ಧ, ಹತ್ಯೆಗಳ ವಿರುದ್ದ ಸದಾ ಹೋರಾಡುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್‌ಗೆ ಈ ಬಾರಿ ಬಿಜೆಪಿ ಭರ್ಜರಿ ಗಿಫ್ಟ್ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉಜ್ವಲ್ ನಿಕಮ್‌ಗೆ ಟಿಕೆಟ್ ಘೋಷಿಸಿದೆ. 1993ರ ಮುಂಬೈ ಸ್ಫೋಟ, 2008ರ ಮುಂಬೈ ಮೇಲಿನ ದಾಳಿ ವಿಚಾರಣೆ ವೇಳೆ ರಾಜ್ಯದ ಪರ ವಾದ ಮಂಡಿಸಿ ಪಾಕಿಸ್ತಾನದ ಕೈವಾಡ ಬಯಲು ಮಾಡಿದ ಉಜ್ವಲ್ ನಿಕಮ್, ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಖ್ಯಾತ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್‌ಗೆ ಬಿಜೆಪಿ ಮುಂಬೈ ಸೆಂಟ್ರಲ್‌ನಿಂದ ಟಿಕೆಟ್ ನೀಡಿದೆ.
ಮಹಾರಾಷ್ಟ್ರದ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಉಜ್ವಲ್ ನಿಕಮ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಹಾಲಿ ಸಂಸದೆ ಪೂನಂ ಮಹಾಜನ್‌ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ, ಉಜ್ವಲ್‌ಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ. ಬಿಜೆಪಿಯ ಸ್ಟಾರ್ ನಾಯಕ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್ 2014ರಲ್ಲಿ ಮುಂಬೈ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. 2019ರಲ್ಲೂ ಪೂನಂ ಮಹಾಜಾನ್ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿತ್ತು.
ಕಲ್ಯಾಣ ಕರ್ನಾಟಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ರಣತಂತ್ರ! ಡಿಕೆಶಿ ಮಾಸ್ಟರ್ ಪ್ಲ್ಯಾನ್ ಏನು?
ಈ ಬಾರಿ ಪೂನಂ ಮಹಾಜನ್ ಬದಲು ಉಜ್ವಲ್ ನಿಕಮ್‌ಗೆ ಟಿಕೆಟ್ ಘೋಷಿಸಿದೆ. ಮುಂಬೈ ಸ್ಫೋಟ, ಮುಂಬೈ ಮೇಲಿನ ದಾಳಿ, 2013ರ ಮುಂಬೈ ಗ್ಯಾಂಗ್ ರೇಪ್ ಕೇಸ್ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ವಾದ ಮಂಡಿ ಅಪರಾಧಿಗಳ, ಭಯೋತ್ಪಾದಕರಿಗೆ ಶಿಕ್ಷೆ ಕೊಡಿಸುವಲ್ಲಿ ಉಜ್ವಲ್ ನಿಕಮ್ ಯಶಸ್ವಿಯಾಗಿದ್ದಾರೆ. 2016ರಲ್ಲಿ ಉಜ್ವಲ್ ನಿಕಮ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಮುಖ ಪ್ರಕರಣಗಳಲ್ಲಿ ಅದರಲ್ಲೂ ಭಯೋತ್ಪಾದನಾ ದಾಳಿ, ಉಗ್ರರ ಷಡ್ಯಂತ್ರಗಳ ಪ್ರಕರಣಗಳಲ್ಲಿ ರಾಜ್ಯದ ಪರ ವಾದ ಮಂಡಿಸಿ ಉಗ್ರರ ಮಹಾ ಷಡ್ಯಂತ್ರಗಳನ್ನು ಬಯಲು ಮಾಡಿದ ಹೆಗ್ಗಳಿಗೆ ಉಜ್ವಲ್ ನಿಕಮ್ ಪಾತ್ರರಾಗಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ ಯಶಸ್ಸು ಸಾಧಿಸಿರುವ ಉಜ್ವಲ್ ನಿಕಮ್‌ಗೆ ಭಾರಿ ಬೆದರಿಕೆಗಳು ಇವೆ. ಹೀಗಾಗಿ ಕೇಂದ್ರ ಸರ್ಕಾರ ಉಜ್ವಲ್ ನಿಕಮ್‌ಗೆ Z+ ಭದ್ರತೆ ಒದಿಗಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ