ಮೋದಿಗೆ ರಾಜತಾಂತ್ರಿಕ ಗೆಲುವು: ಮಲ್ಯ ಗಡಿಪಾರಿಗೆ ಒಪ್ಪಿದ ಇಂಗ್ಲೆಂಡ್!

By Web DeskFirst Published Dec 10, 2018, 5:44 PM IST
Highlights

ಮೋದಿ ಆಡಳಿತಕ್ಕೆ ಮತ್ತೊಂದು ಬಹುದೊಡ್ಡ 'ವಿಜಯ'| ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಒಪ್ಪಿಗೆ| ಮಲ್ಯ ಗಡಿಪಾರು ಮಾಡಲು ಅಭ್ಯಂತರವಿಲ್ಲ ಎಂದ ಲಂಡನ್ ಕೋರ್ಟ್| ಭಾರತದ ವಿವಿಧ ಕೋರ್ಟ್ ಗಳಿಗೆ 9 ಸಾವಿರ ಕೋಟಿ ರೂ. ವಂಚನೆ

ಲಂಡನ್(ಡಿ.10): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಒಪ್ಪಿಗೆ ನೀಡಿದೆ.

ಹೌದು, ಕಳೆದ ಹಲವು ವರ್ಷಗಳಿಂದ ಲಂಡನ್‌ನಲ್ಲೇ ತಲೆಮರೆಸಿಕೊಂಡಿದ್ದ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನವಿ ಮಾಡುತ್ತಲೇ ಇತ್ತು.

London's Westminster Magistrates Court orders the extradition of Vijay Mallya to India pic.twitter.com/jWHj8en88K

— ANI (@ANI)

ಅದರಂತೆ ಲಂಡನ್ ಕೋರ್ಟ್ ನಲ್ಲಿ ಈ ಕುರಿತು ಸುದೀರ್ಘ ವಿಚಾರಣೆ ನಡೆದಿದ್ದು, ಸದ್ಯ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಅಭ್ಯಂತರವಿಲ್ಲ ಎಂದು ಕೋರ್ಟ್ ಆದೇಶ ನೀಡಿದೆ.

ಭಾರತದ ವಿವಿಧ ಬ್ಯಾಂಕ್‌ಗಳಿಗೆ ವಿಜಯ್ ಮಲ್ಯ ಒಟ್ಟು 9 ಸಾವಿರ ಕೋಟಿ ರೂ. ಸಾಲ ನಿಡಬೇಕಿದ್ದು, ಇದಕ್ಕೂ ಮೊದಲೇ ಮಲ್ಯ ಗೌಪ್ಯವಾಗಿ ಲಂಡನ್‌ಗೆ ಪರಾರಿಯಾಗಿದ್ದರು.

ಮಲ್ಯ ಪರಾರಿಯಾಗಿದ್ದ ಘಟನೆ ರಾಜಕೀಯವಾಗಿಯೂ ಬಹಳ ಚರ್ಚೆಗೆ ಒಳಪಟ್ಟಿದ್ದು, ಪ್ರಧಾನಿ ಮೋದಿ ಸರ್ಕಾರವೇ ಮಲ್ಯ ಇಂಗ್ಲೆಂಡ್‌ಗೆ ಪರಾರಿಯಾಗಲು ಸಹಾಯ ಮಾಡಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು.

ಕ್ರಿಶ್ಚಿಯನ್ ಮಿಶಲ್ ಆಯ್ತು, ಈಗ ವಿಜಯ್ ಮಲ್ಯ ಗಡಿಪಾರು ತೀರ್ಪು!

ಹೊಸ ಬೇಟೆಗೆ ಸಜ್ಜಾದ ಮೋದಿ: ಪಾತಾಳದಲ್ಲಿ ಅಡಗಿದ್ರೂ ಉಳಿಗಾಲವಿಲ್ಲ

'ಪ್ಲೀಸ್ ನಿಮ್ಮ ಹಣ ತಗೊಳ್ಳಿ': ಮಲ್ಯ ಮನವಿಗೆ ಎಲ್ಲರೂ ದಂಗು!

click me!