ಬ್ಯಾಂಕಾಕ್‌ನಲ್ಲಿ ಸಾವಸ್ಡೀ ಅರ್ಥ ಹೇಳಿದ ಪಿಎಂ ಮೋದಿ!

By Web DeskFirst Published Nov 2, 2019, 9:41 PM IST
Highlights

ಮೂರು ದಿನಗಳ ಕಾಲ ಥಾಯ್ಲೆಂಡ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ| ‘ಸಾವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಭಾಗಿ| ಬ್ಯಾಂಕಾಕ್‌ನಲ್ಲಿ ನನಗೆ ವಿದೇಶದಲ್ಲಿದ್ದಂತೆ ಭಾಸವಾಗುವುದಿಲ್ಲ ಎಂದ ಪ್ರಧಾನಿ| ಭಾರತ, ಥಾಯ್ಲೆಂಡ್​ ರಾಜಮನೆತನದ ಸಂಬಂಧ ಐತಿಹಾಸಿಕ ಎಂದ ಮೋದಿ| 'ಭಾರತ ಮತ್ತು ಥಾಯ್ಲೆಂಡ್ ನಡುವಿನ ಉತ್ತಮ ಸಂಬಂಧಕ್ಕೆ ಸರ್ಕಾರ ಕಾರಣವಲ್ಲ'| ‘ಸಾವಸ್ಡೀ’ ಎಂದರೆ ಸಂಸ್ಕೃತದಲ್ಲಿ 'ಸ್ವಸ್ತಿ' ಎಂದರ್ಥ ಎಂದ ಮೋದಿ|

ಬ್ಯಾಂಕಾಕ್(ನ.02): ಮೂರು ದಿನಗಳ ಕಾಲ ಥಾಯ್ಲೆಂಡ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಬ್ಯಾಂಕಾಕ್​ನಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ‘ಸಾವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

Thailand: Prime Minister Narendra Modi arrives on stage at the ‘’ community event at Nimibutr Stadium in Bangkok. pic.twitter.com/WqbBH7Gu1L

— ANI (@ANI)

ಬ್ಯಾಂಕಾಕ್‌ನಲ್ಲಿ ನನಗೆ ವಿದೇಶದಲ್ಲಿದ್ದಂತೆ ಭಾಸವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದರು. ಇಲ್ಲಿನ ಪರಿಸರ, ನಿಮ್ಮ ಉತ್ಸಾಹ ನೋಡಿದರೆ ನಾನು ನನ್ನ ಮನೆ, ಭಾರತದಲ್ಲೇ ಇದ್ದೇನೆ ಎಂದು ಅನಿಸುತ್ತಿದೆ ಎಂದು ಮೋದಿ ಹೇಳಿದರು.

Thailand: PM Modi at event in Bangkok says, "We (India & Thailand) are very close to each other not only on the basis of language but also the sentiments. You told me 'Sawasdee Modi', this has connection with the Sanskrit word 'Swasti' which means welfare" pic.twitter.com/ld5zmZusOC

— ANI (@ANI)

ಭಾರತ, ಥಾಯ್ಲೆಂಡ್​ ರಾಜಮನೆತನದ ಸಂಬಂಧ ಐತಿಹಾಸಿಕ ಎಂದು ಬಣ್ಣಿಸಿದ ಪ್ರಧಾನಿ, ರಾಜಕುಮಾರಿ ಮಹಾ ಚಕ್ರಿ ಸಿರಿಂಧೋರ್ನ್ ಸಂಸ್ಕೃತ ಭಾಷೆಯಲ್ಲಿ ಪರಿಣಿತಿ ಹೊಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹೌಡಿ ಮೋದಿ' ಆಗ್ತಿದ್ದಂಗೇ 'ಸವಸ್ದಿ ಮೋದಿ'ಗೆ ಹೊರಟ ಪ್ರಧಾನಿ!

Thailand: People attending event in Bangkok, give standing ovation to Prime Minister Narendra Modi as he speaks about abrogation of Article 370 in Jammu & Kashmir. pic.twitter.com/B4izex8EkI

— ANI (@ANI)

ಭಾರತ ಮತ್ತು ಥಾಯ್ಲೆಂಡ್ ನಡುವಿನ ಉತ್ತಮ ಸಂಬಂಧಕ್ಕೆ ಯಾವುದೇ ನಿರ್ದಿಷ್ಟ ಸರ್ಕಾರ ಕಾರಣವಲ್ಲ. ಈ ಸಂಬಂಧಕ್ಕಾಗಿ ಯಾವುದೇ ಒಂದು ಸರ್ಕಾರಕ್ಕೆ ಮನ್ನಣೆ ನೀಡಲಾಗುವುದಿಲ್ಲ. ಹಿಂದೆ ಎರಡು ದೇಶಗಳ ನಡುವೆ ಹಂಚಿಕೊಂಡ ಪ್ರತಿಯೊಂದು ಕ್ಷಣವೂ ಈ ಸಂಬಂಧವನ್ನ ಬಲಪಡಿಸಿದೆ ಎಂದು ಮೋದಿ ನುಡಿದರು.

'ಜಾಗತಿಕ ಸಹಭಾಗಿತ್ವಕ್ಕಾಗಿ ಭಾರತ ಯತ್ನಿಸುತ್ತಿದೆ: ಪ್ರಧಾನಿ ಮೋದಿ!

Thailand: Prime Minister Narendra Modi recites a poem by Tamil poet Thiruvalluvar while he speaks about the Thai translation of Tamil classic 'Tirukkural' which he released at the event, in Bangkok. pic.twitter.com/KH4I7IZENd

— ANI (@ANI)

ನಾವು ಕೇವಲ ಭಾಷೆಯ ಆಧಾರದ ಮೇಲೆ ಮಾತ್ರವಲ್ಲ ಭಾವನೆ ವಿಚಾರದಕಲ್ಲೂ ಪರಸ್ಪರ ಹತ್ತಿರವಾಗಿದ್ದೇವೆ. ನೀವು 'ಸಾವಸ್ಡೀ ಮೋದಿ' ಎಂದು ಹೇಳಿದ್ದೀರಿ, ‘ಸಾವಸ್ಡೀ’ ಎಂದರೆ ಸಂಸ್ಕೃತದಲ್ಲಿ 'ಸ್ವಸ್ತಿ' ಎನ್ನಲಾಗುತ್ತದೆ. ಸ್ವಸ್ತಿ ಎಂದರೆ ‘ಕಲ್ಯಾಣ’ ಎಂಬ ಅರ್ಥ ಬರುತ್ತದೆ ಎಂದು ಮೋದಿ ಹೇಳಿದರು.

click me!