BSY ಬಜೆಟ್‌ನಲ್ಲಿ ರೈತರಿಗೆ ಬಂಪರ್, ಅಮೆರಿಕಾ-ಇರಾನ್ ನಡುವೆ ವಾರ್; ಜ.4ರ ಟಾಪ್ 10 ಸುದ್ದಿ

By Suvarna NewsFirst Published Jan 4, 2020, 5:43 PM IST
Highlights

ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಜೆಟ್ ತಯಾರಿ ನಡೆಸುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೂಡುಗೆ ನೀಡಲು ಬಿಎಸ್‌ವೈ ಮುಂದಾಗಿದ್ದಾರೆ. ಇರಾನ್‌ನ  ಹಾಗೂ ಅಮೆರಿಕಾ ಸಂಬಂಧ ಹಳಸಿರುವ ಬೆನ್ನಲ್ಲೇ ಇದೀಗ ಯುದ್ಧದ ಕಾರ್ಮೋಡ ಆವರಿಸಿದೆ.  ಸೆಕ್ಸಿ ನಟಿ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿ ದಾಖಲೆ ಬರೆದಿದ್ದಾರೆ. ಗಗನಕ್ಕೇರಿದ ಚಿನ್ನದ ಬೆಲೆ ಸೇರಿದಂತೆ ಜನವರಿ 4ರ ಟಾಪ್ 10 ಸುದ್ದಿ ಇಲ್ಲಿವೆ.

ಬೆಂಗಳೂರು(ಜ.04): ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಜೆಟ್ ತಯಾರಿ ನಡೆಸುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೂಡುಗೆ ನೀಡಲು ಬಿಎಸ್‌ವೈ ಮುಂದಾಗಿದ್ದಾರೆ. ಇರಾನ್‌ನ  ಹಾಗೂ ಅಮೆರಿಕಾ ಸಂಬಂಧ ಹಳಸಿರುವ ಬೆನ್ನಲ್ಲೇ ಇದೀಗ ಯುದ್ಧದ ಕಾರ್ಮೋಡ ಆವರಿಸಿದೆ.  ಸೆಕ್ಸಿ ನಟಿ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿ ದಾಖಲೆ ಬರೆದಿದ್ದಾರೆ. ಗಗನಕ್ಕೇರಿದ ಚಿನ್ನದ ಬೆಲೆ ಸೇರಿದಂತೆ ಜನವರಿ 4ರ ಟಾಪ್ 10 ಸುದ್ದಿ ಇಲ್ಲಿವೆ.

ಅಸ್ಸಾಂ ಬಂಧನ ಕೇಂದ್ರದಲ್ಲಿ ಮತ್ತೊಬ್ಬ ಬಲಿ: ಸಾವಿನ ಸಂಖ್ಯೆ 29ಕ್ಕೇರಿಕೆ!



https://kannada.asianetnews.com/india-news/man-lodged-in-assam-detention-camp-dies-toll-rises-to-29-q3krla

ಅಕ್ರಮ ವಲಸಿಗರನ್ನಿರಿಸಿದ ಅಸ್ಸಾಂನ ಬಂಧನ ಕೇಂದ್ರದಲ್ಲಿ ಬಂಧಿಯಾಗಿದ್ದ ವ್ಯಕ್ತಿಯೊಬ್ಬ ಗುವಾಹಟಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾನೆ. 10 ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೇರಿಕೆಯಾಗಿದೆ.

INX ಹಗರಣ ಬೆನ್ನಲ್ಲೇ ಚಿದು ಕೊರಳಿಗೆ ಏರ್‌ ಇಂಡಿಯಾ ಕುಣಿಕೆ?



https://kannada.asianetnews.com/india-news/chidambaram-back-in-ed-interrogation-room-this-time-for-aviation-scam-q3kmbg

ಐಎನ್‌ಎಕ್ಸ್‌ ಹಾಗೂ ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ ಸಂಬಂಧ 100 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ತಿಹಾರ್‌ ಜೈಲಿನಲ್ಲಿದ್ದ, ಹಿರಿಯ ಕಾಂಗ್ರೆಸ್ಸಿಗ ಪಿ.ಚಿದಂಬರಂಗೆ ಮತ್ತೊಂದು ಹಗರಣದ ಕಳಂಕ ಮೆತ್ತಿಕೊಳ್ಳುವ ಸಾಧ್ಯತೆ ಇದೆ.

ಅಮೆರಿಕ, ಇರಾನ್‌ ನಡುವೆ ಯುದ್ಧಾತಂಕ: ವಿಶ್ವ ತಲ್ಲಣ!



https://kannada.asianetnews.com/world-news/tensions-rise-in-the-middle-east-after-us-killing-of-iranian-military-leader-q3khjd

ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ಹಾಗೂ ತೈಲಸಂಪದ್ಭರಿತ ಇಸ್ಲಾಮಿಕ್‌ ರಾಷ್ಟ್ರ ಇರಾನ್‌ ನಡುವಣ ಸಂಬಂಧ ಸಂಪೂರ್ಣ ಹಳಸಿರುವಾಗಲೇ, ಇರಾನ್‌ನ ಅತ್ಯಂತ ಪ್ರಭಾವಿ ಭದ್ರತಾ ಪಡೆಯೊಂದರ ದಂಡನಾಯಕ ಮತ್ತು ಧಾರ್ಮಿಕ ಮುಖಂಡ ಖಾಸಿಮ್‌ ಸೊಲೆಮನಿಯನ್ನು ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದೆ. ಇದು ಇರಾನ್‌ನ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದೆ.

ಬಣ್ಣದ ಮಾತಿಗೆ ಮರಳು: ಆಂಟಿಯನ್ನ ಅನುಭವಿಸಿ ಪರಾರಿಯಾದ ಯುವಕ



https://kannada.asianetnews.com/karnataka-districts/woman-protest-against-in-front-of-the-boy-friend-house-in-talikote-in-vijayapura-district-q3kffr

 ಬಣ್ಣದ ಮಾತಿಗೆ ಮರುಳಾಗಿ ಮೂರು ಮಕ್ಕಳು ಹಾಗೂ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದ ಮಹಿಳೆಯೊಬ್ಬಳು ಮೋಸ ಹೋದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ನಡೆದಿದೆ. ಸುಮಾರು 7 ತಿಂಗಳು ಪುಣೆಯಲ್ಲಿ ಮಹಿಳೆಯನ್ನ ದೈಹಿಕವಾಗಿ ಬಳಸಿಕೊಂಡ ಯುವಕ ಇದೀಗ ನಾಪತ್ತೆಯಾಗಿದ್ದಾನೆ. 

27ರ ಹರೆಯದ ನತಾಶಗೆ ಮನಸೋತ 26ರ ಪಾಂಡ್ಯ; ಇಲ್ಲಿದೆ ಕ್ರಿಕೆಟ್ ಬಾಲಿವುಡ್ ಲವ್ ಸ್ಟೋರಿ!...



https://kannada.asianetnews.com/gallery/cricket-sports/hardik-pandya-natasa-stankovic-unknown-facts-of-cricket-bollywood-love-story-q3klep

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದಲ್ಲಿ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಸರ್ಪ್ರೈಸ್ ನೀಡಿದ್ದರು. ಬಾಲಿವುಡ್ ನಟಿ, ಸರ್ಬಿಯಾದ ಹಾಟ್ ಬೆಡಗಿ ನತಾಶ ಸ್ಟಾಂಕೋವಿಚ್ ಜೊತೆ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನತಾಶ ಸ್ಟಾಂಕೋವಿಚ್ ಬೋಲ್ಡ್ ನಟಿ. ಇದೇ ಬೋಲ್ಡ್‌ನೆಸ್‌ಗೆ ಪಾಂಡ್ಯ ಕ್ಲೀನ್ ಬೋಲ್ಡ್ ಆಗಿದ್ದಾರೆ.

ದಿನಕ್ಕೊಬ್ಬರಂತೆ ಏಳು ದಿನ ಗಂಡಸರ ಜೊತೆ ಮಲಗಿದ 30 ವರ್ಷದ ಸೆಕ್ಸಿ ನಟಿ ಇವರೆ!



https://kannada.asianetnews.com/gallery/cine-world/american-youtuber-nadia-bokody-share-bold-picture-on-instagram-q3kqko

ಏಳು ವರ್ಷ ದಾಂಪತ್ಯ ಜೀವನದಲ್ಲಿ ಮುಳುಗೆದ್ದ  ಆಸ್ಟ್ರೇಲಿಯಾದ ಮಹಿಳೆ ನಾದಿಯಾ ಬೊಕಾಡಿ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕ್ವೀನ್ ಆಗಿದ್ದಾರೆ. ವಿಚ್ಛೇದನ  ಪಡೆದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು ಅದರ ಬಗ್ಗೆ ಹೇಳಿಕೊಂಡಿದ್ದಾರೆ.  

ಈ ಬಾರಿ ಬಜೆಟ್ ಲ್ಲಿ ರೈತರಿಗೆ ಆದ್ಯತೆ ಎಂದ ಸಿಎಂ BSY : ಬಂಪರ್ ಕೊಡುಗೆ ನಿರೀಕ್ಷೆ



Read more at: https://kannada.asianetnews.com/state/cm-bs-yediyurappa-clues-about-farmers-friendly-budget-in-hassan-q3krvf
ಮುಂದಿನ ವಾರದಿಂದ ರಾಜ್ಯ ಬಜೆಟ್ ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.  ಹಾಸನದಲ್ಲಿ ನಡೆಯುತ್ತಿರುವ ಪುಷ್ಪಗಿರಿ ಉತ್ಸವಕ್ಕೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ಅಯ್ಯೋ ಶಿವನೇ..!: ಚಿನ್ನದ ಬೆಲೆ ಕೇಳಿರಿ ಸುಮ್ಮನೆ!



https://kannada.asianetnews.com/video/business/gold-and-silver-prices-hike-reach-new-high-in-local-market-q3j4vp

ಚಿನ್ನದ ಬೆಲೆ ಇಳಿಕೆಯನ್ನು ಆಶಿಸುತ್ತಿದ್ದ ಆಭರಣ ಪ್ರಿಯರಿಗೆ ಕಹಿ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿದೆ. ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದ್ದು, ಒಂದೇ ದಿನದಲ್ಲಿ 850 ರೂ. ಜಿಗಿತ ಕಂಡಿದೆ. ಬೆಂಗಳೂರಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 41, 130 ರೂ. ಆಗಿದ್ದು, ಸಾರ್ವಕಾಲಿಕ ದಾಖಲೆ ಕಂಡಿದೆ.

ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!



https://kannada.asianetnews.com/automobile/tata-motors-reveals-altroz-electric-car-launch-date-in-india-q3kj8p

ಟಾಟಾ ಮೋಟಾರ್ಸ್ ಇದೇ ಜನವರಿ 22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಬುಕಿಂಗ್ ಕೂಡ ಆರಂಭಗೊಂಡಿದೆ. ಇದೀಗ ಟಾಟಾ ಅಲ್ಟ್ರೋಝ್ ಎಲೆಕ್ಟಿಕ್ ಕಾರು ಬಿಡುಗಡೆ ದಿನಾಂಕವನ್ನು ಟಾಟಾ ಮೋಟಾರ್ಸ ಬಹಿರಂಗ ಪಡಿಸಿದೆ. 

ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!

ಸಿಎಎ ಕಾಯ್ದೆ ಹಾಗೂ ಅದರ ಜಾರಿಯ ಹಿಂದಿನ ಕಾರಣಗಳ ಕುರಿತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನ ಪ್ರಕಟಿಸಿದ್ದು, ಇದುವರೆಗೂ ಯಾರೂ ತೆರಯದ ಇತಿಹಾಸದ ಪುಟಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.

click me!