ಗೌರಿ ಹತ್ಯೆ ಪ್ರಕರಣ ಭೇದಿಸಿದ ಕನ್ನಡಿಗ IPS ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಪದಕ ಘೋಷಣೆ

By Web DeskFirst Published Aug 12, 2019, 7:24 PM IST
Highlights

ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಐಪಿಎಸ್‌ ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಪದಕ ಘೋಷಣೆ| ಕರ್ನಾಟಕದ ಐಪಿಎಸ್‌ ಅಧಿಕಾರಿ ಎಮ್ ಎನ್ ಅನುಚೇತ್‌ಗೆ ಯುನಿಯನ್ ಹೋಮ್ ಮಿನಿಸ್ಟರ್ ಪದಕ ಘೋಷಿಸಿದ ಕೇಂದ್ರ ಸರ್ಕಾರ. 

ಬೆಂಗಳೂರು, [ಆ.12]: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಐಪಿಎಸ್‌ ಅಧಿಕಾರಿಗೆ ಕೇಂದ್ರ ಸರ್ಕಾರ ಪದಕ ಘೋಷಿಸಿದೆ.

 ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ಮಾಡಿ ತ್ವರಿತಗತಿಯಲ್ಲಿ ಭೇದಿಸಿರುವ ಕಾರಣಕ್ಕೆ ಕರ್ನಾಟಕದ ಐಪಿಎಸ್‌ ಅಧಿಕಾರಿ ಎಮ್ ಎನ್ ಅನುಚೇತ್‌ ಅವರಿಗೆ ಕೇಂದ್ರ‌ ಸರ್ಕಾರ 2019ನೇ ಸಾಲಿನ 'ಯುನಿಯನ್ ಹೋಮ್ ಮಿನಿಸ್ಟರ್' ಪದಕ ಘೋಷಣೆ ಮಾಡಿದೆ.

ಉತ್ತಮ ಮತ್ತು ತ್ವರಿಗತಿ ತನಿಖೆ ಮಾಡಿರುವವರಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರ 'ಯುನಿಯನ್ ಹೋಮ್ ಮಿನಿಸ್ಟರ್' ಪದಕ ನೀಡಿ ಗೌರವಿಸುತ್ತದೆ.

ಗೌರಿ ಹತ್ಯೆ ಭೇದಿಸಿದ ಎಸ್‌ಐಟಿಗೆ 25 ರೂ ಲಕ್ಷ ಬಹುಮಾನ ಘೋಷಣೆ

ಸೆಪ್ಟೆಂಬರ್ 05, 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕೆ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಬಿ.ಕೆ.ಸಿಂಗ್ ನೇತೃತ್ವದ SITಗೆ ವಹಿಸಲಾಗಿತ್ತು. ಅದರಲ್ಲಿ ಎಮ್. ಎನ್. ಅನುಚೇತ್ ತನಿಖೆ ಮಖ್ಯಸ್ಥರಾಗಿದ್ದು, ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿ ಭೇದಿಸಿದ್ದ‌ರು.

ಇದನ್ನು ಗಮನಿಸಿರುವ  ಕೇಂದ್ರ ಸರ್ಕಾರ, ಅನುಚೇತ್  ಅವರಿಗೆ ಯುನಿಯನ್ ಹೋಮ್ ಮಿನಿಸ್ಟರ್ ಪದಕ ಘೋಷಣೆ ಮಾಡಿದೆ. ಈ ಪದಕವನ್ನು ಇದೇ ಸ್ವಾತಂತ್ರ್ಯ ದಿನಾಚರಣೆ [ಆಗಸ್ಟ್ 15] ದಿನದಂದು ವಿತರಿಸಲಾಗುತ್ತದೆ.

click me!