ಅಕ್ರಮ ಮೀನುಗಾರರ ವಿರುದ್ಧ ಕ್ರಮಕ್ಕೆ ಆಗ್ರಹ-ಅಧಿಕಾರಿಗಳಿಗೆ ದಿಗ್ಬಂಧನ!

By Web DeskFirst Published Jan 29, 2019, 1:01 PM IST
Highlights

ಸಮುದ್ರದಲ್ಲಿ ಕಾನೂನು ಬಾಹಿರವಾಗಿ ಲೈಟ್ ಪಿಶಿಂಗ್ ನಡೆಸುತ್ತಿರುವವರ ವಿರುದ್ಧ ತಕ್ಷಣವೇ ಕ್ರಮ  ಕೈಗೊಳ್ಳಲು ಆಗ್ರಹಿಸಿ ಅಧಿಕಾರಿಗಳಿಗೆ ದಿಗ್ಬಂಧನಗೊಳಿಸಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಲು ಮೀನುಗಾರರು ಹೋರಾಟ ತೀವ್ರಗೊಳಿಸಿದ್ದಾರೆ.

ಮಲ್ಪೆ(ಜ.29): ಸಮುದ್ರದಲ್ಲಿ ಅಕ್ರಮವಾಗಿ  ಪ್ರಖರ ಬೆಳಕನ್ನು ಹಾಯಿಸಿ, ಮೀನುಗಳನ್ನು  ಹಿಡಿಯುವ ಬೋಟುಗಳ ವಿರುದ್ಧ ಕ್ರಮ ಕೈಗೊಳ್ಳದ ಮೀನುಗಾರಿಕಾ ಅಧಿಕಾರಿಗಳನ್ನು ಕಚೇರಿಗೆ ಹೋಗದಂತೆ ಮೀನುಗಾರರು ದಿಗ್ಭಂಧನಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಮಲ್ಪೆ ಬಂದರಿನಲ್ಲಿ ನಡೆಯಿತು. 

ಇದನ್ನೂ ಓದಿ: ಮಲ್ಪೆ ಬಂದರಿನಿಂದ ಕಾಣೆಯಾಗಿದ್ದ ಮೀನುಗಾರರು ಶ್ರೀಲಂಕಾದಲ್ಲಿ ಸೇಫ್‌?

ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಮತ್ತು ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಬೆಳಿಗ್ಗೆ ಮಲ್ಪೆ ಬಂದರಿನಲ್ಲಿರುವ ಕಚೇರಿಗೆ ಆಗಮಿಸುತಿದ್ದಂತೆ ನಾಡದೋಣಿ ಮೀನುಗಾರರ ಒಕ್ಕೂಟ ಮತ್ತು ಆಳಸಮುದ್ರ ಟ್ರಾಲ್ ಬೋಟು ಮಾಲಕರ ಸಂಘದ ಸದಸ್ಯರು ಮುತ್ತಿಗೆ ಹಾಕಿದರು ಮತ್ತು ಲೈಟ್ ಫಿಶಿಂಗ್ ನಡೆಸುತ್ತಿರುವ ಮೀನುಗಾರರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಇದನ್ನೂ ಓದಿ: ಬೋಟ್ ದುರಂತ : 100 ಕಿ.ಮೀ. ದೂರದಲ್ಲಿ ಶವ ಪತ್ತೆ

ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರಾದರೂ, ಮೀನುಗಾರರು ಈಗ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿರುವವರನ್ನು ಹಿಂದಕ್ಕೆ ಕರೆಸಬೇಕು ಎಂದು ಹಠ ಹಿಡಿದರು.  ಈ ಸಂದರ್ಭದಲ್ಲಿ ಅಧಿಕಾರಿಗಳು ಅಸಹಾಯಕರಾದಾಗ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಅಕ್ರಮ ಲೈಟ್ ಪಿಶಿಂಗ್ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕು, ಇಲ್ಲದಿದ್ದಲ್ಲಿ ಮೀನುಗಾರಿಕಾ ಕಚೇರಿ ಮುಂದೆ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಿದ್ಯಾರ್ಥಿಗಳ ಫೈಟಿಂಗ್: ಸ್ಥಳೀಯರ ಸಮಯಪ್ರಜ್ಞೆ, ಇಬ್ಬರು ಪ್ರಾಣಾಪಾಯದಿಂದ ಪಾರು

ಜಿಲ್ಲಾಧಿಕಾರಿ ಇನ್ನೂ ಸ್ಥಳಕ್ಕೆ ಬಂದಿಲ್ಲ, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಮೀನುಗಾರರು ಸ್ಥಳದಿಂದ ಕದಲುತ್ತಿಲ್ಲ. ಅಧಿಕಾರಿಗಳು ಮೀನುಗಾರರನ್ನು ಮಾತುಕತೆಗೆ ಕಚೇರಿಗೆ ಅಹ್ವಾನಿಸಿದ್ದಾರೆ.  ಸಮುದ್ರದಲ್ಲಿ 12 ನಾಟಿಕಲ್ ಮೈಲಿಯೊಳಗೆ ರಾತ್ರಿ ಹೊತ್ತು ಜನರೇಟರ್ ಮೂಲಕ ಕೃತಕ ಬೆಳಕು ಹಾಯಿಸಿ, ಮೀನುಗಳನ್ನು ಅಕರ್ಷಿಸಿ ಮೀನು ಹಿಡಿಯುವುದನ್ನು ಲೈಟ್ ಪಿಶಿಂಗ್ ಎನ್ನುತ್ತಾರೆ. ಅದರೆ  ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ.

click me!