
ಭುವನೇಶ್ವರ (ನ.19): ಭಾರತೀಯ ವೈದ್ಯಲೋಕದಲ್ಲಿ ಅತಿದೊಡ್ಡ ಮಿರಾಕಲ್ ನಡೆದಿದೆ. ಅಂದಾಜು 90 ನಿಮಿಷಗಳ ಕಾಲ ಸ್ತಬ್ಧವಾಗಿದ್ದ ಹೃದಯವನ್ನು ವೈದ್ಯರು ಮತ್ತೆ ಲಬ್..ಡಬ್ ಎನಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿರುವ ಏಮ್ಸ್‌ನಲ್ಲಿ ಈ ಅಚ್ಚರಿ ನಡೆದಿದೆ. ಏಮ್ಸ್ ಭುವನೇಶ್ವರದ ವೈದ್ಯರು, ವಿಶೇಷ ಪುನರುಜ್ಜೀವ ವಿಧಾನ-ಇಸಿಪಿಆರ್ ಮಾರ್ಗವನ್ನು ಬಳಸಿಕೊಂಡು ಅಂದಾಜು 90 ನಿಮಿಷಗಳ ಕಾಲ ಹೃದಯ ಬಡಿತ ನಿಂತು ಸಾವಿನಂಚಿನಲ್ಲಿದ್ದ 24 ವರ್ಷದ ಭಾರತೀಯ ಸೈನಿಕನ ಜೀವವನ್ನು ಉಳಿಸಿದೆ. ಇದು ಒಡಿಶಾ ರಾಜ್ಯದ ವೈದ್ಯಕೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ವೈದ್ಯರು ಸೋಮವಾರ ತಿಳಿಸಿದ್ದಾರೆ. ಎಕ್ಸ್‌ಟ್ರಾಕಾರ್ಪೋರಿಯಲ್ ಕಾರ್ಡಿಯೋ-ಪಲ್ಮನರಿ ರೆಸಸಿಟೇಶನ್ (ಇಸಿಪಿಆರ್) ಪ್ರಕ್ರಿಯೆ ಎಂದು ಕರೆಯಲ್ಪಡುವ ಈ ಜೀವ ಉಳಿಸುವ ಕ್ರಮವು ಸುಮಾರು 1.5 ಗಂಟೆಗಳ ಕಾಲ ಹೃದಯ ಬಡಿತ ನಿಂತ ನಂತರವೂ ಯುವಕನ ಜೀವನನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು ಎಂದು ಭುವನೇಶ್ವರದ ಏಮ್ಸ್‌ನ ಡಾ. ಅಶುತೋಷ್ ಬಿಸ್ವಾಸ್ ತಿಳಿಸಿದ್ದಾರೆ.
ಹಾರ್ಟ್ ಫೆಲ್ಯೂರ್ ಆದ ಗಂಭೀರ ಪರಿಸ್ಥಿತಿಯಲ್ಲಿ 24 ವರ್ಷದ ಯುವಕನನ್ನು ಅಕ್ಟೋಬರ್ 1 ರಂದು ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತ ಆಸ್ಪತ್ರೆಗೆ ಬಂದ ಕೆಲವೇ ಕ್ಷಣದಲ್ಲಿ ಆತನಿಗೆ ಕಾರ್ಡಿಯಾಕ್ ಅರೆಸ್ಟ್ ಕೂಡ ಆಗಿತ್ತು. 40 ನಿಮಿಷಗಳ ಸಾಂಪ್ರದಾಯಿಕ ಸಿಪಿಆರ್ ಹೊರತಾಗಿಯೂ,ಹೃದಯದಯಾವುದೇ ಚಟುವಟಿಕೆ ಇರಲಿಲ್ಲ. ಈ ಹಂತದಲ್ಲಿ ವೈದ್ಯರ ತಂಡಕ್ಕೆ ನಿರ್ಣಾಯಕ ನಿರ್ಧಾರ ಮಾಡುವ ಸಮಯ ಬಂದಿತ್ತು. ವ್ಯಕ್ತಿ ಸಾವು ಕಂಡಿದ್ದಾನೆ ಎಂದು ಘೋಷಣೆ ಮಾಡಬೇಕೇ ಅಥವಾ ಅತ್ಯಾಧುನಿಕ ವಿಧಾನವನ್ನು ಪ್ರಯತ್ನ ಮಾಡಬೇಕೇ ಎನ್ನುವ ಗೊಂದಲ ವೈದ್ಯರಿಗೆ ಬಂದಿತ್ತು. ಈ ಹಂತದಲ್ಲಿ ವೈದ್ಯಕೀಯ ತಂಡವು eCPR ಮಾಡೋಣ ಎಂದು ನಿರ್ಧಾರ ಮಾಡಿದ್ದವು ಎಂದು ಬಿಸ್ವಾಸ್ ಹೇಳಿದ್ದಾರೆ.
ಇಂಟೆನ್ಸಿವಿಸ್ಟ್ ಮತ್ತು ಅಡಲ್ಟ್ ಇಸಿಎಂಒ ತಜ್ಞರಾದ ಡಾ. ಶ್ರೀಕಾಂತ್ ಬೆಹೆರಾ ನೇತೃತ್ವದಲ್ಲಿ, ತಂಡವು ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಅನ್ನು ಪ್ರಾರಂಭಿಸಿತು, ಇದರ ನಂತರ ರೋಗಿಯ ಹೃದಯವು ಅನಿಯಮಿತ ಲಯದೊಂದಿಗೆ ಸುಮಾರು 80 ನಿಮಿಷಗಳ ನಂತರ ಮತ್ತೆ ಬಡಿಯಲು ಪ್ರಾರಂಭಿಸಿತು.
"ಮುಂದಿನ 30 ಗಂಟೆಗಳಲ್ಲಿ, ಹೃದಯದ ಕಾರ್ಯವು ಗಮನಾರ್ಹವಾಗಿ ಸುಧಾರಿಸಿತು ಮತ್ತು 96 ಗಂಟೆಗಳ ನಂತರ ರೋಗಿಯನ್ನು ಯಶಸ್ವಿಯಾಗಿ ECMO ನಿಂದ ಹೊರಹಾಕಲಾಯಿತು" ಎಂದು ಡಾ. ಬಿಸ್ವಾಸ್ ಹೇಳಿದರು.
ರೋಗಿಯ ತಾಯಿ, "ನನ್ನ ಮಗನಿಗೆ ಜೀವನದಲ್ಲಿ ಎರಡನೇ ಅವಕಾಶವನ್ನು ನೀಡಿದ್ದಕ್ಕಾಗಿ ನಾನು AIIMS ಭುವನೇಶ್ವರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅವರ ಕೌಶಲ್ಯ, ಸಹಾನುಭೂತಿ ಮತ್ತು ನಿರ್ಣಯವು ನಮ್ಮ ಕುಟುಂಬಕ್ಕೆ ಅದ್ಭುತವಾಗಿದೆ" ಎಂದು ಹೇಳುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. "eCPR, ತಾಂತ್ರಿಕವಾಗಿ ಸವಾಲಾಗಿದ್ದರೂ, ಸಾಂಪ್ರದಾಯಿಕವಾಗಿ ಮಾರಣಾಂತಿಕವಾಗಿ ಪರಿಗಣಿಸಲಾದ ಹೃದಯ ಸ್ತಂಭನಗಳ ಚಿಕಿತ್ಸೆಯಲ್ಲಿ ಭರವಸೆಯ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಈ ಯಶಸ್ಸು ಒಡಿಶಾದ ವೈದ್ಯಕೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಸೂಚಿಸುತ್ತದೆ," ಎಂದು ಡಾ.ಬೆಹರಾ ಹೇಳಿದ್ದಾರೆ.
ರಾಜಾಜಿನಗರದಲ್ಲಿ ಅಗ್ನಿ ಅವಗಢ; ಧಗಧಗನೆ ಉರಿದ ಎಲೆಕ್ಟ್ರಿಕ್ ಶೋ ರೂಮ್, ಯುವತಿ ಸಜೀವ ದಹನ
ಪ್ರಪಂಚದಾದ್ಯಂತ ECPR ನ ಜಾಗೃತಿ ಮತ್ತು ಬಳಕೆಯು ಹೆಚ್ಚುತ್ತಿದೆ ಮತ್ತು ಗಮನಾರ್ಹ ಪ್ರಗತಿಗಳು ನಡೆದಿವೆಯಾದರೂ, ಒಡಿಶಾದಲ್ಲಿ ಇದು ಮೊದಲ ಪ್ರಕರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Bengaluru: ಪ್ರಯಾಣಿಕರ ಎದುರು ಸ್ಟಾರ್ಟ್‌ಅಪ್ ಕನಸು ಬಿಚ್ಚಿಟ್ಟ ಬೆಂಗಳೂರಿನ ಆಟೋ ಡ್ರೈವರ್!
ಇಂಥ ಸುದ್ದಿಯನ್ನು ಓದಿದಾಗ ಸ್ಯಾಂಡಲ್‌ವುಡ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನಕಂಡ ಸುದ್ದಿ ನೆನಪಾದರೂ ಅಚ್ಚರಿಯಿಲ್ಲ. ಅಂದು ಅವರಿಗೆ ತಕ್ಷಣಕ್ಕೆ ಸಿಪಿಆರ್‌ನೊಂದಿಗೆ ಇಸಿಪಿಆರ್ ಕೂಡ ಸಿಕ್ಕಿದ್ದರೆ, ಪವರ್ ಸ್ಟಾರ್ ನಮ್ಮೊಂದಿಗೆ ಇರುತ್ತಿದ್ದರು ಎನ್ನುವ ಯೋಚನೆ ಬರುವುದು ಸಹಜವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ