ರೇವಣ್ಣ  ಮಕ್ಕಳು ಮಾತ್ರ ಇಂಗ್ಲಿಷ್ ಓದಬೇಕಾ? ರೇವಣ್ಣರದ್ದೇ ಪ್ರಶ್ನೆ

By Web DeskFirst Published Dec 31, 2018, 7:21 PM IST
Highlights

ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಕನ್ನಡ ಮತ್ತು  ಇಂಗ್ಲಿಷ್ ಮಾಧ್ಯಮದ ವಿಚಾರ ಚರ್ಚೆಗೆ ಕಾರಣವಾಗಿದ್ದರೆ ಇನ್ನೊಂದು ಕಡೆ ಸಚಿವ ರೇವಣ್ಣ  ಸಹ ಮಾತನ್ನಾಡಿದ್ದಾರೆ.

ಬೆಂಗಳೂರು[ಡಿ.31]   ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಕಲಿಕೆ ಕಡ್ಡಾಯ ಆಗಲೇಬೇಕು. ರೇವಣ್ಣ ಮಕ್ಕಳು, ರಾಜಕಾರಣಿ ಮಕ್ಕಳು ಮಾತ್ರ ಇಂಗ್ಲೀಷ್ ಓದಬೇಕಾ? ಎಲ್ ಕೆಜಿ ಇಂದಲೇ‌ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲಿಸೋದ್ರ ಕುರಿತು ಸಿಎಂಗೆ ನಾನೇ ಮನವಿ ಮಾಡ್ತೀನಿ. ಬುದ್ದಿ ಜೀವಿಗಳ ಜೊತೆ ಕುಳಿತು ಇಂಗ್ಲಿಷ್ ಜಾರಿಗೆ ತರುತ್ತೇವೆ.ಕನ್ನಡ ಇದ್ದೇ ಇರುತ್ತೆ. ಇಂಗ್ಲಿಷ್ ಅದರ ಜೊತೆ ಕಲಿಸಬೇಕು ಎಂದು ಸಚಿವ ೆಎಚ್‌ಡಿ ರೇವಣ್ಣ ತಮ್ಮನ್ನೇ ಉದಾಹರಿಸಿ ಹೇಳಿದ್ದಾರೆ.

ಬಡವರ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸಿಗಬೇಕು. ಇಂಗ್ಲಿಷ್ ಬೇಡ ಅನ್ನೋದಾದ್ರೆ ಎಲ್ಲಾ ಶಾಲೆಗಳಲ್ಲಿ ಕನ್ನಡ ಮಾತ್ರ ಕಡ್ಡಾಯ ಮಾಡಲಿ ನೋಡೋಣ. ಬುದ್ದಿ ಜೀವಿಗಳ ಜೊತೆ ಸಿಎಂ ಮಾತಾಡಿ ಇದನ್ನ ಜಾರಿಗೆ ತರಲಿ ಎಂದು ರೇವಣ್ಣ ಸಲಹೆ ಸಹ ನೀಡಿದ್ದಾರೆ.

click me!