ನೀವು ತಿನ್ನುವ ಹಾಟ್ ಚಿಟೋಸ್ ಪಿತ್ತಕೋಶವನ್ನೇ ತಿಂದುಹಾಕಬಹುದು!

First Published Jul 24, 2018, 1:41 PM IST
Highlights

ನೀವು ಹಾಟ್ ಚಿಟೋಸ್ ಚಟಕ್ಕೆ ಬಿದ್ದಿದ್ದೀರಾ? ನಿಮ್ಮ ಮಕ್ಕಳು ಕೂಡ ಇದು ಇಲ್ಲದೆಯೇ ಬದುಕೋದೆ ಇಲ್ಲ ಎಂಬಂಥ ಸ್ಥಿತಿಗೆ ಬಂದಿದ್ದಾರೆಯೇ? ಹಾಗಾದರೆ ಈ ಸುದ್ದಿ ಖಂಡಿತ ಓದಿ.. ಇದೊಂದು ನಿಮಗೆ ಎಚ್ಚರಿಕೆ ಘಂಟೆ..

ಜನಪ್ರಿಯ ಹಾಟ್ ಚೀಟೋಸ್ ಇದೀಗ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಆಘಾತಕಾರಿ ಅಂಶ ಬಜಹಿರಂಗವಾಗಿದೆ. ಸದಾ ಈ ಚಿಪ್ಸ್ ತಿನ್ನುತ್ತಿದ್ದರೆ ನಿಮ್ಮ ಪಿತ್ತಕೋಶ ಡ್ಯಾಮೇಜ್ ಆಗುವುದು ಖಂಡಿತ.

ಚಿಟೋಸ್ ಒಂದೆ ಅಲ್ಲ ಈ ಬಗೆಯ ಅತಿ ಖಾರದ ಚಿಪ್ಸ್ ಗಳು ನಿಮ್ಮ ಆರೋಗ್ಯದ ದಿಕ್ಕನ್ನೇ ತಪ್ಪಿಸಿಬಿಡುತ್ತವೆ. ಚಿಟೋಸ್ ದಾಸಿಯಾಗಿದ್ದ 17 ವರ್ಷದ ರೆನೆ ಕ್ರಾಯ್ ಗೆಡ್ ಇದೀಗ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಿಸಕೊಂಡಿದ್ದಾರೆ. ಆಕೆಯ ಪಿತ್ತಕೋಶ ಹಾನಿಯಾಗಲು ಚಿಟೋಸ್ ಕಾರಣ ಎಂದು ವೈದ್ಯರು ದೃಢಪಡಿಸಿಸದ್ದಾರೆ.

ಹಿಂದೆ ಮ್ಯಾಗಿಯಲ್ಲಿ ಹಾನಿಕಾರಕ ಅಂಶ ಇದೆ ಎಂದು ಸುದ್ದಿಯಾಗಿದ್ದಲ್ಲದೇ ನಿಷೇಧವನ್ನು ಹೇರಲಾಗಿತ್ತು. ಕಾನೂನು ಹೋರಾಟದ ನಂತರ ಮ್ಯಾಗಿ ಮತ್ತೆ ಮಾರುಕಟ್ಟೆಗೆ ಬಂದಿತು. ಈಗ ಚಿಟೀಸ್ ನ ಸರದಿ.  ನಿಮ್ಮ ಮಕ್ಕಳು ಸಹ ಹಠಕ್ಕೆ ಬಿದ್ದು ಇದನ್ನು ತಿನ್ನುತ್ತಿರಬಹುದು. ಇದಕ್ಕೆ ಅಡಿಕ್ಟ್‌ ಆಗಿರಬಹುದು. ಒಮ್ಮೆ ಯೋಚಿಸಿ ಆಲೋಚಿಸಿ.

click me!