ಮನೆಯಲ್ಲಿರಲಿಲ್ಲ ವೈನಿ: ಹೃದಯಾಘಾತವಾಗಿದ್ದ ಮಾಲೀಕನ ಜೀವ ಉಳಿಸಿದ ಬ್ರೂನಿ!

By Web DeskFirst Published Jan 30, 2019, 12:27 PM IST
Highlights

ಸಾಕುನಾಯಿಯ ಸಮಯಪ್ರಜ್ಞೆಯಿಂದ ಉಳಿಯಿತು ಮಾಲೀಕನ ಜೀವ| ಹೃದಯಾಘಾತದಿಂದ ಒದ್ದಾಡುತ್ತಿದ್ದ ಮಾಲೀಕನ ಜೀವ ಉಳಿಸಿದ ಬ್ರೂನಿ| ಪುಣೆಯ ವೈದ್ಯ ರಮೇಶ್ ಸಂಚೇತಿ ಜೀವ ಉಳಿಸಿತು ಸಾಕುನಾಯಿ ಬ್ರೂನಿ| ನೆರೆಯ ಅಮಿತ್ ಶಾ ಅವರನ್ನು ಕರೆದು ಆಸ್ಪತ್ರೆಗೆ ಸೇರಿಸಲು ನೆರವಾದ ಸಾಕುನಾಯಿ

ಪುಣೆ(ಜ.30): ನಾಯಿಯ ನಿಯತ್ತಿನ ಕುರಿತು ಅನೇಕ ಕತೆಗಳನ್ನು ಕೇಳಿರುತ್ತೇವೆ. ನಾಯಿ ಮನುಷ್ಯನ ಅತ್ಯಂತ ಪ್ರೀತಿಪಾತ್ರ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ತನಗೆ ಒಂದು ತುತ್ತು ಅನ್ನ ಕೊಟ್ಟ ಮಾಲೀಕನಿಗಾಗಿ ತನ್ನ ಜೀವವನ್ನೂ ಕೊಡುವ ನಿಯತ್ತು ನಾಯಿಗಿದೆ. ಮಾಲೀಕನ ಜೀವ ಆಪತ್ತಿನಲ್ಲಿದ್ದಾಗ ಆತನ ಜೀವ ಉಳಿಸಲು ನಾಯಿ ಏನನ್ನಾದರೂ ಮಾಡುತ್ತದೆ. ಇದಕ್ಕೆ ಉತ್ತಮ ಉತ್ತಮ ನಿದರ್ಶನ ಎಂಬಂತೆ ಪುಣೆಯಲ್ಲಿ ಆಶ್ಚರ್ಯಕಾರಿ ಘಟನೆಯೊಂದು ನಡೆದಿದೆ. 

ಹೃದಯಾಘಾತಕ್ಕೊಳಗಾದ ಮಾಲೀಕನನ್ನು ಆತನ ಸಾಕುನಾಯಿ ರಕ್ಷಿಸಿದ ಪ್ರಸಂಗ ಪುಣೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ವೈದ್ಯರಾಗಿರುವ 65 ವರ್ಷದ ರಮೇಶ್ ಸಂಚೇತಿ ಏಕಾಏಕಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇದೇ ವೇಳೆ ಅವರಿಗೆ ಹೃದಯಾಘಾತವೂ ಸಂಭವಿಸಿದೆ.

ಆದರೆ ಮನೆಯಲ್ಲಿ ಸಂಚೇತಿ ಅವರ ಸಾಕುನಾಯಿ ಬ್ರೂನಿ ಬಿಟ್ಟರೆ ಯಾರು ಕೂಡ ಇರಲಿಲ್ಲ. ಸ್ವಲ್ಪ ಸಮಯದಲ್ಲಿ ನೆರೆಮನೆಯ ಅಮಿತ್ ಶಾ ಎಂಬುವರು ಬ್ರೂನಿಗೆ ಆಹಾರ ನೀಡಲು ಬಂದಿದ್ದು, ಬ್ರೂನಿ ಊಟ ಮಾಡಲು ನಿರಾಕರಿಸಿದೆ. ಅಲ್ಲದೇ ತನ್ನ ಮಾಲೀಕನ ಕೋಣೆಯ ಕಿಟಕಿ ಬಳಿ ಆತಂಕದಿಂದ ಓಡಾಡಲು ಆರಂಭಿಸಿದೆ. 

ಇದರಿಂದ ನುಮಾನಗೊಂಡ ಶಾ, ಕಿಟಕಿಯಿಂದ ಬಗ್ಗಿ ನೋಡಿದಾಗ ಸಂಚೇತಿ ಕುಸಿದು ಬಿದ್ದಿರುವುದು ಕಾಣಿಸಿದೆ. ತಕ್ಷಣ ಬಾಗಿಲು ಒಡೆದು ಸಂಚೇತಿ ಅವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಶಾ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ತನ್ನ ಸಾಕುನಾಯಿ ಬ್ರೂನಿಯ ಸಮಯಪ್ರಜ್ಞೆಯಿಂದ ಸಂಚೇತಿ ಅವರ ಜೀವ ಉಳಿದಿದ್ದು, ಮುದ್ದಾದ ಸಾಕುನಾಯಿ ಬ್ರೂನಿಗೆ ಪ್ರಶಂಸೆಯ ಸುರಿಮಳೆ ಬರುತ್ತಿವೆ.

ಕಾಮುಕನಿಂದ ಮಹಿಳೆ ಕಾಪಾಡಿ ನಿಷ್ಠೆ ತೋರಿದ ಬೀದಿನಾಯಿ

click me!