ಇತ್ತ ಸಿದ್ದು-ಡಿಕೆಶಿ ಭೇಟಿ, ಅತ್ತ ಟ್ರಂಪ್-ರೋಹಾನಿ ಮಧ್ಯೆ ಕುಸ್ತಿ : ಜ.05ರ ಟಾಪ್ 10 ಸುದ್ದಿ!

By Suvarna News  |  First Published Jan 5, 2020, 4:36 PM IST

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಜ. 05ರ ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|


ಬೆಂಗಳೂರು(ಜ.05): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಕಾಂಗ್ರೆಸ್‌ನಲ್ಲಿ 'ಸಂ'ಕ್ರಾಂತಿ: ಕುತೂಹಲ ಮೂಡಿಸಿದ ಸಿದ್ದು ಡಿಕೆಶಿ ಭೇಟಿ

Latest Videos

undefined

ಬೆಂಗಳೂರು, (ಜ.05): ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಗೊಂದಲಗಳು ಮುಂದುವರೆದಿದ್ದು, ಈ ಈ ನಡುವಲ್ಲೇ ಡಿಕೆ.ಶಿವಕುಮಾರ್  ದಿಢೀರ್  ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

2. ವೀರಪ್ಪನ್‌ನಿಂದ ಡಾ. ರಾಜಕುಮಾರ್‌ ಅಪಹರಣ ; ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ

ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ದಶಕಗಳ ಹಿಂದಿನ ರಾಜಕೀಯ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ.  ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಡಾ. ರಾಜ್- ವೀರಪ್ಪನ್ ಕಿಡ್ನಾಪ್ ಕೇಸ್‌ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏನದು? ಇಲ್ಲಿದೆ ನೋಡಿ.


3. ರಜನಿ ‘ದರ್ಬಾರ್’ ಚಿತ್ರಕ್ಕೆ ತೀವ್ರ ವಿರೋಧ; ಕನ್ನಡ ಪರ ಹೋರಾಟಗಾರರಿಂದ ಎಚ್ಚರಿಕೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.ಜನವರಿ-09 ರಂದು ಚಿತ್ರ ರಿಲೀಸ್ ಆದ್ರೆ, ಥಿಯೇಟರ್ ಗೆ ನುಗ್ಗಿ ಪ್ರದರ್ಶನ ಸ್ಟಾಪ್ ಮಾಡೋದಾಗಿ ಕರ್ನಾಟಕ ಧೀರ ಪಡೆ ಎಚ್ಚರಿಕೆ ನೀಡಿದೆ.

4. 2 ವಾರದಲ್ಲಿ 3ನೇ ಬಾರಿ ಸಚಿವರ ಮೌಲ್ಯಮಾಪನ ಮಾಡಿದ ಮೋದಿ!

ಕೇಂದ್ರ ಸಚಿವಾಲಯಗಳ ಕಾರ್ಯದಕ್ಷತೆಯನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಕಾರ್ಯವೈಖರಿಯನ್ನು ಪರಾಮರ್ಶೆಗೆ ಒಳಪಡಿಸಿದರು.

5. ಚಿನ್ನಕ್ಕೆ ಸಂಬಂಧಿಸಿದ ಸುದ್ದಿ: ಸಂಡೇ ರೇಟ್ ನೊಡ್ಕೊಳ್ಳಿ ಬುದ್ದಿ!


ಕೇವಲ ಎರಡು ವಾರಗಳಲ್ಲಿ ಬರೋಬ್ಬರಿ ಎರಡು ಸಾವಿರ ರೂ. ಏರಿಕೆ ಕಂಡಿರುವ ಚಿನ್ನದ ಬೆಲೆ, ದೇಶೀಯ ಮಾರುಟಕ್ಟೆಯಲ್ಲಿ 40,130 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.2 ರಷ್ಟು ಏರಿಕೆಯಾಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 850 ರೂ. ಏರಿಕೆ ಕಂಡಿರುವುದು ಆಭರಣ ಪ್ರಿಯರ ನಗುವನ್ನೇ ಕಸಿದುಕೊಂಡಿದೆ.

6. 'ಈ ಸಲ ಕಪ್ ನಮ್ದೇ: ವೈರಲ್ ಆಯ್ತು ಡೇಲ್ ಸ್ಟೇನ್ ಕನ್ನಡ ನುಡಿ..!


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿರುವ ದಕ್ಷಿಣ ಆಫ್ರಿಕಾ ಅನುಭವಿ ವೇಗಿ ಡೇಲ್ ಸ್ಟೇನ್, ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದು RCB ತಂಡಕ್ಕೆ ಜೈ ಅಂದಿದ್ದಾರೆ. ಸ್ಟೇನ್ ಕನ್ನಡದಲ್ಲೇ 'ಈ ಸಲ ಕಪ್ ನಮ್ದೇ' ಗೋ RCB ಎಂದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

7. ನಾವು ಭಾರತೀಯ ಮುಸಲ್ಮಾನರು ಎನ್ನಲು ಹೆಮ್ಮೆಯಾಗುತ್ತೆ: ಪಾಕ್ ಪಿಎಂಗೆ ಓವೈಸಿ ಛಾಟಿ!


ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿ ಟ್ರೋಲ್ ಆಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಛಾಟಿ ಬೀಸಿದ್ದಾರೆ. ಇಮ್ರಾನ್ ಖಾನ್ ಭಾರತೀಯ ಮುಸಲ್ಮಾನರ ಬಗ್ಗೆ ಚಿಂತಿಸುವುದನ್ನು ಬಿಟ್ಟು, ತನ್ನ ದೇಶದ ಮುಸಲ್ಮಾನರ ಬಗ್ಗೆ ಯೋಚಿಸಲಿ. ನಮಗೆ ನಾವು ಭಾರತೀಯ ಮುಸಲ್ಮಾನರು ಎನ್ನಲು ಹೆಮ್ಮೆ ಇದೆ ಎಂದಿದ್ದಾರೆ.

8. ತಲುಪಲಾಗದಷ್ಟು ದೂರದಲ್ಲಿದೆ ಈ ಗ್ಯಾಲ್ಸಕ್ಸಿ: ವಿಶ್ವ ರಚನೆಯ ಆರಂಭದ ನಕ್ಷತ್ರಪುಂಜ!


ನಾಸಾದ ಹಬಲ್ ಟೆಲಿಸ್ಕೋಪ್‌ ಸದ್ಯ ವಿಶ್ವದ ಅತ್ಯಂತ ದೂರದ ಗ್ಯಾಲಕ್ಸಿಯನ್ನು ಪತ್ತೆ ಹಚ್ಚಿದ್ದು, MACS0647-JD ಎಂದು ಕರೆಯಲ್ಪಡುವ ಈ ಗ್ಯಾಲಕ್ಸಿ ಭೂಮಿಯಿಂದ ಬರೋಬ್ಬರಿ 13.3 ಬಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದೆ.

9. 'ಕೆಂಡಸಂಪಿಗೆ'ಯಲ್ಲಿ ಅರಳಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌ ಏನ್‌ ಬಾಂಬ್ ಅಂತೀರಾ!


'ಕೆಂಡಸಂಪಿಗೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್  ಈಗ ಹೈ ಡಿಮ್ಯಾಂಡ್ ಕ್ರಿಯೇಟ್ ಮಾಡಿರುವ ನಟಿ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ತಮ್ಮ ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳುವ ಮಾನ್ವಿತಾ ತಮ್ಮ ವೃತ್ತಿ ಜೀವನದ ಕೆಲವೊಂದು ಅಮೂಲ್ಯ ಕ್ಷಣಗಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

10. 3 ನೇ ಮಹಾಯುದ್ಧ: ಇರಾನ್- ಅಮೆರಿಕಾ ರಣಕಹಳೆಗೆ ವಿಶ್ವವೇ ವಿಲವಿಲ!


ಇರಾನ್‌ ರಕ್ಷಣಾ ಪಡೆ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಅಮೆರಿಕವು ಡ್ರೋನ್‌ ದಾಳಿ ನಡೆಸಿ ಇರಾಕ್‌ನಲ್ಲಿ ಹತ್ಯೆ ಮಾಡುತ್ತಿದ್ದಂತೆ ಅಮೆರಿಕಾದ ಮೇಲೆ 'ಕಠೋರ ಪ್ರತಿಕಾರ' ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದೆ.

click me!