ಮೈಸೂರು: ಅಣ್ಣೂರು ಹೊಸಹಳ್ಳಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ !

Published : May 08, 2024, 12:41 PM ISTUpdated : May 08, 2024, 12:42 PM IST
ಮೈಸೂರು: ಅಣ್ಣೂರು ಹೊಸಹಳ್ಳಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ !

ಸಾರಾಂಶ

ಹೊಸಹಳ್ಳಿ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವು ಪ್ರಭುಸ್ವಾಮಿ ಎಂಬವರ ಬೈಕ್‌ ನ್ನು ಜಖಂಗೊಳಿಸಿತು, ನಂತರ ಗ್ರಾಮದಲ್ಲಿ ಹಲವು ಮನೆಗಳ ಮೇಲೆ ನುಗ್ಗಿ ಮನೆಗಳು ಜಖಂಗೊಂಡಿದ್ದರಿಂದ ಗ್ರಾಮಸ್ಥರು ಭಯಬೀತರಾಗಿದ್ದರು. ಶುಂಠಿ ಬೆಳೆದಿದ್ದ ಜಮೀನಿಗೆ ನುಗ್ಗಿದ ಒಂಟಿ ಸಲಗವು ಪೈಪ್ ಲೈನ್ ಕಿತ್ತು ಅವಾಂತರ ಗೊಳಿಸಿತು.  

ಎಚ್‌.ಡಿ. ಕೋಟೆ(ಮೇ.08):  ಮಂಗಳವಾರ ಬೆಳಗಿನ ಜಾವ ಒಂಟಿ ಸಲಗವೊಂದು ನುಗ್ಗಿ, ದಾಂಧಲೆ ನಡೆಸಿ, ಹಲವಾರು ಮನೆ ಹಾಗೂ ಬೈಕ್‌ ನ್ನು ಜಖಂಗೊಳಿಸಿದ ಘಟನೆ ತಾಲೂಕಿನ ಕಸಬಾ ಹೋಬಳಿ ಅಣ್ಣೂರು ಹೊಸಹಳ್ಳಿಯಲ್ಲಿ ಜರುಗಿದೆ.

ಹೊಸಹಳ್ಳಿ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವು ಪ್ರಭುಸ್ವಾಮಿ ಎಂಬವರ ಬೈಕ್‌ ನ್ನು ಜಖಂಗೊಳಿಸಿತು, ನಂತರ ಗ್ರಾಮದಲ್ಲಿ ಹಲವು ಮನೆಗಳ ಮೇಲೆ ನುಗ್ಗಿ ಮನೆಗಳು ಜಖಂಗೊಂಡಿದ್ದರಿಂದ ಗ್ರಾಮಸ್ಥರು ಭಯಬೀತರಾಗಿದ್ದರು. ಶುಂಠಿ ಬೆಳೆದಿದ್ದ ಜಮೀನಿಗೆ ನುಗ್ಗಿದ ಒಂಟಿ ಸಲಗವು ಪೈಪ್ ಲೈನ್ ಕಿತ್ತು ಅವಾಂತರ ಗೊಳಿಸಿತು.

ಕಾಡಾನೆ-ಮಾನವ ಸಂಘರ್ಷಕ್ಕೆ ಕೊನೆ ಇಲ್ಲ; ಕಾಫಿನಾಡಲ್ಲಿ ಮತ್ತೊಬ್ಬ ಬಲಿ!

ವೀರನ ಹೊಸಹಳ್ಳಿ ಅರಣ್ಯ ಇಲಾಖೆ ಸಿಬ್ಬಂದಿಯವರು ಗ್ರಾಮಸ್ಥರೊಂದಿಗೆ ಸುರಕ್ಷಿತವಾಗಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಿದರು. ಸರ್ಕಾರ ಹಾಗೂ ಅರಣ್ಯ ಇಲಾಖೆಯವರು ಕೂಡಲೇ ಜನ, ಜಾನುವಾರು ಹಾಗೂ ಫಸಲಿಗೆ ರಕ್ಷಣೆ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!