Prajwal Revanna Sex Scandal: ಡಿಕೆಶಿ ಕಂಟ್ರೋಲ್‌ನಲ್ಲಿರುವ ಎಸ್‌ಐಟಿಯಿಂದ ನ್ಯಾಯ ಸಿಗಲ್ಲ: ಶಾಸಕ ಯತ್ನಾಳ

Published : May 08, 2024, 12:19 PM IST
Prajwal Revanna Sex Scandal: ಡಿಕೆಶಿ ಕಂಟ್ರೋಲ್‌ನಲ್ಲಿರುವ ಎಸ್‌ಐಟಿಯಿಂದ ನ್ಯಾಯ ಸಿಗಲ್ಲ: ಶಾಸಕ ಯತ್ನಾಳ

ಸಾರಾಂಶ

ಎಸ್‌ಐಟಿ ಸಂಪೂರ್ಣ ಡಿಕೆಶಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಕೇಸ್ ಸಿಬಿಐಗೆ ಒಪ್ಪಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹಿಸಿದರು.

ವಿಜಯಪುರ (ಮೇ.08): ಎಸ್‌ಐಟಿ ಸಂಪೂರ್ಣ ಡಿಕೆಶಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಕೇಸ್ ಸಿಬಿಐಗೆ ಒಪ್ಪಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿಯಲ್ಲಿರುವ ಅಧಿಕಾರಿಗಳೆಲ್ಲ ರಾಜ್ಯದವರು. ಡಿಕೆಶಿ ಕಂಟ್ರೋಲ್‌ನಲ್ಲಿ ಇರುವವರು. ಹಾಗಾಗಿ ಎಸ್‌ಐಟಿಯಿಂದ ನ್ಯಾಯ ಸಿಗಲ್ಲ ಎಂದು ದೂರಿದರು.

ಇದನ್ನು ಮಾಡಿದವರು ಯಾರು ಎಂದು ನಿನ್ನೆಯೇ ದೇವರಾಜೇಗೌಡ ಸ್ಪಷ್ಟವಾಗಿ ಹೇಳಿದ್ದು, ಆಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ನಾನು ಮೊದಲೇ ಹೇಳಿದ್ದೆ, ಇದೊಂದು ಫ್ಯಾಕ್ಟರಿ ಇದೆಯೆಂದು. ಈಗ ಇದೊಂದು ಓಪನ್ ಆಗಿದೆ. ಇನ್ನೊಂದು ಓಪನ್ ಆಗುತ್ತದೆ ಎಂದು ಹೇಳಿದರು.

ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ವಿರೋಧಿಸುವ ಶಕ್ತಿ ಡಿಕೆಶಿಗಿದೆ: ಮಾಜಿ ಶಾಸಕ ಎ.ಮಂಜುನಾಥ್

ಕಾಂಗ್ರೆಸ್ ಹೊಣೆ: 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದಾಗ ಈ ಪ್ರಕರಣ ನಡೆದಿದೆ. ಹೀಗಾಗಿ ಇದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಿದೆ. ಮತದಾನದಲ್ಲಿ ನಮ್ಮ ಮೇಲೆ ಯಾವುದೇ ಪರಿಣಾಮ ಆಗಲ್ಲ. 14 ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಇದ್ದಾರೆ. ಇಲ್ಲಿ ಜೆಡಿಎಸ್‌ನವರು ಯಾರೂ ಇಲ್ಲ ಎಂದರು.

ಮೋದಿ ಒಬ್ಬರೇ ಗ್ಯಾರಂಟಿ: ದೇಶಕ್ಕೆ ಒಬ್ಬರೇ ಗ್ಯಾರಂಟಿ. ಅವರೇ ಪ್ರಧಾನಿ ನರೇಂದ್ರ ಮೋದಿ. ಅವರ ಮುಂದೆ, ಸಿದ್ದರಾಮಯ್ಯನವರ ಐದು ಗ್ಯಾರಂಟಿಗಳು ನಡೆಯುವುದಿಲ್ಲ. ನಮ್ಮ ದೇಶ, ಧರ್ಮ ಉಳಿಯಬೇಕಾದರೆ ಪ್ರತಿಯೊಬ್ಬರು ಬಿಜೆಪಿಗೆ ಮತ ಹಾಕಿ ಪ್ರಧಾನಿ ಮೋದಿ ಅವರ ಕೈಬಲ ಪಡಿಸಬೇಕು ಎಂದು ಶಾಸಕ ಬಸನಗೌಡ ಪಾಟಿಲ ಯತ್ನಾಳ ಹೇಳಿದರು.

ಇದು ಯಾರ ವೈಯಕ್ತಿಕ ಚುನಾವಣೆಯಲ್ಲ. ದೇಶದ ಚುನಾವಣೆ. ದೇಶ ಉಳಿಯಬೇಕಾದರೆ ಬಿಜೆಪಿಗೆ ಮತ ಹಾಕಬೇಕು. ಪ್ರತಿ ಹಳ್ಳಿ, ಹಳ್ಳಿಗಳಲ್ಲಿ ಜನರು ಜಾಗೃತರಾಗಿದ್ದಾರೆ. ಯಾವುದೇ ಆಸೆ ಇಟ್ಟುಕೊಳ್ಳದೇ, ಬಿಜೆಪಿ ಮೇಲೆ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಬಿರು ಬಿಸಿಲನ್ನು ಲೆಕ್ಕಿಸದೇ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದ ಮೇಲೆ ಸೈನಿಕರು ಖುಷಿಯಲ್ಲಿದ್ದಾರೆ. ಭಾರತದ ಸನಾತನ ಧರ್ಮ ನಾಶಪಡಿಸಲು ದೇಶದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಿದ್ದೆ ಮಾಡದೇ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇಂದು ದೇಶ ವಿಶ್ವದಲ್ಲಿ ಬಲಿಷ್ಠ ದೇಶವಾಗಿ ಹೊರಹೊಮ್ಮಿದೆ. 1947ಕ್ಕಿಂತ ಮುಂಚೆ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ದೇಶದ ಹಲವು ಜನ ದೇಶಪ್ರೇಮಿಗಳು ತ್ಯಾಗ, ಬಲಿಧಾನ ನೀಡಿದ್ದಾರೆ. ಅಂದಿನ ದೇಶಪ್ರೇಮ ನಾವೆಲ್ಲ ತೊರಿಸಬೇಕಾಗಿದೆ ಎಂದು ಹೇಳಿದರು.

ಇಬ್ಬರು ಒಪ್ಪಿ ಅರ್ಜಿ ವಾಪಸ್ ಪಡೆದ್ರೆ ವ್ಯಾಜ್ಯ ಇತ್ಯರ್ಥ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್‌ ಸಲಹೆ

ಮುಂದಿನ ಐದು ವರ್ಷದಲ್ಲಿ ದೇಶ ಸಂಪೂರ್ಣ ಬದಲಾಗಲಿದೆ. ಬಾಬಾಸಾಹೇಬ ಅಂಬೇಡ್ಕರ್‌ ಅವರ ಸಂವಿಧಾನದ ಮೇಲೆ ದೇಶ ನಡೆಯಬೇಕು. ಸಂವಿಧಾನದ ಆಶಯಕ್ಕೆ ಧಕ್ಕೆ ತರಲು ಬಿಜೆಪಿಯವರು ಕೈ ಹಚ್ಚಿಲ್ಲ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು, ದೇಶ ಉಳಿಸಲು, ದೇಶದ ಹಿತ ಕಾಪಾಡಲು ಪ್ರತಿಯೊಬ್ಬರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ