ಬೇರೆಯವರ ಸಾಕು ನಾಯಿಯಿಂದ ಲಿಫ್ಟ್‌ನಲ್ಲಿ ಬಾಲಕಿ ಮೇಲೆ ದಾಳಿ : ವೀಡಿಯೋ ವೈರಲ್

By Suvarna NewsFirst Published May 8, 2024, 12:26 PM IST
Highlights

ಬೇರೆಯವರ ಸಾಕುನಾಯೊಂದು ಲಿಫ್ಟ್‌ನಲ್ಲಿ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಉತ್ತರ ಪ್ರದೇಶ: ಬೇರೆಯವರ ಸಾಕುನಾಯೊಂದು ಲಿಫ್ಟ್‌ನಲ್ಲಿ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ಈಗಾಗಲೇ ಲಿಫ್ಟ್‌ ಒಳಗಿದ್ದು, ಬೇರೊಂದು ಪ್ಲೋರ್‌ನಲ್ಲಿ ಲಿಫ್ಟ್ ಬಾಗಿಲು ತೆಗೆದಾಗ ಲಿಫ್ಟ್ ಒಳಗೆ ಎಂಟ್ರಿ ಕೊಡುವ ಶ್ವಾನ ಬಾಲಕಿಗೆ ಕಚ್ಚಿದೆ. ಕೂಡಲೇ ಅದರ ಮಾಲೀಕ ಶ್ವಾನವನ್ನು ಹೊರಗೆ ಎಳೆದಿದ್ದಾರೆ.  ಆದರೆ ಬಾಲಕಿ ನಾಯಿ ಕಚ್ಚಿದ ಬಳಿಕ ಕೈಯನ್ನು ನೋವಿನಿಂದ ಅಲುಗಾಡಿಸುತ್ತಿರುವುದನ್ನು ಕಾಣಬಹುದಾಗಿದೆ.  ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 107ರಲ್ಲಿರುವ ಲೋಟಸ್ 300 ಸೊಸೈಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.  ವೀಡಿಯೋದಲ್ಲಿರುವ ಟೈಮ್‌ಸ್ಟೇಂಪ್ ಪ್ರಕಾರ ಮೇ 3 ರಂದು ರಾತ್ರಿ 9 ಗಂಟೆಗೆ ಘಟನೆ ನಡೆದಿದೆ. 

ಬಾಲಕಿ 4ನೇ ಮಹಡಿಯಿಂದ ಲಿಫ್ಟ್‌ ಒಳಗೆ ಪ್ರವೇಶಿಸಿದ್ದಾಳೆ. ಲಿಫ್ಟ್ 2ನೇ ಫ್ಲೋರ್‌ಗೆ ಬಂದಾಗ ಅದು ಗ್ರೌಂಡ್ ಫ್ಲೋರ್‌ ಎಂದು ಭಾವಿಸಿ ಬಾಲಕಿ ಹೊರಗೆ ಹೋಗುವುದಕ್ಕೆ ಹೆಜ್ಜೆ ಇಡುತ್ತಿದ್ದಂತೆ ಯಾರದೋ ಸಾಕು ನಾಯಿಯೊಂದು ಬಾಲಕಿ ಮೇಲೆ ದಾಳಿ ಮಾಡಿದೆ. ಕೂಡಲೇ ಶ್ವಾನದ ಮಾಲೀಕ ನಾಯಿಯನ್ನು ದೂರ ಎಳೆದಿದ್ದಾನೆ.  ಬಾಲಕಿಗೆ ನಾಯಿ ಕಚ್ಚುವುದನ್ನು ತಡೆಯುವುದಕ್ಕಾಗಿ ಕಾಲಿನಿಂದ ಆತ ಶ್ವಾನವನ್ನು ದೂರ ತಳ್ಳಿದ್ದಾನೆ. ಆದರೂ ಬಾಲಕಿಗೆ ನಾಯಿ ಕಚ್ಚಿದ್ದು,  ಆಕೆ ಲಿಫ್ಟ್‌ನಲ್ಲೇ ನಾಯಿ ಕಚ್ಚಿದ ಜಾಗವನ್ನು ಗಮನಿಸುತ್ತಾ ನೋವಿನಿಂದ ಅಳುವುದನ್ನು ಕಾಣಬಹುದಾಗಿದೆ. ಬಳಿಕ ಲಿಫ್ಟ್ ಗ್ರೌಂಡ್ ಫ್ಲೋರ್‌ಗೆ ಬರುತ್ತಿದ್ದಂತೆ ಆಕೆ ಲಿಫ್ಟ್‌ನಿಂದ ಹೊರ ನಡೆಯುತ್ತಾಳೆ. 

ಬಾಲಕನ ಮೇಲೆ ಫಿಟ್ಬುಲ್ ನಾಯಿ ದಾಳಿ: ನೋಡುತ್ತಾ ನಿಂತ ಜನ, ರಕ್ಷಣೆಗೆ ಬಂದ ಬೀದಿನಾಯಿಗಳು .. ವೀಡಿಯೋ

ಘಟನೆಗೆ ಸಂಬಂಧಿಸಿದಂತೆ ಪೊಲೀಸರಾಗಲಿ ಅಪಾರ್ಟ್‌ಮೆಂಟ್ ಸೊಸೈಟಿ ಸಿಬ್ಬಂದಿಯಾಗಲಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ, ನೋಯ್ಡಾದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ, ಈ ಹಿಂದೆಯೂ ಲಿಫ್ಟ್‌ನಲ್ಲಿ ಬಾಲಕನೋರ್ವನಿಗೆ ಮಹಿಳೆಯೊರ್ವರ ಸಾಕುನಾಯಿ ಕಚ್ಚಿ ಗಾಯಗೊಳಿಸಿತ್ತು. ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ಗಾಜಿಯಾಬಾದ್‌ನಲ್ಲಿ ಜರ್ಮನ್ ಶೆಫರ್ಡ್ ಶ್ವಾನವೊಂದು ಸೈಕಲ್ ಓಡಿಸುತ್ತಿದ್ದ 6 ವರ್ಷದ ಬಾಲಕಿ ಮೇಲೆ ದಾಳಿ ಮಾಡಿತ್ತು. 

ದೇಶಾದ್ಯಂತ ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳ ಮಧ್ಯೆ, "ಮನುಷ್ಯನ ಜೀವಕ್ಕೆ ಅಪಾಯ" ಎಂದು ಪರಿಗಣಿಸಲಾದ 23 "ಆಕ್ರಮಣಕಾರಿ" ಶ್ವಾನ ತಳಿಗಳ ಆಮದು, ಮಾರಾಟ ಮತ್ತು ಸಂತಾನೋತ್ಪತ್ತಿಯ ಮೇಲೆ ಕೇಂದ್ರವು ನಿಷೇಧ ಹೇರಿದೆ. ಕಳೆದ ಮಾರ್ಚ್‌ನಲ್ಲೇ 23 ತಳಿಯ ಶ್ವಾನಗಳನ್ನು ದೇಶದಲ್ಲಿ ನಿಷೇಧಿಸುವಂತೆ ಆದೇಶಿಸಲಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ಈ ಕುರಿತಾಗಿ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದಾರೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಮ್ಮ ಮನೆಯಲ್ಲಿದ್ಯಾ ಈ ತಳಿಯ ಶ್ವಾನಗಳು? 23 ಆಕ್ರಮಣಕಾರಿ Dog Breed ದೇಶದಲ್ಲಿ ಬ್ಯಾನ್‌!

ಅದರಂತೆ   ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಫ್ಸ್, ರಾಟ್‌ವೀಲರ್, ಟೆರಿಯರ್‌ಗಳು ರಿಡ್ಜ್ಬ್ಯಾಕ್, ವುಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್ ನಾಯಿ, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ, ಮತ್ತು ಸಾಮಾನ್ಯವಾಗಿ 'ಬ್ಯಾನ್ ಡಾಗ್' ಎಂದು ಕರೆಯಲ್ಪಡುವ ಎಲ್ಲಾ ಶ್ವಾನಗಳನ್ನು ನಿಷೇಧ ಮಾಡಲಾಗಿದೆ.

Dog attack a teenager in Noida sector-107 society . pic.twitter.com/Il594emIv1

— Jyoti Karki (@Jyoti_karki_)

 

click me!