ರೇಪ್ ಕತೆ ಹಿಂದೆ ಹುಡ್ಗಿಯ ಕರಾಮತ್ತು, ಒಗ್ಗಟ್ಟಿಗಾಗಿ ಕಾಂಗ್ರೆಸ್ ಕಸರತ್ತು; ಮೇ.11ರ ಟಾಪ್ 10 ಸುದ್ದಿ!

By Suvarna News  |  First Published May 11, 2020, 5:12 PM IST

ಕೊರೋನಾ ವೈರಸ್ ನಿಯಂತ್ರಣದಲ್ಲಿ ಮುಂದಿದ್ದ ಕರ್ನಾಟಕಕ್ಕೆ ಇದೀಗ ತಲೆನೋವು ಹೆಚ್ಚಾಗಿದೆ. ಇದೀಗ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ದೆಹಲಿಯ ಹದಿಹರೆಯದ ಸೋಶಿಯಲ್ ಸೈಟ್ ಗ್ರೂಪ್‌ನಲ್ಲಿ ಗ್ಯಾಂಗ್ ರೇಪ್ ಕತೆಗೆ ರೋಚಕ ತಿರುವು ಸಿಕ್ಕಿದೆ. ಇತ್ತ ರಾಜ್ಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ರ ಕೇಳಿಬರುತ್ತಿದೆ. ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, ತಮ್ಮ ಚಿತ್ರಕ್ಕೆ ಬ್ಲಾಕ್ ಮೂಲಕ ಟಿಕೆಟ್ ಖರೀದಿಸಿದ ಸ್ಯಾಂಡಲ್‌ವುಡ್ ನಿರ್ದೇಶ ಸೇರಿದಂತೆ ಮೇ.11ರ ಟಾಪ್ 10 ಸುದ್ದಿ ಇಲ್ಲಿವೆ.
 


#BoisLockersRoom ನೈಜ ಕಥೆಯೇ ಬೇರೆ, ಎಲ್ಲವೂ ಹುಡುಗಿಯದ್ದೇ ಕರಾಮತ್ತು!

Latest Videos

undefined

 ಇದು ಪಕ್ಕಾ ಜಾಲತಾಣದ ಕತೆ.  ಜಾಲತಾಣಕ್ಕೆ ಅಡಿಕ್ಟ್ ಆದವರು ಅಪರಾಧ ಲೋಕಕ್ಕೆ ಹೇಗೆ ತೆರೆದುಕೊಳ್ಳುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.  ಮಕ್ಕಳ ಗ್ರೂಪ್ ನಲ್ಲಿ ಇಂಥದ್ದೆಲ್ಲ ಹರಿದಾಡಿದೆ!

ಕೊರೋನಾ ಆತಂಕ: ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಆಘಾತಕಾರಿ ಬೆಳವಣಿಗೆ!

ಕೊರೋನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗಲೇ ರಾಜ್ಯದಲ್ಲಿ ಸದ್ದಿಲ್ಲದೇ ಆಘಾತಕಾರಿ ಬೆಳವಣಿಗೆಯೊಂದು ನಡೆಯುತ್ತಿದೆ.

ಭಾರತಕ್ಕೆ ಹವಾಮಾನ ಶಾಕ್‌ ನೀಡಲು ಹೋದ ಪಾಕ್‌ಗೆ ಮುಖಭಂಗ!

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹವಾಮಾನ ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆ ಪ್ರಕಟಿಸಲು ಆರಂಭಿಸಿದ ಬೆನ್ನಲ್ಲೇ, ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಕೂಡಾ ಭಾನುವಾರದಿಂದ ಭಾರತದ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ಪ್ರದೇಶಗಳ ಹವಾಮಾನ ವರದಿ ಪ್ರಕಟಿಸಲು ಆರಂಭಿಸಿದೆ.

ಕೊರೋನಾ ನಿಯಂತ್ರಣ: ಭಾರತದ ಕ್ರಮ ಶ್ಲಾಘಿಸಿದ WHO ರಾಯಭಾರಿ!

ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಿಸುತ್ತಿದೆ. ಆಯಾ ದೇಶಗಳು ಕೊರೋನಾ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಕೆಲ ದೇಶಗಳು ಯಶಸ್ವಿಯಾಗಿದ್ದರೆ, ಇನ್ನು ಹಲವು ದೇಶಗಳು ಪ್ರಗತಿಯ ಹಂತದಲ್ಲಿದೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ರಾಯಭಾರಿ, ಬ್ರಿಟೀಷ್ ವೈದ್ಯ ಡೇವಿಡ್ ನಬಾರೋ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಭಾರತದಲ್ಲಿ ಕೊರೋನಾ ನಿಯಂತ್ರಣದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. 

ರೈಲಿನಲ್ಲಿ ಪ್ರಯಾಣಿಸುವವರಿಗೆ ಹೊಸ ಮಾರ್ಗಸೂಚಿ: ಸಚಿವ ಸುರೇಶ್ ಅಂಗಡಿ ಹೇಳಿದ್ರು ಬಿಡಿಸಿ-ಬಿಡಿಸಿ

ಲಾಕ್‌ಡೌನ್ ಮಧ್ಯೆಯೂ ರೈಲು ಸಂಚಾರಕ್ಕೆ ಅನುಮತಿ ನೀಡಿರುವ ಬಗ್ಗೆ ಪರ-ವಿರೋಧಗಳ ಚರ್ಚೆಗಳಾಗುತ್ತಿವೆ. ಇದೀಗ ಇದಕ್ಕೆ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತೆರೆ ಎಳೆದಿದ್ದಾರೆ.

ತಮ್ಮ ಚಿತ್ರಕ್ಕೇ ಟಿಕೆಟ್‌ ಸಿಗದೇ ಬ್ಲಾಕ್‌ನಲ್ಲಿ ಖರೀದಿಸೋ ಸ್ಥಿತಿ ಬಂತು ಈ ನಿರ್ದೇಶಕರಿಗೆ!

ಇದೇನಪ್ಪಾ ಬ್ಲಾಕ್‌ ಟಿಕೆಟ್‌ ಮಾರೋದು ತಪ್ಪು ಅನ್ನೋ ನಿರ್ದೇಶಕರೇ ಫ್ಯಾಮಿಲಿ ಜೊತೆ ಬ್ಲಾಕ್‌ ಟಿಕೆಟ್‌ ಖರೀದಿಸಿ ಅವರ ಸಿನಿಮಾ ನೋಡಿದ್ರಾ?  ಇದರ ಹಿಂದಿನ ಕಥೆನೇ ಬೇರೆ ಇದೆ.....  

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

ಒಗ್ಗಟ್ಟ ಪ್ರದರ್ಶಿಸಲು ಮುಂದಾದ ಕಾಂಗ್ರೆಸ್, ಡಿಕೆಶಿ ಕರೆಗೆ ಒಂದಾದ ಘಟಾನುಘಟಿ ನಾಯಕರು

ಕೊರೋನಾ ಸಂಕಷ್ಟದ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು  (ಸೋಮವಾರ) ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರ ಸಭೆ ನಡೆಯಿತು. ಮೊನ್ನೇ ಅಷ್ಟೇ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಡಿಕೆಶಿ, ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. 

BS6 ವೆಸ್ಪಾ ಎಲಿಗಾಂಟೆ 149 ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!

ಪಿಯಾಗ್ಗಿಯೋ ಅಟೋಮೇಕರ್ ನೂತನ ವೆಸ್ಪಾ ಎಲಿಗಾಂಟೆ 149  ಸ್ಕೂಟರ್ ಬಿಡುಗಡೆ ಮಾಡಿದೆ. BS6 ಎಮಿಶನ್ ಎಂಜಿನ್ ಹೊಂದಿರುವ ನೂತನ ಸ್ಕೂಟರ್ ಅನಾವರಣಗೊಂಡಿದೆ. 150 ಸಿಸಿ ಎಂಜಿನ್ ಹೊಂದಿರುವ ನೂತನ ವೆಸ್ಪಾ ಎಲಿಗಾಂಟೆ ಹಲವು ವಿಶೇಷತೆ ಹೊಂದಿದೆ.

ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಲಾರಿಗಳಲ್ಲಿ ಕಾರ್ಮಿಕರ ಶಿಫ್ಟ್...!

ತಮಿಳುನಾಡಿನಲ್ಲಿರುವ ಮಹಾರಾಷ್ಟ್ರ ಮೂಲದ ಕಾರ್ಮಿಕರನ್ನು ಬೆಂಗಳೂರು ಮಾರ್ಗವಾಗಿ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಇದಕ್ಕೆ ಯಾರು ಅವಕಾಶ ಕೊಟ್ರು? ಹೇಗೆ ಕೊಟ್ರು ಅನ್ನೋದೇ ಪ್ರಶ್ನೆ. ವಿಚಾರ ತಿಳಿದ ಕೂಡಲೇ ಡಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಎಲ್ಲಾ ಟ್ರಕ್‌ಗಳನ್ನು ತಡೆ ಹಿಡಿಯಲಾಗಿದೆ. 
 

click me!