ವಾಯುಮಾಲಿನ್ಯದಿಂದ ಹಲವರು ಅಸ್ವಸ್ಥ, ಪಂದ್ಯದ ಜೊತೆ ಹೃದಯ ಗೆದ್ದ ಭಾರತ; ನ.6ರ ಟಾಪ್ 10 ಸುದ್ದಿ!

By Suvarna NewsFirst Published Nov 6, 2021, 4:36 PM IST
Highlights

ಅಮೆರಿಕ ಸೈನಿಕರಿಗೆ ಹಸ್ತಾಂತರಿಸಿದ್ದ ಅಫ್ಘನ್ ಮಗು ನಾಪತ್ತೆ ಅನ್ನೋ ಮಾಹಿತಿ ಹೊರಬಿದ್ದಿದೆ. ವಾಯುಮಾಲಿನ್ಯದ ಮಧ್ಯೆ ಏಮ್ಸ್ ನಿರ್ದೇಶ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ಜೋಡಿಯೊಂದು ಮದುವೆಯಾಗಲು ಆಗಮಿಸಿದ ಘಟನೆ ನಡೆದಿದೆ. ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ, ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್ ಸೇರಿದಂತೆ ನವೆಂಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಇಡೀ ವಿಶ್ವವನ್ನು ಕಾಡಿತ್ತು ಆ ದೃಶ್ಯ, ಅಮೆರಿಕ ಸೈನಿಕರಿಗೆ ಹಸ್ತಾಂತರಿಸಿದ್ದ ಅಫ್ಘನ್ ಮಗು ನಾಪತ್ತೆ!

ಅಫ್ಘಾನಿಸ್ತಾನ (Afghanistan) ಸಂಘರ್ಷದ ಮಧ್ಯೆ ಇಡೀ ವಿಶ್ವವನ್ನೇ ಕಾಡಿದ್ದ ಈ ಆಘಾತಕಾರಿ ಚಿತ್ರದಲ್ಲಿ ಕಂಡುಬಂದಿದ್ದ 2 ತಿಂಗಳ ಮಗು ಕಾಣೆಯಾಗಿದೆ. ಹೌದು ಆಗಸ್ಟ್ 19 ರಂದು, ಮಿರ್ಜಾ ಅಲಿ ಮತ್ತು ಅವರ ಪತ್ನಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರಿ ಜನಸಮೂಹದ ನಡುವೆ ತಮ್ಮ ಮಗು ಸೊಹೈಲ್ ಅನ್ನು ಯುಎಸ್ ಸೈನ್ಯಕ್ಕೆ ಹಸ್ತಾಂತರಿಸಿದ್ದರು

ವಾಯುಮಾಲಿನ್ಯದ ಮಧ್ಯೆ ಆತಂಕ, ಶಾಕಿಂಗ್ ನ್ಯೂಸ್ ಕೊಟ್ಟ AIIMS ನಿರ್ದೇಶಕ!

 ದೀಪಾವಳಿ (Diwali 2021) ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಇದರಿಂದಾಗಿ ಜನರ ಆರೋಗ್ಯದ ಕಾಳಜಿಯೂ ಹೆಚ್ಚಾಗಿದೆ. ಈಗಾಗಲೇ ಉಸಿರಾಟದ ಕಾಯಿಲೆ ಇರುವವರು ಹೆಚ್ಚು ಜಾಗರೂಕತೆಯಿಂದ ಇರುವಂತೆ ತಜ್ಞರು ಎಚ್ಚರಿಸಿದ್ದಾರೆ. 

T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ನಂತರ, ಭಾರತೀಯ ನಾಯಕ ವಿರಾಟ್ ಕೊಹ್ಲಿ (Virat Kohli), ಆರಂಭಿಕ ರೋಹಿತ್ ಶರ್ಮಾ (Rohit Sharma), ರವಿಚಂದ್ರನ್ ಅಶ್ವಿನ್, ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ಇನ್ನಿತರ ಆಟಗಾರರು ಸ್ಕಾಟ್ಲೆಂಡ್ ತಂಡದ ಆಟಗಾರರನ್ನು ಭೇಟಿ ಮಾಡಲು ಅವರ ಡ್ರೆಸ್ಸಿಂಗ್ ಕೋಣೆಗೆ ತಲುಪಿದರು. ಸ್ಕಾಟ್ಲೆಂಡ್ ಆಟಗಾರರು ಏಕಾಏಕಿ ಬಂದ ಟೀಂ ಇಂಡಿಯಾ ಆಟಗಾರರನ್ನು ಕಂಡು ಬಹಳಷ್ಟು ಸಂತೋಷಪಟ್ಟರು. 

Rashmika Mandanna: ಶ್ರೀವಲ್ಲಿಯಾಗಿ ಸಾನ್ವಿಯ ಬೋಲ್ಡ್ ಲುಕ್, ಹೇಗಿದೆ ?

ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಮನಗೆದ್ದ ಕೊಡಗಿನ ಕುವರಿ ನಂತರ ಹಿಂದಿರುಗಿ ನೋಡೇ ಇಲ್ಲ. ಸಾಲು ಸಾಲು ಸಿನಿಮಾ. ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಬ್ಯುಸಿ

ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ಮದುವೆಯಾಗಲು ಬಂದ ಜೋಡಿ

ನಾವಿಬ್ಬರು ಅಪ್ಪು ಅವರ ಅಪ್ಪಟ ಅಭಿಮಾನಿಗಳು. ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಹಾಗಾಗಿ ನಾವು ಇಲ್ಲೇ ಮದುವೆಯಾಗಲು ನಿಚ್ಚಯ ಮಾಡಿದ್ದೇವೆ. ಸಮಾಧಿ ಮುಂದೆ ಮದುವೆಯಾದರೆ ಅಪ್ಪು ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ.

Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!

ಸಹಜವಾಗಿ ಸಿನಿಮಾಗಳಲ್ಲಿ ನಾವು ಹಾರುವ ಕಾರುಗಳನ್ನು (Flying Car) ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ಹಾರುವ ಕಾರು ಬಳಕೆಗೆ ಲಭ್ಯವಿದೆಯೇ ಎಂದ ಕೂತೂಹಲ ನಮ್ಮ ನಿಮ್ಮೆಲ್ಲರಿಗಿರಬಹದು.

ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ..? ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ!

 ಸ್ಕಾಟ್ಲೆಂಡ್‌ (Scotland) ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ನೆಟ್‌ರನ್‌ರೇಟ್ (Net Run Rate) ಉತ್ತಮಪಡಿಸಿಕೊಂಡಿದೆ. ಟೀಂ ಇಂಡಿಯಾ (Team India) ಸ್ಕಾಟ್‌ಲೆಂಡ್ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿ  ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ

ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್ : ಸಿದ್ದರಾಮಯ್ಯ ಸ್ವಾಗತಕ್ಕೆ ಸಜ್ಜು

 ಜೆಡಿಎಸ್ (JDS) ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ (GT Devegowda) ಕಾಂಗ್ರೆಸ್ ಸೇರ್ಪಡೆಗೂ ಮುನ್ನವೇ ಶಾಕ್ ನೀಡಲು ಸಜ್ಜಾಗುತ್ತಿದ್ದಾರೆ.   (Congress) ಸದ್ಯದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜೊತೆ ಜಿಟಿ ದೇವೇಗೌಡ ಚಾಮುಂಡೇಶ್ವರಿಯಲ್ಲಿ (Chamundeshwari) ಸಂಚಾರ ಮಾಡಲಿದ್ದಾರೆ. 

click me!