ಬಂದ ದಾರಿಗೆ ಸುಂಕವಿಲ್ಲದೇ ಮನೆ ದಾರಿ ಹಿಡಿದ ತೃಪ್ತಿ ದೇಸಾಯಿ

By Web DeskFirst Published 16, Nov 2018, 9:05 PM IST
Highlights

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮತ್ತೊಂದು ಪ್ರಯತ್ನ ವಿಫಲವಾಗಿದೆ. ದೇವಾಲಯ ಪ್ರವೇಶ ಮಾಡುತ್ತೇನೆ ಎಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪ್ರತಿಭಟನೆಗೆ ಅಂಜಿ ಯು ಟರ್ನ್ ತೆಗೆದುಕೊಂಡಿದ್ದಾರೆ.

ಕೊಚ್ಚಿ[ನ.16] ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲೆಂದು ಸುಮಾರು 12 ಗಂಟೆಗಳ ಕಾಲ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಿಂತರೂ ದೇವಾಲಯಕ್ಕೆ ಹೋಗಲು ಸಾಧ್ಯವಾಗದೆ ತೃಪ್ತಿ ದೇಸಾಯಿ ಹಿಂದೆ ತಿರುಗಿದ್ದಾರೆ.

ಆರು ಮಂದಿ ಮಹಿಳೆಯರೊಂದಿಗೆ ಬೆಳಗ್ಗೆ ಮುಂಜಾನೆಯೇ ಕೊಚ್ಚಿ ವಿಮಾನ ನಿಲ್ದಾಣಕ್ಕೆ ದೇಸಾಯಿ ಆಗಮಿಸದರಾದರೂ, ಭಾರಿ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರಿಂದ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಪೊಲೀಸರು ಮಾತನಾಡಿ ಪುಣೆಗೆ ವಾಪಾಸ್ ಹೋಗುವಂತೆ ಮನವಿ ಮಾಡಿಕೊಂಡರು ಎಂದು ತೃಪ್ತಿ ದೇಸಾಯಿ ವಿಮಾನ ನಿಲ್ದಾಣದಲ್ಲೇ ಇದ್ದರು.

ಶಬರಿಮಲೆ ಪ್ರವೇಶಕ್ಕೆ ಬಂದ ತೃಪ್ತಿ ದೇಸಾಯಿ ಯಾರು?

ತೃಪ್ತಿ ದೇಸಾಯಿಗೆ ಈ ಮೊದಲೇ ಕೇರಳಕ್ಕೆ ಆಗಮಿಸಿದರೆ ಕೆಟ್ಟ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾನು ಹಿಂತಿರುಗುವವರೆಗೂ ತನಗೆ ಭದ್ರತೆ ನೀಡಬೇಕೆಂದು ತೃಪ್ತಿ ದೇಸಾಯಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜ‌ಯನ್‌ರಿಗೆ ಪತ್ರವೊಂದರ ಮೂಲಕ ಮನವಿ  ಸಹ ಮಾಡಿಕೊಂಡಿದ್ದರು.

Last Updated 16, Nov 2018, 9:10 PM IST