ಲೋಕಸಭಾ ಚುನಾವಣೆಗೆ ಜೈಲಿನಲ್ಲಿರುವ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ಸ್ಪರ್ಧೆ!

Published : Apr 26, 2024, 07:11 PM IST
ಲೋಕಸಭಾ ಚುನಾವಣೆಗೆ ಜೈಲಿನಲ್ಲಿರುವ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ಸ್ಪರ್ಧೆ!

ಸಾರಾಂಶ

ಖಲಿಸ್ತಾನಿ ಬೆಂಬಲಿತ ಉಗ್ರ ಅಮೃತ್ ಪಾಲ್ ಸಿಂಗ್ ಈಗಾಗಲೇ ಜೈಲು ಸೇರಿದ್ದಾನೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಸಜ್ಜಾಗಿದ್ದು,ಕ್ಷೇತ್ರ ಕೂಡ ಅಂತಿಮಗೊಂಡಿದೆ. ವಿಶೇಷ ಅಂದರೆ ಅಮೃತ್ ಪಾಲ್ ಸಿಂಗ್‌ಗೆ ಗೆಲುವಿನ ಸಾಧ್ಯತೆಗಳಿವೆ ಎಂದು ಕೆಲ ವರದಿಗಳು ಹೇಳುತ್ತಿದೆ.  

ಚಂಡೀಘಡ(ಏ.26) ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು, ಸಮಾಜ ಸೇವರು, ಜನ ಸಾಮಾನ್ಯರು ಸೇರಿದಂತೆ ಅರ್ಹ ವ್ಯಕ್ತಿ ಅದೃಷ್ಠ ಪರೀಕ್ಷೆ ನಡೆಸುವ ಅವಕಾಶವಿದೆ. ಇದೀಗ ಖಲಿಸ್ತಾನಿ ಉಗ್ರ ಸಂಘಟನೆ ಬೆಂಬಲಿಸುವ, ಹಲವು ಕ್ರಿಮಿನಲ್ ಆರೋಪಗಳಿಂದ ಜೈಲು ಸೇರಿರುವ ಅಮೃತ್ ಪಾಲ್ ಸಿಂಗ್ ಇದೀಗ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ. ಪಂಜಾಬ್‌ನ ಖಾದೂರ್ ಸಾಹೀಬ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮೂಲಗಳು ಹೇಳಿವೆ.ಈ ಕುರಿತು ಅಮೃತ್ ಪಾಲ್ ಸಿಂಗ್ ರಾಜ್‌ದೇವ್ ಸಿಂಗ್ ಖಾಲ್ಸ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ನ್ಯಾಷನಲ್ ಸೆಕ್ಯೂರಿಟಿ ಕಾಯ್ದಿ ಅಡಿ ಅಮೃತ್ ಪಾಲ್ ಸಿಂಗ್ ಬಂಧಿಸಿ ಅಸ್ಸಾಂ ಜೈಲಿನಲ್ಲಿಡಲಾಗಿದೆ. ಪಕ್ಷೇತರವಾಗಿ ಸ್ಪರ್ದಿಸಿ ಇದೀಗ ರಾಜಕೀಯ ಶಕ್ತಿ ಬೆಳೆಸಿಕೊಳ್ಳಲು ಪಾಲ್ ನಿರ್ಧರಿಸಿದ್ದಾನೆ. ಅಮೃತ್ ಪಾಲ್ ಸಿಂಗ್ ಸ್ಪರ್ಧೆ ಕುರಿತು ಈತನ ತಾಯಿ ಬಲ್ವಿಂದರ್ ಕೌರ್ ಸ್ಪಷ್ಟಪಡಿಸಿದ್ದಾರೆ. ಅಮೃತ್ ಪಾಲ್ ಸಿಂಗ್ ಬೆಂಬಲಿಗರು ಪ್ರತಿ ದಿನ ಮನೆಗೆ ಆಗಮಿಸಿ ಚುನಾವಣೆಗೆ ಸ್ಪರ್ಧಿಸಲು ಸೂಚಿಸುತ್ತಿದ್ದಾರೆ. ಆತನ ಅಪಾರ ಬೆಂಬಲಿಗರು ಈಗಾಗಲೆ ಸಭೆ ನಡೆಸಿದ್ದಾರೆ. ಪ್ರಚಾರ ನಡೆಸಲು ಸಜ್ಜಾಗಿದ್ದಾರೆ ಎಂದು ಬಲ್ವಿಂದರ್ ಕೌರ್ ಹೇಳಿದ್ದಾರೆ.

ಬಲೆಗೆ ಬಿದ್ದ.. ಖಲಿಸ್ತಾನಿ ಖಳನಾಯಕ.. ನಿಗೂಢ ಕಾರ್ಯಾಚರಣೆ ರಹಸ್ಯವೇನು?

ಅಮೃತ್ ಪಾಲ್ ಸಿಂಗ್ ಚುನಾವಣೆ ಸ್ಪರ್ಧೆ ಸ್ಥಳೀಯರ ನಿರ್ಧಾರ. ಅವರ ಒತ್ತಾಯದಿಂದ ಸ್ಪರ್ಧಿಸಲಾಗುತ್ತಿದೆ ಎಂದು ಅಮೃತ್ ಪಾಲ್ ಸಿಂಗ್ ತಂದೆ ಹೇಳಿದ್ದಾರೆ. ಈಗಾಗಲೇ ವಕೀರಲ ಜೊತೆ ಕಾನೂನು ತೊಡಕಿನ ಕುರಿತು ಮಾತುಕತೆ ನಡೆಸಿದ್ದಾರೆ. ಖಾದೂರ್ ಸಾಹೀಬ್ ಕ್ಷೇತ್ರದಲ್ಲಿ ಅಮೃತ್ ಪಾಲ್ ಸಿಂಗ್ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.ಟ

ಇತ್ತೀಚೆಗೆ ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತು ಅಮೃತ್ ಪಾಲ್ ಸಿಂಗ್ ಅಡ್ಡಗೋಡೆ ಮೇಲೆ ದ್ವಿಪವಿಟ್ಟಂತೆ ಹೇಳಿಕೆ ನೀಡಿದ್ದರು. ಜನರು ಬಯಸಿದ್ದರೆ ಸ್ಪರ್ಧಿಸುತ್ತೇನೆ. ಎಲ್ಲವೂ ಜನ ಹಾಗೂ ಬೆಂಬಲಿಗರ ತೀರ್ಮಾನ. ಹೋರಾಟದ ಬದುಕು ನನ್ನದು. ಜನರು ಹೋರಾಡಲು ಹೇಳಿದರೆ ಹೋರಾಡುತ್ತೇನೆ. ಅವರು ಬೇಡ ಎಂದರೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.

ಇದೀಗ ಖಾದೂರ್ ಸಾಹೀಬ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಹಾಗೂ ಶಿರೋಮಣಿ ಅಕಾಲಿ ದಳ ಅಖಾಡದಲ್ಲಿದೆ. ಇಲ್ಲಿ ಆಪ್ ಹಾಗೂ ಅಕಾಲಿ ದಳ ಪ್ರಬಲ ಪ್ರತಿಸ್ಪರ್ಧಿಗಳಾಗಿದೆ. ಹೀಗಾಗಿ ಮೂರನೇ ವ್ಯಕ್ತಿಯಾಗಿ ಅಮೃತ್ ಪಾಲ್ ಸಿಂಗ್ ಪ್ರವೇಶ ನೀಡಿ ಗೆಲುವಿನ ಸಿಹಿ ಕಾಣುವ ಸಾಧ್ಯತೆ ಇದೆ ಎಂದು ಅಮೃತ್ ಪಾಲ್ ಸಿಂಗ್ ಬೆಂಬಲಿಗರು ಹೇಳುತ್ತಿದ್ದಾರೆ.

ತಪ್ಪಿಸಲು ಯತ್ನಿಸಿದ ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್ ಹತ್ಯೆಗೈದ ಪಂಜಾಬ್ ಪೊಲೀಸ್!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?