ಗೋವಾದಲ್ಲಿ ಇಬ್ಬರು ಸಹೋದರರು ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಪ್ರಾಥಮಿಕ ತನಿಖೆಯು ಅಣ್ಣ-ತಮ್ಮಂದಿರು ಉಪವಾಸ ಮಾಡುತ್ತಿದ್ದ ಕಾರಣ ಆಹಾರ ಸೇವಿಸಿರಲ್ಲಿಲ್ಲ. ಹೀಗಾಗಿ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ
ಗೋವಾದಲ್ಲಿ ಇಬ್ಬರು ಸಹೋದರರು ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. 29 ಮತ್ತು 27 ವರ್ಷ ವಯಸ್ಸಿನ ಇಬ್ಬರು ಸಹೋದರರು ಗೋವಾದ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಒಂದು ದಿನದ ನಂತರ, ಪ್ರಾಥಮಿಕ ತನಿಖೆಯು ಅವರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ತಾಯಿ ಕೂಡ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಅಧಿಕಾರಿಗಳ ಪ್ರಕಾರ, ಕುಟುಂಬ ಸದಸ್ಯರು ಹಲವಾರು ದಿನಗಳಿಂದ ದಿನಕ್ಕೆ ಒಂದು ಖರ್ಜೂರವನ್ನು ಮಾತ್ರ ತಿನ್ನುತ್ತಿದ್ದರು. ಸಹೋದರರ ತಂದೆ, ಗಾರ್ಮೆಂಟ್ ಮಾರಾಟಗಾರರಾಗಿದ್ದು, ಉಪವಾಸದ ಬಗ್ಗೆ ಪರವಾದ ಅಭಿಪ್ರಾಯ ಇಲ್ಲವಾಗಿದ್ದ ಕಾರಣ ಪತ್ನಿ ಮತ್ತು ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಪರೀಕ್ಷೆಯ ವರದಿಯಲ್ಲಿ, ಸಹೋದರರ ಸಾವಿಗೆ 'ತೀವ್ರ ಕ್ಯಾಚೆಕ್ಸಿಯಾ ಮತ್ತು ಅಪೌಷ್ಟಿಕತೆ' ಕಾರಣ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೇ ವರ್ಷದಲ್ಲಿ 45 ಕೆಜಿ ಕಳೆದುಕೊಂಡಿದ್ದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ವಿಚಿತ್ರ ರೋಗದಿಂದ ಸಾವು!
ಮೃತರನ್ನು ಎಂಜಿನಿಯರ್ ಮೊಹಮ್ಮದ್ ಜುಬೇರ್ ಖಾನ್ (29) ಮತ್ತು ಅವರ ಕಿರಿಯ ಸಹೋದರ ಅಫಾನ್ ಖಾನ್ (27) ಎಂದು ಗುರುತಿಸಲಾಗಿದೆ. ಮಕ್ಕಳ ತಾಯಿ ರುಕ್ಸಾನಾ ಖಾನ್, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ ನಂತರ ಮಾನಸಿಕ ಆರೋಗ್ಯದ ಮೌಲ್ಯಮಾಪನಕ್ಕಾಗಿ ಗೋವಾ ವೈದ್ಯಕೀಯ ಕಾಲೇಜಿನ ಮನೋವೈದ್ಯಶಾಸ್ತ್ರ ಸಂಸ್ಥೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೃತರ ತಂದೆ ನಜೀರ್ ಖಾನ್, ಇತ್ತೀಚಿಗೆ ಮನೆಗೆ ಭೇಟಿ ನೀಡಿದಾಗ ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ಮನೆ ಒಳಗಿನಿಂದ ಬೀಗ ಹಾಕಿತ್ತು. ಒಂದು ಕೋಣೆಯಲ್ಲಿ ಕಿರಿಯ ಮಗ ಶವವಾಗಿ ಪತ್ತೆಯಾಗಿದ್ದಾನೆ. ಹಿರಿಯ ಮಗ ಪಕ್ಕದ ಕೋಣೆಯಲ್ಲಿ ನೆಲದ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಪತ್ನಿ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಆಹಾರ ಅಥವಾ ನೀರು ಇರಲಿಲ್ಲ. ಆಹಾರ ಸೇವಿಸರೆ ಎಲ್ಲರ ದೇಹಗಳು ದೇಹಗಳು ಸುಕ್ಕುಗಟ್ಟಿದವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಟವಾಡುತ್ತಾ ನಿಲ್ಲಿಸಿದ್ದ ಕಾರು ಹತ್ತಿದ ಮಕ್ಕಳು, ಡೋರ್ ತೆರೆಯಲಾಗದೆ ಇಬ್ಬರು ಮೃತ!
ಪೊಲೀಸರ ಪ್ರಕಾರ, ಈ ವಾರದ ಆರಂಭದಲ್ಲಿಯೂ ನಜೀರ್ ಮನೆಗೆ ಭೇಟಿ ನೀಡಿದ್ದರು, ಆದರೆ ಅವರ ಪತ್ನಿ ಮತ್ತು ಪುತ್ರರು ಅವನನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ.ನಜೀರ್ ಅವರು ದಿನಸಿಗಾಗಿ ಸ್ವಲ್ಪ ಹಣವನ್ನು ಮನೆಯ ಸಣ್ಣ ಕೀಹೋಲ್ ಮೂಲಕ ಹಾಕುತ್ತಿದ್ದರು ಆದರೆ ಕಳೆದ ಕೆಲವು ವಾರಗಳಲ್ಲಿ, ಕುಟುಂಬವು ಆ ಕೀಹೋಲ್‌ನ್ನು ಸಹ ಮುಚ್ಚಿತ್ತು. ಜನರು ಪ್ರವೇಶಿಸುವುದನ್ನು ತಡೆಯಲು ಅವರು ಮನೆಯ ಮುಖ್ಯ ಬಾಗಿಲಿನ ಪಕ್ಕದಲ್ಲಿ ಕೆಲವು ಪೀಠೋಪಕರಣಗಳನ್ನು ಹಾಕಿದ್ದರು' ಎಂದು ನೆರೆಹೊರೆಯವರು ತಿಳಿಸಿದ್ದಾರೆ.