ವಿಚ್ಛೇದನ ಪಡೆದ ಸೆಲೆಬ್ರೆಟಿ ಜೋಡಿ, ಸಂಪುಟ ವಿಸ್ತರಣೆಗೆ ಸಜ್ಜಾದ ಮೋದಿ; ಜು.3ರ ಟಾಪ್ 10 ಸುದ್ದಿ!

By Suvarna NewsFirst Published Jul 3, 2021, 5:26 PM IST
Highlights

ಉತ್ತರಖಂಡ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆಯಾಗಿದ್ದಾರೆ. ಕೋವ್ಯಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿ ಎಂದು 3ನೇ ಹಂತದ ಟ್ರಯಲ್‌ನಲ್ಲಿ ಸಾಬೀತಾಗಿದೆ. ಜು.7ರೊಳಗೆ  ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ನಟ ಅಮಿರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಚೇದನ, ಕೊಹ್ಲಿ 1 ಪೋಸ್ಟ್‌ಗೆ 5 ಕೋಟಿ ರೂ ಗಳಿಕೆ ಸೇರಿದಂತೆ ಜುಲೈ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಉತ್ತರಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆ!...

ಪುಷ್ಕರ್ ಸಿಂಗ್ ಧಾಮಿಯನ್ನು ಇಂದು ಉತ್ತರಾಖಂಡ ಬಿಜೆಪಿ ಶಾಸಕಾಂಗ ಪಕ್ಷವು ರಾಜ್ಯದ ಹನ್ನೊಂದನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. 

ದೇಶದ 95% ಮುಸ್ಲಿಮರಿಗೆ ಭಾರತೀಯರೆಂಬ ಹೆಮ್ಮೆ ಇದೆ; Pew ಸಮೀಕ್ಷೆ!...

ಭಾರತದ ಶೇಕಡಾ 95 ರಷ್ಟು ಮುಸ್ಲಿಮರಿಗೆ ಭಾರತೀಯರು ಅನ್ನೋ ಹೆಮ್ಮೆ ಇದೆ ಎಂದು ಅಮೆರಿಕದ ವಾಶಿಂಗ್ಟನ್ ಡಿಸಿ ಮೂಲಕ Pew ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆ ಹೇಳಿದೆ. ಭಾರತೀಯರು ಹಾಗೂ ಭಾರತದ ಸಂಸ್ಕ್ರತಿ ವಿಚಾರದಲ್ಲೂ ಈ ಸಮೀಕ್ಷೆ ಬೆಳಕು ಚೆಲ್ಲಿದೆ. ಶೇಕಡಾ 85 ರಷ್ಟು ಮುಸ್ಲಿಮರು, ಭಾರತೀಯರು ಪರಿಪೂರ್ಣರಲ್ಲ, ಆದರೆ ಭಾರತದ ಸಂಸ್ಕೃತಿ ಇತರರಿಗಿಂತ ಶ್ರೇಷ್ಠವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

3 ನೇ ಹಂತದ ಟ್ರಯಲ್: ಕೋವ್ಯಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿ...

ಕೋವ್ಯಾಕ್ಸಿನ್ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ಡೇಟಾ ಬಹಿರಂಗವಾಗಿದೆ. ಕೋವಿಡ್ ಸೋಂಕಿತರಿಗೆ ಕೋವ್ಯಾಕ್ಸಿನ್ ಶೇ. 77.8 ರಷ್ಟು ಪರಿಣಾಮಕಾರಿ. ಡೆಲ್ಟಾ ರೂಪಾಂತರಿ ವಿರುದ್ಧ ಶೇ. 65.2 ರಷ್ಟು ಪರಿಣಾಮಕಾರಿ ಎಂದು ತಿಳಿದು ಬಂದಿದೆ. 

ಜು.7ರೊಳಗೆ ಪ್ರಧಾನಿ ಮೋದಿ ಸಂಪುಟ ವಿಸ್ತರಣೆ..?...

ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಎದ್ದಿರುವ ಎಲ್ಲಾ ಊಹಾಪೋಹಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ಹಂತದಲ್ಲಿ ಸಂಪುಟ ಪುನರ್‌ ರಚನೆಗೆ ಮುಂದಾಗುವ ಸಾಧ್ಯತೆ ಇದೆ. ಮೊದಲ ಹಂತದ ಸಂಪುಟ ಪುನರ್‌ ರಚನೆ ಜು.7ರ ಒಳಗಾಗಿ ನಡೆಯಬಹುದು. ಮುಂಗಾರು ಅಧಿವೇಶನ ಮುಗಿದ ಬಳಿಕ ಇನ್ನಷ್ಟು ಮಂದಿ ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೊಹ್ಲಿ ಪ್ರತಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ 5 ಕೋಟಿ ರುಪಾಯಿ ಗಳಿಕೆ..!...

ವಿಶ್ವದ ಶ್ರೀಮಂತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಇನ್‌ಸ್ಟಾಗ್ರಾಂನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಬರೋಬ್ಬರಿ 12 ಕೋಟಿ ರು. ಗಳಿಸಲಿದ್ದಾರೆ. ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ರೊನಾಲ್ಡೋ ರಾಯಭಾರಿಯಾಗಿದ್ದಾರೆ. ಅಲ್ಲದೇ ಇನ್ನೂ ಅನೇಕ ಬ್ರ್ಯಾಂಡ್‌ಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ್ದಾರೆ.

15 ವರ್ಷದ ವೈವಾಹಿಕ ಜೀವನದ ನಂತರ ಬೇರಾಗುತ್ತಿದ್ದಾರೆ ಅಮೀರ್-ಕಿರಣ್...

ಬಾಲಿವುಡ್‌ನ ಫೇಮಸ್ ಸೆಲೆಬ್ರಿಟಿ ಜೋಡಿ ಅಮೀರ್ ಖಾನ್ ಮತ್ತೆ ಕಿರಣ್ ರಾವ್ ತಮ್ಮ ವಿಚ್ಛೇದನೆಯನ್ನು ಘೋಷಿಸಿದ್ದಾರೆ. ಅಮೀರ್‌ಖಾನ್ ಮತ್ತು ಅವರ ಪತ್ನಿ ಕಿರಣ್‌ರಾವ್ ಜಂಟಿ ಹೇಳಿಕೆಯಲ್ಲಿ ಮದುವೆಯಾದ 15 ವರ್ಷಗಳ ನಂತರ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

ಲಸಿಕೆಗೆ ಸ್ಪೋರ್ಟ್ಸ್ ಬ್ರಾ ಧರಿಸಿದ ಮಲೈಕಾ ಸಿಕ್ಕಾಪಟ್ಟೆ ಟ್ರೋಲ್ !...

ಬಾಲಿವುಡ್‌ನ ಮಾಡೆಲ್‌ ಕಮ್‌ ನಟಿ ಮಲೈಕಾ ಅರೋರಾ ಸದಾ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಮಲೈಕಾ ಎರಡನೇ ಡೋಸ್‌ ಕೋವಿಡ್‌ ವ್ಯಾಕ್ಸಿನೇಷನ್‌ ತೆಗೆದುಕೊಂಡ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಧರಿಸಿದ್ದ ಡ್ರೆಸ್‌ ನೆಟ್ಟಿಗರ ಅಸಮಾಧಾನಕ್ಕೆ ಗುರಿಯಾಗಿದೆ.ವ್ಯಾಕ್ಸಿನೇಷನ್‌ಗೆ ಸ್ಪೋರ್ಟ್ಸ್ ಬ್ರಾ ಧರಿಸಿದ್ದ ಮಲೈಕಾರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ.  

ಗೂಗಲ್‌ನಿಂದ ಹೊಸ ಐಟಿ ನಿಯಮ ಪಾಲನೆ : 59 ಸಾವಿರ ಲಿಂಕ್‌ಗೆ ಕೊಕ್‌...

ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಹೊಸದಾಗಿ ಜಾರಿ ಮಾಡಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ, ಅಮೆರಿಕ ಮೂಲದ ಗೂಗಲ್‌ ಮತ್ತು ಬೆಂಗಳೂರು ಮೂಲದ ಕೂ ತಮ್ಮ ಮೊದಲ ಪಾಲನಾ ವರದಿಯನ್ನು ಪ್ರಕಟಿಸಿವೆ.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಶೀಘ್ರ ಮಾರುಕಟ್ಟೆಗೆ...

ಬೆಂಗಳೂರು ಮೂಲದ ಓಲಾ ಸಂಸ್ಥೆ ತನ್ನ ಎಲೆಕ್ಟಿಕ್‌ ಸ್ಕೂಟರ್‌ ಅನ್ನು ಅನಾವರಣಗೊಳಿಸಿದೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಬಿಡುಗಡೆಗೂ ಮುನ್ನ ಕಂಪನಿಯ ಸಿಇಒ ಭವಿಷ್‌ ಅಗವಾಲ್‌ ಅವರು ಸ್ಕೂಟರ್‌ ಅನ್ನು ಚಲಾಯಿಸುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ.

ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳವ ಸಲುವಾಗಿ ತಮಿಳುನಾಡು ಸಿಎಂಗೆ ಬಿಎಸ್‌ವೈ ಪತ್ರ...

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಕೆದಾಟು ಕುಡಿಯುವ ನೀರು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಪತ್ರ ಬರೆದಿದ್ದಾರೆ.

click me!