ಕಳೆದ ತಿಂಗಳವಷ್ಟೇ ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ರೆನೋ 5 ಪ್ರೋ 5ಜಿ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಈಗ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಒಪ್ಪೋ ರೆನೋ ಫೋನ್ ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಜತೆಗೆ ಎಂದಿನಂತೆ ಅದ್ಭುತ ಕ್ಯಾಮರಾ ಇದ್ದೇ ಇದೆ.
ಅದ್ಭುತವಾದ ಸೆಲ್ಫಿ ಕ್ಯಾಮೆರಾಗಳ ಮೂಲಕವೇ ಬಳಕೆದಾರರನ್ನು ಸೆಳೆದಿದ್ದ ಒಪ್ಪೋ ಇದೀಗ ರೆನೋ 5 ಪ್ರೋ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಳೆದ ತಿಂಗಳವೇ ಈ ಫೋನ್ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. .
ಈ ಫೋನ್‌ನ ಹೋಲ್ ಪಂಚ್ ಡಿಸ್‌ಪ್ಲೇ ವಿನ್ಯಾಸ ಮತ್ತು ಕರ್ವ್ಡ್ ಅಂಚುಗಳೊಂದಿಗೆ ಬರುತ್ತದೆ. 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಈ ಫೋನ್, ಮೀಡಿಯಾ ಟೆಕ್ ಡಿಮ್ನೆಸಿಟಿ ಪ್ರೊಸೆಸರ್ ಒಳಗೊಂಡಿದೆ. ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ರೆನೋ 4 ಪ್ರೋ ಸ್ಮಾರ್ಟ್‌ಫೋನ್‌ನ ಮುಂದುವರಿದ ಆವೃತ್ತಿಯೇ ಈ ರೆನೋ 5 ಪ್ರೋ 5ಜಿ ಫೋನ್ ಆಗಿದೆ. ವಿಶೇಷ ಏನೆಂದರೆ, ಕಂಪನಿ ಈ ರೆನೋ ಪ್ರೋ 5ಜಿ ಫೋನ್ ಜತೆಗೆ Oppo Enco X ಇಯರ್ ಬಡ್ ಬಿಡುಗಡೆ ಮಾಡಿದೆ.
undefined
44,900 ರೂ. ಖರೀದಿಸಿ 5000 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಿರಿ
ಶೇ.10ರಷ್ಟು ಕ್ಯಾಶ್ ಬ್ಯಾಕ್
ಈಗಾಗಲೇ ಈ ಫೋನ್‌ನ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಕಾರ್ಡುಗಳನ್ನು ಬಳಸಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಶೇ.10ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಹಾಗೆಯೇ, ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್ ಕಾರ್ಡುಗಳ ಮೂಲಕ ಖರೀದಿಸಿದರೂ 2,500 ಕ್ಯಾಶ್ ಬ್ಯಾಕ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಪೇಟಿಎಂ ಮೂಲಕ ಖರೀದಿಸುವ ಗ್ರಾಹಕರಿಗೆ ಅವರ ಪೇಟಿಎಂ ವ್ಯಾಲೆಟ್‌ನಲ್ಲಿ ತಕ್ಷಣವೇ ಶೇ.11ರಷ್ಟು ಕ್ಯಾಶ್‌ಬ್ಯಾಕ್ ಬಂದು ಬೀಳಲಿದೆ. ಇಷ್ಟು ಮಾತ್ರವಲ್ಲದೇ ಒಪ್ಪೋ 120 ಜಿಬಿ ಕ್ಲೌಡ್ ಸೇವೆಯನ್ನು ಒಂದು ವರ್ಷದವರೆಗೂ ನೀಡಲಿದೆ.
ಮಾರಾಟ ಎಲ್ಲಿ?
ಫ್ಲಿಪ್‌ಕಾರ್ಟ್, ಒಪ್ಪೋ ಇಡಿಂಯಾ ಇ ಸ್ಟೋರ್ ಆನ್‌ಲೈನ್ ಜಾಲತಾಣಗಳಲ್ಲಿ ಮಾತ್ರವಲ್ಲದೇ, ಬಿಗ್ ಸಿ, ಕ್ರೋಮಾ, ರಿಲಯನ್ಸ್ ಡಿಜಿಟಲ್, ಸಂಗೀತಾ ಆಫ್‌ಲೈನ್ ಸ್ಟೋರ್‌ಗಳಲ್ಲೂ ಈ ಫೋನ್ ಜನವರಿ 22ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.
ಬೆಲೆ ಎಷ್ಟಿರಬಹುದು?
ಭಾರತದಲ್ಲಿ ಒಪ್ಪೋ ರೆನೋ 5 ಪ್ರೋ 5ಜಿ ಸ್ಮಾರ್ಟ್‌ಫೋನ್ ಬೆಲೆ 35,990 ರೂಪಾಯಿಯಾಗಿದೆ. 8ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ. ಅಸ್ಟ್ರಾಲ್ ಬ್ಲೂ ಮತ್ತು ಸ್ಟ್ರಾರೀ ಬ್ಲ್ಯಾಕ್ ಬಣ್ಣಗಳಲ್ಲಿ ಇದು ಮಾರಾಟಕ್ಕೆ ಲಭ್ಯವಿದೆ.
3,999 ರೂ. ಏರ್ಟೆಲ್ ಎಕ್ಸ್‌ಟ್ರೀಮ್ ಪ್ಲ್ಯಾನ್‌ನಲ್ಲಿ 1 ಜಿಬಿಪಿಎಸ್ ವೈ ಫೈ ರೂಟರ್!
ಒಪ್ಪೋ ಎನ್ಕೋ ಎಕ್ಸ್ ಇಯರ್ ಬೆಲೆ 9,990 ರೂಪಾಯಿಯಾಗಿದ್ದು ಕಪ್ಪು ಮತ್ತು ಬಿಳಿಯ ಬಣ್ಣಗಳ್ಲಿಲ ಮಾರಾಟಕ್ಕೆ ಸಿಗಲಿದೆ. ಜನವರಿ 22ರಿಂದ ಈ ಇಯರ್ ಬಡ್ ಮಾರಾಟ ಆರಂಭವಾಗಲಿದೆ.
ಒಪ್ಪೋ 5 ಪ್ರೋ 5ಜಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಒಎಸ್‌ಗೆ ಸಪೋರ್ಟ್ ಮಾಡುತ್ತದೆ. ಒಎಲ್ಇಡಿ ಡಿಸ್‌ಪ್ಲೇಯೊಂದಿಗೆ ಈ ಫೋನ್ 6.55 ಇಂಚ್ ಫುಲ್ ಎಚ್ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಈ ಫೋನ್‌ನಲ್ಲಿ ಕ್ವಾಡ್ ರಿಯರ್ ಕ್ಯಾಮಾರಾ ಸೆಟ್‌ಅಪ್ ಇದೆ. ಅಂದರೆ, 64 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮರಾ ಇದ್ದರೆ, ಸೆಕೆಂಡರಿ ಕ್ಯಾಮರಾ 8 ಮೆಗಾ ಪಿಕ್ಸೆಲ್‌ನದ್ದಾಗಿದೆ. ಈ ಸೆಟ್‌ಅಪ್‌ನಲ್ಲಿ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2 ಮೆಗಾ ಪಿಕ್ಸೆಲ್ ಮೋನೋಕ್ರೋಮ್ ಸೆನ್ಸರ್‌ಗಳಿವೆ. ಇನ್ನು ಸೆಲ್ಫಿಗಳಿಗಾಗಿ ಈ ಫೋನ್‌ನಲ್ ಫ್ರಂಟ್‌ನಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮರಾವನ್ನು ಕಂಪನಿ ನೀಡಿದೆ.
ಕೈಗೆಟುಕುವ ದರದ ಒನ್‌ಪ್ಲಸ್ 9 ಲೈಟ್ ಸ್ಮಾರ್ಟ್‌ಫೋನ್ ಶೀಘ್ರ ಮಾರುಕಟ್ಟೆಗೆ
ಸ್ಯಾಮ್ಸಂಗ್, ಒನ್‌ಪ್ಲಸ್, ಶಿಯೋಮಿಯಂಥ ಸ್ಮಾರ್ಟ್ ಫೋನ್ ಬ್ರಾಂಡ್‌ಗಲಿಗೆ ಈ ಒಪ್ಪೋ ರೆನೋ ಮೂಲಕ ತೀವ್ರ ಪೈಪೋಟಿ ನೀಡುತ್ತಿದೆ. ಅತ್ಯುತ್ತಮ ಕ್ಯಾಮರಾಗಳಿಗೆ ಫೇಮಸ್ಸಾಗಿರುವ ಒಪ್ಪೋ ಈ ಬಾರಿ ಅನೇಕ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.