ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ರೀಚಾರ್ಜ್ ಮಾಡಿದರೆ ಮಾತ್ರ ಈ ಆಫರ್ ಲಭ್ಯವಾಗುತ್ತದೆ.
ನವದೆಹಲಿ (ನ.13): ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸುತ್ತಿರುವ ಬಿಎಸ್ಎನ್ಎಲ್ ಮತ್ತೊಂದು ಅಚ್ಚರಿಯನ್ನು ಮುಂದಿಟ್ಟಿದೆ. ಬಿಎಸ್ಎನ್ಎಲ್‌ನ ಸ್ವಂತ ಸೆಲ್ಫ್-ಕೇರ್ ಆ್ಯಪ್ ಮೂಲಕ ರೀಚಾರ್ಜ್ ಮಾಡಿದಾಗ 3 ಜಿಬಿ ಹೆಚ್ಚುವರಿ ಡೇಟಾವನ್ನು ಪಡೆಯಬಹುದು ಎಂದು ತಿಳಿಸಿದೆ. ಬಿಎಸ್ಎನ್ಎಲ್ ₹599 ರೀಚಾರ್ಜ್ ಪ್ಲಾನ್‌ಗೆ ಈ ಆಫರ್ ಘೋಷಿಸಿದೆ. 84 ದಿನಗಳ ವ್ಯಾಲಿಡಿಟಿ ಇದ್ದು, ಲೋಕಲ್ ಮತ್ತು ಎಸ್‌ಟಿಡಿ ಅನ್‌ಲಿಮಿಟೆಡ್ ವಾಯ್ಸ್ ಕರೆಗಳು, ದಿನಕ್ಕೆ 3 ಜಿಬಿ ಡೇಟಾ ಮತ್ತು 100 ಉಚಿತ SMS ಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಗೇಮ್‌ಆನ್ ಸರ್ವೀಸ್, ಸಿಂಗ್+ ಪಿಆರ್‌ಬಿಟಿ+ ಮತ್ತು ಆನ್ಟ್ರೋಟೆಲ್ ಸಹ ಲಭ್ಯವಾಗಲಿದೆ.
ಈ ಎಲ್ಲದರ ಜೊತೆಗೆ 3 ಜಿಬಿ ಹೆಚ್ಚುವರಿ ಡೇಟಾವನ್ನು ಅರ್ಹ ಗ್ರಾಹಕರು ಪಡೆಯಬಹುದು. ಆದರೆ ಈ ಆಫರ್ ಪಡೆಯಲು ಬಿಎಸ್ಎನ್ಎಲ್‌ನ ಸೆಲ್ಫ್-ಕೇರ್ ಆ್ಯಪ್ ಮೂಲಕ ರೀಚಾರ್ಜ್ ಮಾಡಬೇಕು. ಇತರ ಪ್ಲಾಟ್‌ಫಾರ್ಮ್‌ಗಳ ಮೂಲಕ ರೀಚಾರ್ಜ್ ಮಾಡಿದರೆ ಹೆಚ್ಚುವರಿ ಡೇಟಾ ಆಫರ್ ಸಿಗುವುದಿಲ್ಲ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ ಬೇಗ ರೀಚಾರ್ಜ್ ಮಾಡಿ 3 ಜಿಬಿ ಹೆಚ್ಚುವರಿ ಡೇಟಾವನ್ನು ಆನಂದಿಸಿ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.
3 ರೂ.ಗಿಂತಲೂ ಕಡಿಮೆ ದರದಲ್ಲಿ 300 ದಿನ ಆಕ್ಟಿವ್ ಆಗಿರುತ್ತೆ ಸಿಮ್; ಬಿಎಸ್‌ಎನ್‌ಎಲ್‌ನಿಂದ ಧಮಾಕಾ ಆಫರ್
ಬಿಎಸ್ಎನ್ಎಲ್ ದೇಶದಲ್ಲಿ 4G ನೆಟ್‌ವರ್ಕ್ ವಿಸ್ತರಿಸುತ್ತಿರುವಾಗಲೇ ಈ ಹೊಸ ರೀಚಾರ್ಜ್ ಆಫರ್ ಘೋಷಿಸಿದೆ. ದೇಶದಲ್ಲಿ ಬಿಎಸ್ಎನ್ಎಲ್ 4G ಟವರ್‌ಗಳ ಸಂಖ್ಯೆ 50,000 ದಾಟಿದೆ. 4G ನೆಟ್‌ವರ್ಕ್ ಆರಂಭಿಸಿದ ಕೊನೆಯ ಭಾರತೀಯ ಟೆಲಿಕಾಂ ಸೇವಾ ಪೂರೈಕೆದಾರ ಬಿಎಸ್ಎನ್ಎಲ್. ಖಾಸಗಿ ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡಿದ ನಂತರ ಹೊಸ ಗ್ರಾಹಕರನ್ನು ಆಕರ್ಷಿಸಲು ಬಿಎಸ್ಎನ್ಎಲ್ ಶ್ರಮಿಸುತ್ತಿದೆ. 4G ಪೂರ್ಣಗೊಂಡ ನಂತರ 5G ನೆಟ್‌ವರ್ಕ್ ಸ್ಥಾಪನೆಯನ್ನೂ ಬಿಎಸ್ಎನ್ಎಲ್ ಆರಂಭಿಸಲಿದೆ.
BSNLನಿಂದ ಕೈಗೆಟುಕುವ ದರದ ವಾರ್ಷಿಕ ಪ್ಲಾನ್,ತಿಂಗಳಿಗೆ ಕೇವಲ 126 ರೂಪಾಯಿ!
Explore More with Extra Data! Recharge on the and get 3GB extra data with ₹599 voucher. pic.twitter.com/J5c5DVKCIV
— BSNL India (@BSNLCorporate)